Skip to main content
ವಿಡಿಯೋ
webstory

ರಾಷ್ಟ್ರೀಯ ರೈತರ ದಿನ - ಪ್ರಕೃತಿಯ ಮಕ್ಕಳು - ದೇಶದ ಅನ್ನದಾತರಿಗೊಂದು ನಮನ

By Shravanthi R
ರಾಷ್ಟ್ರೀಯ ರೈತರ ದಿನ - ಪ್ರಕೃತಿಯ ಮಕ್ಕಳು - ದೇಶದ ಅನ್ನದಾತರಿಗೊಂದು ನಮನ

ಪ್ರತೀ ವರ್ಷ ಡಿಸೆಂಬರ್‌ 23 ರಂದು ಅನ್ನದಾತರೂ, ಆರ್ಥಿಕ ಸಹಕಾರರು ಆದ ರೈತರಿಗೆ ಅರ್ಪಿತವಾದ ದಿನವಾಗಿ ʻರಾಷ್ಟ್ರೀಯ ರೈತರ ದಿನʼವನ್ನ ಆಚರಿಸಲಾಗುತ್ತದೆ.

ಪ್ರಕೃತಿಯ ಮಡಿಲಲ್ಲಿ ನಿಂದು, ಬೆಂದು ದೇಶಕ್ಕೆ ಹಾಗೂ ಮಾನವ ಜಗತ್ತಿಗೆ ಊಟ ಉಣ ಬಡಿಸುವ ರೈತರಿಗೆ ಗೌರವ ಸಲ್ಲಿಕೆಯಾಗಿರುವ ಈ ದಿನ ಅವರ ಅಪಾರ ಪರಿಶ್ರಮಕ್ಕೆ ಧನ್ಯವಾದ ತಿಳಿಸುವುದು ಕಡಿಮೆಯಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ದೇಶದ ಬೆನ್ನೆಲುಬಾಗಿರುವ ರೈತರು ರಾಷ್ಟ್ರದ ಅಭಿವೃದ್ದಿಗೆ ಶ್ರಮಿಸುತ್ತಾರೆ. ಇಂದು ಭಾರತದ ಐದನೇ ಪ್ರಧಾನಮಂತ್ರಿ ಆಗಿದ್ದ ಚೌದರಿ ಚರಣ್‌ ಸಿಂಗ್‌ ಅವರ ಜನ್ಮದಿನವಾಗಿದೆ. ಅವರು ಅಲ್ಪಾವಧಿಗೆ ದೇಶದ ಪ್ರಧಾನಿ ಹುದ್ದೆಯಲ್ಲಿದ್ದರೂ, ಅವರ ಅವಧಿಯಲ್ಲಿ ರೈತರ ಶ್ರೇಯೋಭಿವೃದ್ದಿಗೆ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳ ಕೊಡುಗೆ ನೀಡಿದ್ದರು. Pampers Premium Care Pant Style Baby Diapers | Medium (M size) | 54 Count | Voted India's Softest | All-in-1 with 360 Cottony Softness Diapers | 7-12kg

ಇದರ ಸ್ಮರಣಾರ್ಥವಾಗಿ 2001 ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಈ ದಿನವು ಮಹತ್ವಪೂರ್ಣವಾಗಿ ಆಚರಣೆಗೆ ಬಂದಿದೆ. ಪ್ರತೀ ರೈತನು ಹಲವು ಸವಾಲುಗಳ ನಡುವೆ ನೇಗಿಲ ಹಿಡಿದು ನಾವು ತಿನ್ನುವ ಪ್ರತಿಯೊಂದು ಅಗಳಿಗೂ ಕಾರಣೀಭೂತನಾಗಿದ್ದಾನೆ. ಇದಕ್ಕಾಗಿ ಕೃತಜ್ಞ ಮತ್ತು ಜವಾಬ್ದಾರರಾಗುವುದು ಈ ದಿನದ ವಿಷೇಶ ಚಿಂತನೆಯಾಗಿದೆ. ಇದನ್ನೂ ಓದಿ: PPF ಗಿಂತಲೂ VPF ಲಾಭದಾಯಕ - ನೌಕರರ ಭವಿಷ್ಯದ ಹೂಡಿಕೆಗೆ ಉತ್ತಮ ಮಾರ್ಗವೇ!?