Skip to main content
ವಿಡಿಯೋ
1/2
politics

ಕುರ್ಚಿ ಕಾಳಗ: ರಾಹುಲ್ ಗಾಂಧಿ ಮೌನದ ಹಿಂದೆ ಅಡಗಿದೆಯೇ ಸಿದ್ದು ಸಿಂಹಾಸನ, ಡಿಕೆ ಪಟ್ಟದ ಭವಿಷ್ಯ..!

By Sushmitha R
ಕುರ್ಚಿ ಕಾಳಗ: ರಾಹುಲ್ ಗಾಂಧಿ ಮೌನದ ಹಿಂದೆ ಅಡಗಿದೆಯೇ ಸಿದ್ದು ಸಿಂಹಾಸನ, ಡಿಕೆ ಪಟ್ಟದ ಭವಿಷ್ಯ..!

ಕರುನಾಡಿನ 'ಕೈ' ಕೋಟೆಯಲ್ಲಿ ಈಗ ಅಧಿಕಾರದ ಸಮರ ವಿಕೋಪಕ್ಕೆ ಹೋಗಿದೆ.

ಬೆಂಗಳೂರು: ಕರುನಾಡಿನ 'ಕೈ' ಕೋಟೆಯಲ್ಲಿ ಈಗ ಅಧಿಕಾರದ ಸಮರ ವಿಕೋಪಕ್ಕೆ ಹೋಗಿದೆ. ಒಂದು ಕಡೆ 'ಟಗರು' ಖ್ಯಾತಿಯ ಸಿದ್ದರಾಮಯ್ಯ ತಮ್ಮ ಸಿಂಹಾಸನ ಉಳಿಸಿಕೊಳ್ಳಲು ಅಹಿಂದ ಅಸ್ತ್ರ ಬಳಸುತ್ತಿದ್ದರೆ, ಇನ್ನೊಂದೆಡೆ 'ಕನಕಾಧಿಪತಿ' ಡಿ.ಕೆ. ಶಿವಕುಮಾರ್ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಈ ಇಬ್ಬರು ಘಟಾನುಘಟಿಗಳ ನಡುವೆ ರಾಹುಲ್ ಗಾಂಧಿ ವಹಿಸಿರುವ ಮೌನವು ಇಂದ್ರ ಪ್ರಸ್ಥದ (ದೆಹಲಿ) ದೊಡ್ಡ ಮಿಸ್ಟರಿಯಾಗಿ ಪರಿಣಮಿಸಿದೆ. ರಾಹುಲ್ ಗಾಂಧಿ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ 'ಜಾತಿ ಗಣತಿ' ಮತ್ತು 'ಒಬಿಸಿ' ಹಕ್ಕುಗಳ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳಲ್ಲಿ ಸಿದ್ದರಾಮಯ್ಯ ಒಬ್ಬರೇ ಪ್ರಬಲ ಒಬಿಸಿ ನಾಯಕ. idaLia Anarkali Cotton Tunic Kurta for Women

ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಈ ಹಂತದಲ್ಲಿ ಕೆಳಗಿಳಿಸಿದರೆ, ರಾಹುಲ್ ಗಾಂಧಿಯವರ ಒಬಿಸಿ ಪರವಾದ ನಿಲುವಿಗೆ ಧಕ್ಕೆ ಬರಬಹುದು ಎಂಬ ಆತಂಕ ಹೈಕಮಾಂಡ್ ಅನ್ನು ಕಾಡುತ್ತಿದೆ. ಇದೇ ಸಿದ್ದರಾಮಯ್ಯ ಅವರಿಗೆ ಈಗಿರುವ ಬಹುದೊಡ್ಡ ಶ್ರೀರಕ್ಷೆ.ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಮಾತ್ರ ತಮ್ಮ ಪ್ರಯತ್ನವನ್ನು ಸಡಿಲಗೊಳಿಸಿಲ್ಲ.

ಈಗಲೂ ನಾನೇ ಸಿಎಂ, ಮುಂದೆಯೂ ನಾನೇ ಎಂಬ ಸಿದ್ದರಾಮಯ್ಯ ಅವರ ಪುನರಾವರ್ತಿತ ಹೇಳಿಕೆಗಳು ಡಿಕೆಶಿ ಪಾಳಯದಲ್ಲಿ ಅಸಮಾಧಾನ ಮೂಡಿಸಿವೆ. ಬಿಹಾರ ಚುನಾವಣೆ ಮತ್ತು ಇತರೆ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಗಾಳಿ ಜೋರಾಗಿ ಬೀಸುವ ಸಾಧ್ಯತೆ ಇದೆ.ಇದನ್ನು ಓದಿ: ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ..!

ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ರವಾನಿಸುತ್ತಿರುವ 'ಪತ್ರವ್ಯೂಹ' ಮತ್ತು ಶಕ್ತಿ ಪ್ರದರ್ಶನವು ರಾಹುಲ್ ಗಾಂಧಿಯವರ ಅಂಗಳಕ್ಕೆ ಚೆಂಡನ್ನು ಎಸೆದಿದೆ. ಅತ್ತ ಡಿಕೆಶಿ ತಮ್ಮ ಸಂಘಟನಾ ಚಾತುರ್ಯ ಮತ್ತು ನಿಷ್ಠೆಯನ್ನೇ ಬಂಡವಾಳ ಮಾಡಿಕೊಂಡು ಅಗ್ನಿಪರೀಕ್ಷೆಗೆ ಇಳಿದಿದ್ದಾರೆ.

ಹೈಕಮಾಂಡ್ ಸದ್ಯಕ್ಕೆ 'ಯಥಾಸ್ಥಿತಿ' ಕಾಯ್ದುಕೊಂಡಿದ್ದರೂ, ಈ ಆಂತರಿಕ ಕದನವು ಬೀದಿಗೆ ಬರುವ ಮುನ್ನ ರಾಹುಲ್ ಗಾಂಧಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಇದನ್ನು ಓದಿ: ಏರ್ ಪ್ಯೂರಿಫೈಯರ್ ಮೇಲಿನ ಜಿಎಸ್‌ಟಿ ಇಳಿಕೆಗೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ

ಒಟ್ಟಿನಲ್ಲಿ, ಕರ್ನಾಟಕದ ಈ ಕುರ್ಚಿ ಕದನ ಕೇವಲ ಇಬ್ಬರು ನಾಯಕರ ನಡುವಿನ ಹೋರಾಟವಾಗಿ ಉಳಿಯದೆ, ಕಾಂಗ್ರೆಸ್‌ನ ರಾಷ್ಟ್ರೀಯ ಸಿದ್ಧಾಂತ ಮತ್ತು ನಾಯಕತ್ವದ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.ಇದನ್ನು ಓದಿ: ಹೂಡಿಕೆ ಆಕರ್ಷಿತ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಈ ಲೋಹದ ಬೇಡಿಕೆ ಅದ್ಯಾವುದು ಗೊತ್ತಾ!?