Skip to main content
ವಿಡಿಯೋ
business

ಷೇರುಮಾರುಕಟ್ಟೆಯಲ್ಲಿ ʻಮೀಶೋʼ ಫ್ಲಿಪ್ಸ್‌ - ಕಾರಣವೇನು!?

By Shravanthi R
ಷೇರುಮಾರುಕಟ್ಟೆಯಲ್ಲಿ ʻಮೀಶೋʼ ಫ್ಲಿಪ್ಸ್‌ - ಕಾರಣವೇನು!?

ಮೀಶೋ ಷೇರುಗಳು ಆರಂಭಿಕ ಯಶಸ್ಸನ್ನು ತೋರುತ್ತಲೇ, ಇದೀಗ ಅದರ ಷೇರು ಮೌಲ್ಯವು ಹಿನ್ನಡೆ ಅನುಭವಿಸುತ್ತಿದೆ. ಈ ಬಗ್ಗೆ ಸಣ್ಣ ವಿಶ್ಲೇಷಣಾತ್ಮಕ ವರದಿ ಇದಾಗಿದೆ.

ಇತ್ತೀಚೆಗೆ, ಹೂಡಿಕೆದಾರರಿಗೆ ಲಾಭದಾಯಕವಾಗಿ ಕಂಡಿದ್ದ ಮೀಶೋ ಶೇರು ಮೌಲ್ಯಗಳು ಇಂದು ಕುಸಿತ ಕಂಡಿದೆ. ಇ-ಕಾಮರ್ಸ್‌ ದೈತ್ಯ ಮೀಶೋದ ಷೇರು ಹಿನ್ನಡೆಗೆ ಕಾರಣವೇನಿರಬಹುದೆಂದು ಇಲ್ಲಿ ಅಂದಾಜಿಸಲಾಗಿದೆ.

 

ಕೆಲ ದಿನಗಳ ಹಿಂದಷ್ಟೇ ಅಬ್ಬರದ ಏರಿಕೆ ಕಂಡಿದ್ದ ಮೀಶೋ ಷೇರು ವಹಿವಾಟು ಇದೀಗ ಶೇ. 21 ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಮಾರುಕಟ್ಟಿಯಲ್ಲಿ ದುಪ್ಪಟ್ಟಾಗಿದ್ದ ಐಪಿಒ ವೂ ಅಲ್ಪಾವಧಿಯಲ್ಲೇ ಇಳಿಕೆಯಾಗುವ ಮೂಲಕ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ. Pampers Active Baby Taped Diapers, Medium size diapers, (6-11kg) 90 count,taped style custom fit

ವರದಿ ವಿಶ್ಲೇಷಣೆಯೊಂದರ ಪ್ರಕಾರ, ಈ ಬೆಳವಣಿಗೆಗೆ ಪ್ರಮುಖ ಕಾರಣಗಳು ಇಂತಿವೆ:

  • ಪ್ರಾಫಿಟ್‌ ಬುಕ್ಕಿಂಗ್‌ (Profit Booking) - ಐಪಿಒ ನಂತರ, ಮೀಶೋ ಷೇರುಗಳು ಅತಿ ವೇಗವಾಗಿ ಏರಿಕೆ ಕಂಡು, ಹೂಡಿಕೆದಾರರನ್ನು ಆಕರ್ಷಿಸಿದವು. ಇದೀಗ ಅದನ್ನು ಮಾರಿ ಲಾಭ ಪಡೆಯಲು ಪ್ರಾಫಿಟ್‌ ಬುಕ್ಕಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ

  • ಮೌಲ್ಯಮಾಪನದ ಆತಂಕ (Valuation Concern) - ಕಂಪನಿಯ ಷೇರುಗಳ ನೈಜ ಮೌಲ್ಯವು ಅತಿಯಾದ ಏರಿಕೆಯಾಗಿತ್ತು (ಓವರ್‌ ವ್ಯಾಲ್ಯೂಡ್‌) ಇದನ್ನು ಸಮರ್ಥಿಸಿಕೊಳ್ಳುವಲ್ಲಿ ಕಂಪನಿಯ ಬೆಳವಣಿಗೆ ಬಗ್ಗೆ ಹೂಡಿಕೆದಾರರು ಹಿಂಜರಿದಿದ್ದಾರೆ ಎನ್ನಲಾಗಿದೆ.

  • ಮಾರುಕಟ್ಟೆಯ ಅನಿಶ್ಚಿತತೆಗಳು - ಇದರೊಟ್ಟಿಗೆ, ಕಂಪನಿಗಿರುವ ಸ್ಪರ್ಧಾತ್ಮಕ ಬೆಳವಣಿಗೆಗಳು (ಅಮೆಜಾನ್‌,‌ ಫ್ಲಿಪ್‌ಕಾರ್ಟ್‌), ತಾಂತ್ರಿಕ ಏರಿಳಿತಗಳು, ಮಾರುಕಟ್ಟೆ ಚಂಚಲತೆಯು ಮೀಶೋ ಷೇರು ಮೌಲ್ಯಗಳ ಮೇಲೆ ಪ್ರಭಾವ ಬೀರಿದೆ ಎನ್ನಲಾಗಿದೆ. 

ಪ್ರಸ್ತುತ ಮೀಶೋ ಷೇರುಗಳು ಗರಿಷ್ಠ ಮಟ್ಟದಿಂದ ಕೆಳಗಿಳಿದಿದ್ದು, ಮಾರುಕಟ್ಟೆಯ ನಹಜ ಕರೆಕ್ಷನ್‌ ಹಂತದ ಸ್ಥಿತಿಯಲ್ಲಿದೆ ಎಂದು ತಜ್ಞರು ಸೂಚಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ರೈತರ ದಿನ - ಪ್ರಕೃತಿಯ ಮಕ್ಕಳು - ದೇಶದ ಅನ್ನದಾತರಿಗೊಂದು ನಮನ

ವಿಶೇಷ ಸೂಚನೆ: ಇದು ಮಾಹಿತಿ ಒದಗಿಸುವ ಉದ್ದೇಶದಿಂದ ವರದಿ ಮಾಡಲಾಗಿದ್ದು, ಹೂಡಿಕೆ ಮುನ್ನ ಹಣಕಾಸು/ ಆರ್ಥಿಕ ತಜ್ಞರ ಸಲಹೆ ಪಡೆಯುವುದು ಉತ್ತಮ. ಇದಕ್ಕೆ ಇನ್ಸೈಟ್‌ರಶ್‌ ಜವಬ್ದಾರರಾಗುವುದಿಲ್ಲ.