Skip to main content
ವಿಡಿಯೋ
general

ಭಾರಿ ಬೆಲೆ ಏರಿಕೆ ಕಂಡ ವೈಟ್‌ ಮೆಟಲ್‌ - ಕೆ.ಜಿ ಗೆ 2 ಲಕ್ಷ+ ರೂ ದಾಟಿದ ರಜತ ಮೌಲ್ಯ!

By Shravanthi R
ಭಾರಿ ಬೆಲೆ ಏರಿಕೆ ಕಂಡ ವೈಟ್‌ ಮೆಟಲ್‌ - ಕೆ.ಜಿ ಗೆ 2 ಲಕ್ಷ+ ರೂ ದಾಟಿದ ರಜತ ಮೌಲ್ಯ!

ಆರಂಭಿಕ ಡಿಸೆಂಬರ್‌ ತಿಂಗಳಿನಿಂದಲೂ ಚಿನ್ನ ಮತ್ತು ಬೆಳ್ಳಿ ಆಭರಣ ಮೌಲ್ಯಗಳು ನಿರಂತರ ಬೆಲೆ ಏರಿಳಿತಗಳು ಕಂಡುಬಂದಿದ್ದು, ಇದೀಗ ದಾಖಲೆಯ ಬೆಲೆ ಏರಿಕೆ ಕಂಡಿದೆ ಎಂದು ವರದಿಯು ವಿಶ್ಲೇಷಿಸಿದೆ.

ಹಳದಿ ಲೋಹ ಚಿನ್ನದಂತೆಯೇ, ಬೆಳ್ಳಿ ಧಾರಣೆಯೂ ನಿರಂತರ ಬೆಲೆ ಏರಿಕೆ ಕಂಡಿದೆ. ದುಬಾರಿಯಾದ ಚಿನ್ನದ ನಂತರ ಬೆಳ್ಳಿ ಪ್ರಿಯರಿಗೂ ಬೆಲೆ ಏರಿಕೆಯಿಂದ ಎಲ್ಲಿಲ್ಲದ ಬೇಡಿಕೆ (ಹೂಡಿಕೆ ದೃಷ್ಟಿಯಿಂದ) ಹೆಚ್ಚಾಗಿದೆ ಎಂದು ವರ್ತಕರು ಅಭಿಪ್ರಾಯ ಪಟ್ಟಿದ್ದಾರೆ. 

ನಿರಂತರ ಬೆಲೆ ಏರಿಕೆಯಿಂದ ಚಿನ್ನ ಹಾಗೂ ಬೆಳ್ಳಿ ಲೋಹಗಳು ಸಾರ್ವಕಾಲಿಕ ದಾಖಲೆ ಬರೆದಿದೆ. ಚಿನ್ನಕ್ಕೆ ಪೈಪೋಟಿ ನೀಡುವಂತೆ ಬೆಳ್ಳಿ ಧಾರಣೆಯ ಬೆಲೆಯೂ ಗಗನಚುಂಬಿಯಾಗಿದೆ. ಗ್ರಾಹಕರ ಹುಬ್ಬೇರಿಸುವಂತೆ ಮಾಡಿರುವ ಬೆಳ್ಳಿ ಬೆಲೆಯು ಸದ್ಯಕ್ಕೆ ಇಳಿಕೆಯಾಗುವ ಸೂಚನೆಗಳಿಲ್ಲ ಎಂದು ಹೇಳಲಾಗಿದೆ. OnePlus Nord Buds 3 Truly Wireless Bluetooth Earbuds with up to 32dB Active Noise Cancellation, 10mins for 11Hours Fast Charging with Up to 43h Music Playback -Chromatic Blue

ಬೆಳ್ಳಿ ದರವು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 2 ಪಟ್ಟು ಹೆಚ್ಚಾಗಿದ್ದು, ಪ್ರತಿ ಗ್ರಾಂಗೆ 223 ರೂ ಇದೆ. ಪ್ರತಿ 10 ಗ್ರಾಂ ಗೆ 2,230 ರೂ ಆಗಿದ್ದು, ಇದೀಗ ಪ್ರತೀ ಕೆ.ಜಿ ಬೆಳ್ಳಿ ಬೆಲೆಯು 2 ಲಕ್ಷ ರೂ ಗಡಿ ದಾಟಿದೆ ಎಂದು ತಿಳಿಸಲಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆ 2,23,000 ರೂ ತಲುಪಿದೆ. ಇದನ್ನೂ ಓದಿ: ವಾಟ್ಸ್ಯಾಪ್‌ ಘೋಸ್ಟ್‌ ಪೇರಿಂಗ್‌ - ಸೈಬರ್‌ ಹಂತಕರ ಮಾಯಾಜಾಲದ ಬಗ್ಗೆ ಸರ್ಕಾರದ ಎಚ್ಚರಿಕೆ!