Skip to main content
ವಿಡಿಯೋ
technology

ವಾಟ್ಸ್ಯಾಪ್‌ ಘೋಸ್ಟ್‌ ಪೇರಿಂಗ್‌ - ಸೈಬರ್‌ ಹಂತಕರ ಮಾಯಾಜಾಲದ ಬಗ್ಗೆ ಸರ್ಕಾರದ ಎಚ್ಚರಿಕೆ!

By Shravanthi R
ವಾಟ್ಸ್ಯಾಪ್‌ ಘೋಸ್ಟ್‌ ಪೇರಿಂಗ್‌ - ಸೈಬರ್‌ ಹಂತಕರ ಮಾಯಾಜಾಲದ ಬಗ್ಗೆ ಸರ್ಕಾರದ ಎಚ್ಚರಿಕೆ!

ಸೈಬರ್‌ ಅಪರಾಧಿಗಳ ಗುರಿಯಾಗಿದ್ದ ಹ್ಯಾಕಿಂಗ್‌, ಡಿಜಿಟಲ್‌ ಅರೆಸ್ಟ್‌ ನಂತರ ಇದೀಗ ಸುದ್ದಿಯಲ್ಲಿದೆ ವಾಟ್ಸ್ಯಾಪ್‌ ಘೋಸ್ಟ್‌ ಪೇರಿಂಗ್‌ ಸ್ಕ್ಯಾಮ್‌.

ವಾಟ್ಸ್ಯಾಪ್‌ ಆನ್‌ಲೈನ್‌ ಸಂವಹನಕ್ಕೆ ಬಹುವಾಗಿ ಬಳಕೆಯಾಗುವ ಮಾ‍ಧ್ಯಮವಾಗಿದೆ. ಇದರಲ್ಲಿ ಡಿವೈಸ್‌ ಲಿಂಕಿಂಗ್‌ ಬಳಸಿಕೊಂಡು ಸೈಬರ್‌ ದಾಳಿ ಮಾಡುವ ಮೂಲಕ ಬಳಕೆದಾರರನ್ನು ವಂಚಿಸಲಾಗುತ್ತದೆ ಎಂದು ವರದಿ ತಿಳಿಸಿದೆ.  

ಇತ್ತೀಚೆಗೆ, ಭಾರತೀಯ ತುರ್ತು ಪ್ರತಿಕ್ರಿಯೆ ತಂಡ ( CERT-In) ಹಾಗೂ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEIT) ಈ ವಿಷಯದ ಬಗ್ಗೆ ತಿಳಿಸಿದೆ. ʻಘೋಸ್ಟ್‌ ಪೇರಿಂಗ್‌ʼ ಎಂಬ ಹೊಸ ಸೈಬರ್‌ ವಂಚನೆಯು ಸುದ್ದಿಜಾಲದಲ್ಲಿದೆ. ಇದು ʻಹಾಯ್‌ ಚೆಕ್‌ ದಿಸ್‌ ಪೋಸ್ಟ್‌ʼ ಎನ್ನುವ ಸಂದೇಶದ ಮೂಲಕ ಆರಂಭವಾಗುತ್ತದೆ. ನಿಮ್ಮ ವಾಟ್ಯ್ಸಾಪ್‌ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಹೈಜಾಕ್‌ ಮಾಡುತ್ತಾರೆ ಎನ್ನಲಾಗಿದೆ. 

ವಂಚಕರು ನಿಮ್ಮ ವಾಟ್ಸ್ಯಾಪ್‌ ಖಾತೆ ಡಿವೈಸ್‌ ಲಿಂಕ್ಡ್‌ ಫೀಚರ್‌ ಮೂಲಕ ಖಾತೆ ನಿಯಂತ್ರಣ ಪಡೆದುಕೊಳ್ಳುತ್ತಾರೆ. ಇದರಿಂದ ನಕಲಿ ಖಾತೆಯ ವೆಬ್‌ಸೈಟ್‌ ಅಥವಾ ಒಟಿಪಿ ಸ್ಕ್ಯಾನಿಂಗ್‌ ಇಲ್ಲದೇ ನಿಮ್ಮ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ನಿಂದ ಹ್ಯಾಕರ್‌ನ ಸಾಧನಕ್ಕೆ ಮಾಹಿತಿ ಸಂಪರ್ಕಗೊಳ್ಳುತ್ತದೆ ಎನ್ನಲಾಗಿದೆ. ಒಮ್ಮೆ ಜೋಡಣೆಯಾದ ನಂತರ, ಬಳಕೆದಾರರು ತಮ್ಮ ಖಾತೆಯಿಂದ ಲಾಕ್‌ಔಟ್‌ ಆಗುತ್ತಾರೆ ಎಂದು ತಿಳಿಸಲಾಗಿದೆ. OnePlus 15 | 12GB+256GB | Sand Storm | India's First Snapdragon® 8 Elite Gen 5 | 7300mAh Battery | Personalised AI | Game-Changing 165Hz Display | Triple 50MP Camera with 4K 120fps Dolby Vision

ಈ ಬಗ್ಗೆ ವಾಟ್ಸ್ಯಾಪ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಘೋಸ್ಟ್‌ ಪೇರಿಂಗ್‌ನಂತಹ ಸೈಬರ್‌ ಅಟ್ಯಾಕ್‌ನಿಂದ ತಪ್ಪಿಸಿಕೊಳ್ಳಲು, ಎಚ್ಚೆತ್ತು ಮೊದಲು ಬಂದ ಅಪರಿಚಿತ, ಅನುಮಾನಾಸ್ಪದ ಸಂದೇಶಗಳ ಕ್ಲಿಕ್‌ ಮಾಡದಂತೆ ತಿಳಿಸಲಾಗಿದೆ. ಅಪರಿಚಿತ ಸಾಧನಗಳು, ಲಿಂಕ್ಡ್‌ ಡಿವೈಸ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ ಬಳಕೆ ಮಾಡಿ ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ʻಮೀಶೋʼ ಫ್ಲಿಪ್ಸ್‌ - ಕಾರಣವೇನು!?