ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಎಲ್‌ಐಸಿಯ ಹೌಸಿಂಗ್ ಫೈನಾನ್ಸ್ ಖುಷಿ ವಿಚಾರ ತಿಳಿಸಿದೆ. ಇದೀಗ ಎಸ್‌ಬಿಐ ಗಿಂತಲೂ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಒದಗಿಸುವುದಾಗಿ ತಿಳಿಸಿದೆ. 825 ಅಥವಾ ಅದಕ್ಕಿಂತಲೂ ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರು ಶೇ. 7.15 ರಷ್ಟು ಬಡ್ಡಿದರದಲ್ಲಿ ಗೃಹಸಾಲ ಪಡೆಯಬಹುದಾಗಿದೆ.
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಹೋಮ್ ಲೋನ್‌ಗೆ ಶೇ. 7.25 ರಷ್ಟು ದರ ನಿಗದಿ ಪಡಿಸಲಾಗಿದೆ. ಆರ್‌ಬಿಐ ರೆಪೋ ದರ ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಎಲ್‌ಐಸಿ ಹೌಸಿಂಗ್ ಫೈನಾನ್ಸ್ (ಎಲ್‌ಐಸಿ ಎಚ್‌ಎಫ್‌ಎಲ್) ಗೃಹ ಸಾಲದ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದು, ಅರ್ಹ ಗ್ರಾಹಕರಿಗೆ 7.15% ರಷ್ಟು ಆರಂಭಿಕ ಬಡ್ಡಿದರವನ್ನು ಘೋಷಿಸಿದೆ. OLEVS Watch for Women Analog Quartz Original Womens Watch Fashion Ultra Thin Minimalist Silicone Strap Waterproof Slim Watches for Ladies
ಯಾವ ಗ್ರಾಹಕರು ತಮ್ಮ ಸಿಬಿಲ್ ಸ್ಕೋರ್ ಎಂದರೆ, ತಮ್ಮ ಸಾಲದ ಶಿಸ್ತಿನ ಇತಿಹಾಸವನ್ನು ಹಾಗೂ ಸಾಲವನ್ನು ಮರುಪಾವತಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುವ ಮೂರು ಅಂಕಿಗಳ ಸಂಖ್ಯೆಯಾಗಿದೆ. ಇದಕ್ಕೆ ಅನುಗುಣವಾಗಿ ವಿವಿಧ ಸ್ಲ್ಯಾಬ್‌ಗಳನ್ನು ಎಲ್‌ಐಸಿಯು ಪ್ರಕಟಿಸಿದೆ. ಇದನ್ನೂ ಓದಿ: ಆದಾಯ ತೆರಿಗೆ 2026: ತೆರಿಗೆ ವಂಚನೆಗೆ ಬ್ರೇಕ್ - ಡಿಜಿಟಲ್ ಹಂತ ತಲುಪಲಿರುವ ಆದಾಯ ತೆರಿಗೆ ಪಾವತಿ ಪರಿಶೀಲನೆ!