Skip to main content
ವಿಡಿಯೋ
general

ಹೂಡಿಕೆ ಆಕರ್ಷಿತ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಈ ಲೋಹದ ಬೇಡಿಕೆ ಅದ್ಯಾವುದು ಗೊತ್ತಾ!?

By Shravanthi R
ಹೂಡಿಕೆ ಆಕರ್ಷಿತ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಈ ಲೋಹದ ಬೇಡಿಕೆ ಅದ್ಯಾವುದು ಗೊತ್ತಾ!?

ಚಿನ್ನ ಹಾಗೂ ಬೆಳ್ಳಿಯ ನಂತರ ಗ್ರಾಹಕರ ಗಮನ ಸೆಳೆಯುತ್ತಿದೆ ತಾಮ್ರ ಲೋಹ. ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆಗಳು ವರ್ಷಾಂತ್ಯಕ್ಕೆ ದಾಖಲೆ ಮಟ್ಟ ತಲುಪಿದ್ದು, EV, ಗ್ರೀನ್ ಎನರ್ಜಿ ಹಾಗೂ AI ಕ್ಷೇತ್ರಗಳಲ್ಲಿ ಇದರ ಬೇಡಿಕೆಯಿರುವ ಕಾರಣ ಎನ್ನಲಾಗುತ್ತಿದೆ.

ವರದಿಯೊಂದು ವಿಶ್ಲೇಷಿಸಿರುವ ಪ್ರಕಾರ, ಲಂಡನ್‌ ಮೆಟಲ್‌ ಎಕ್ಸ್‌ಚೇಂಜ್‌ನಲ್ಲಿ ವರ್ಷದ ಅಂತ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ತಾಮ್ರ ಲೋಹ. ಪ್ರಸ್ತುತ ವರ್ಷದಲ್ಲಿ ತಾಮ್ರದ ಬೆಲೆಗಳು ಸುಮಾರು 40% ರಷ್ಟು ಏರಿಕೆಯಾಗಿದ್ದು, 2009 ರ ನಂತರದ ಅತಿದೊಡ್ಡ ವಾರ್ಷಿಕ ಏರಿಕೆ ಇದಾಗಿದೆ ಎನ್ನಲಾಗಿದೆ. 

ಇಂಧನ ಶಕ್ತಿ ಪರಿವರ್ತನೆ, ಪೂರೈಕೆ ಬಿಗಿತ ಹಾಗೂ ಎಐ ಸಂಬಂಧಿತ ದೀರ್ಘಕಾಲೀನ ಬೇಡಿಕೆ ಹಾಗೂ ದೊಡ್ಡ ಬ್ಯಾಂಕ್‌ಗಳ ಬುಲಿಶ್‌ ( ಹೆಚ್ಚಿನ ನಿರೀಕ್ಷಿತ ಮಟ್ಟ) ಅಂದಾಜಿನ ಪ್ರಕಾರ, ಮುಂದಿನ ವರ್ಷಗಳಲ್ಲಿ ಈ ಲೋಹದ ಬೆಲೆಗಳು ಮತ್ತಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದಾಖಲೆಯ ತಾಮ್ರದ ಬೆಲೆ ಏರಿಕೆಯು ಭಾರತದ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. Amazon Brand - Eden & Ivy Analog Women's Watch (Dial Colored Strap)

ಎಲೆಕ್ಟ್ರಾನಿಕ್‌ ವಾಹನಗಳ ತಯಾರಿಕೆ, ಗ್ರೀನ್‌ ಎನರ್ಜಿ( ಸೋಲಾರ್‌ ಅಂಡ್‌ ವಿಂಡ್‌ ಪವರ್‌) ಹಾಗೂ AI ಡೇಟಾ ಸೆಂಟರ್‌ಗಳಲ್ಲಿ ತಯಾರಿಕಾ ಉತ್ಪನ್ನವಾಗಿ ತಾಮ್ರದ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಚಿನ್ನ, ಬೆಳ್ಳಿಯ ನಂತರ ಮಧ್ಯಮ ವರ್ಗದವರಿಂದ ಹಿಡಿದು ಶ್ರೀಮಂತರವರೆಗೆ ಹೂಡಿಕೆಗೆ ಪುಷ್ಠಿ ನೀಡಿದೆ ಈ ಲೋಹ. ಇದನ್ನೂ ಓದಿ: ಗೃಹಸಾಲ ಬಡ್ಡಿದರ ಇಳಿಕೆ - ಎಲ್‌ಐಸಿಯಿಂದ ಮನೆ ಖರೀದಿದಾರರಿಗೆ ಸಿಹಿ ಸುದ್ದಿ!