ಏಪ್ರಿಲ್ 01, 2026 ರಿಂದ ಅನ್ವಯವಾಗುವ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿಯ ನಿಬಂಧನೆಗಳಡಿ, ಆದಾಯ ತೆರಿಗೆ ಅಧಿಕಾರಿಗಳು ವ್ಯಕ್ತಿಯ ಬ್ಯಾಂಕ್ ಖಾತೆಗಳು, ಇ-ಮೇಲ್ ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ವರದಿಯು ತಿಳಿಸಿದೆ.
ಇದರಿಂದಾಗಿ ಸರ್ಕಾರವು, ಭಾರತದಲ್ಲಿ ಆದಾಯ ತೆರಿಗೆ ಪಾವತಿಸದೇ ವಂಚಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಪ್ರಸ್ತಾವಿತ ಆದಾಯ ತೆರಿಗೆ ಮಸೂದೆ 2025 ರ ಅಡಿಯಲ್ಲಿ, ತೆರಿಗೆ ಅಧಿಕಾರಿಗಳಿಗೆ ಅನುಮಾನಾಸ್ಪದ ತೆರಿಗೆ ವಂಚನೆ ಕಂಡುಬಂದ ಸಂದರ್ಭದಲ್ಲಿ ಕಾನೂನು ಬದ್ದವಾಗಿ ಯಾವುದೇ ಆನ್‌ಲೈನ್ ವ್ಯಾಪಾರ ಮತ್ತು ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ಗಳನ್ನು ಪ್ರವೇಶಿಸಲು ಅಧಿಕಾರವನ್ನು ಹೊಂದಿರುತ್ತಾರೆ.
ಈ ಹೊಸ ಕಾನೂನಿನಿಂದಾಗಿ ತೆರಿಗೆ ಪಾವತಿಗಳ ಹುಡುಕಾಟ ವಿಸ್ತರಣೆ ಹಾಗೂ ಸ್ವತ್ತು ದಾಖಲೆಗಳು, ಡಿಜಿಟಲ್ ನಗದನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಪ್ರಸ್ತುತ ತೆರಿಗೆ ಶೋಧಗಳನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 132 ರ ಅಡಿಯಲ್ಲಿ ನಡೆಸಲಾಗುತ್ತಿದೆ. Redmi A4 5G (Sparkle Purple, 4GB RAM, 128GB Storage) | Segment Largest 6.88in 120Hz | 50MP Dual Camera | 18W Fast Charging | Charger in The Box
ಈ ಸುಧಾರಣೆಯಲ್ಲಿ “ವರ್ಚುಯಲ್ ಡಿಜಿಟಲ್ ಸ್ಪೇಸ್”ಗೆ ಅನುಮತಿಸಲಾಗಿದ್ದು, ಇದರಿಂದ ವ್ಯಕ್ತಿಯ ಬ್ಯಾಂಕ್ ಖಾತೆಗಳು, ಇಮೇಲ್‌ಗಳು, ಡಿಜಿಟಲ್ ವಾಲೆಟ್ಸ್, ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ಗಳು, ಕ್ಲೌಡ್ ಸ್ಟೋರೇಜ್ ಮತ್ತು ಆನ್‌ಲೈನ್ ವ್ಯಾಪಾರ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ, ವಹಿವಾಟು ವೇದಿಕೆಗಳು ಹಾಗೂ ಮತ್ತದರ ಹಣಕಾಸು ಡೇಟಾವನ್ನು ಸಂಗ್ರಹಿಸಲು ಅನುಮತಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಭಾರಿ ಬೆಲೆ ಏರಿಕೆ ಕಂಡ ವೈಟ್ ಮೆಟಲ್ - ಕೆ.ಜಿ ಗೆ 2 ಲಕ್ಷ+ ರೂ ದಾಟಿದ ರಜತ ಮೌಲ್ಯ!