ತಂತ್ರಜ್ಞಾನವನ್ನು ನಿಯಮಿತವಾಗಿ ಹಾಗೂ ಮೌಲ್ಯಯುಕ್ತವಾಗಿ ಬಳಕೆ ಮಾಡುವ ಉದ್ದೇಶದಿಂದ Digital Minimalism ವಿಷಯವು ಸಹಕರಿಸುತ್ತದೆ. ಡಿಜಿಟಲ್ ಸಾಧನಗಳು, ಮಾಹಿತಿ ಸಂಚಾರಗಳ ನಡುವಲ್ಲೂ ನಿತ್ಯ ಉಪಕಾರಿಯ ಮಾರ್ಗವಾಗಿ ತಂತ್ರಜ್ಞಾನವನ್ನು ಉಪಯೋಗಿಸುತ್ತಲಿದ್ದೇವೆಯೇ ಎಂದು ಅವಲೋಕಿಸುವುದು ಇದರ ಆಶಯವಾಗಿದೆ.
ಗೊಂದಲಮುಕ್ತವಾಗಿರಿಸಿ
ಪ್ರತಿದಿನವೂ ನೋಟಿಫಿಕೇಶನ್, ಅಕ್ಸೆಸರೀಸ್, ಇಂಟರ್‌ನೆಟ್ ಇನ್‌ವಾಲ್ವ್‌ಮೆಂಟ್‌ಗಳಲ್ಲಿ ಸಮಯ ವ್ಯಯಿಸುವುದನ್ನು ಸಮಯಾನುಸಾರ ಆಯ್ಕೆ ಮಾಡುವ ದಾರಿ ಕಂಡುಕೊಳ್ಳಬೇಕಿದೆ. ಗದ್ದಲದ ಜಗತ್ತಿನಲ್ಲಿ ಸರಳೀಕೃತ ಜೀವನಶೈಲಿಗೆ Digital minimalism ತಂತ್ರಗಳನ್ನು ಅನುಸರಿಸಿ. Sonata Bi Metal Breeze Quartz White Round Dial Women's Watch | Stainless Steel Material | Multi Color Band - SP80120BM01
ಅದೆಂದರೆ:
ಬೆಳಗಿನ ಸಮಯ ಶಾಂತವಾಗಿರುವುದು: ರಾತ್ರಿ ಮಲಗಿ ಎದ್ದ ಕೂಡಲೇ ಮೊಬೈಲ್ ನೋಡುವ ಗೀಳು ಇರುವುದನ್ನು ಬಿಡುವುದು. ಬದಲಾಗಿ, ದೀರ್ಘ ಉಸಿರಾಟ, ಸಂಗೀತ ಆಲಿಸುವುದು, ವಿಶ್ವಾಸದಿಂದ ಮುಗುಳ್ನಗುವುದು.
ಆಫ್‌ಲೈನ್ ಮೋಡ್: ದಿನದ ಆರಂಭದಲ್ಲಿ ಕರೆಗಳನ್ನು ಸ್ವೀಕರಿಸುವ, ಇತರರೊಂದಿಗೆ ಕಿರಿಕಿರಿ ಮಾಡಿಕೊಳ್ಳುವ ಗೋಜಲಿಗೆ ಹೋಗದೇ ಅಲ್ಪ ಸಮಯವಾದರೂ ಯಾವುದೇ ಡಿಜಿಟಲ್ ಗ್ಯಾಡ್ಜೆಟ್ಸ್ ಬಳಸದಿರುವ ಅಭ್ಯಾಸ ಹೊಂದುವುದು
ನೋಟಿಫಿಕೇಶನ್‌ಗಳಿಗೆ ವಿಚಲಿತರಾಗದಿರುವುದು: ನಿಮ್ಮ ಏಕಾಗ್ರತೆ ಕೆಡಿಸುವ ನೋಟಿಫಿಕೇಶನ್‌ಗಳು ಬಂದಾಗ ನಿರ್ಲಕ್ಷಿಸುವುದು. ಯಾವುದಾದರೂ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವೀಕ್ಷಿಸುವಂತೆ ಸಮಯ ಕೊಡುವುದು
ಅನಗತ್ಯ ಸಂದೇಶ, ವಿಡಿಯೋಗಳ ಪೋಸ್ಟ್ ಬೇಡ: ಸಮಯವನ್ನು ಪಾಸ್ ಮಾಡಲು ಬೇಡದ ಸಂದೇಶಗಳನ್ನು ಕಳುಹಿಸುವುದು, ವಿಡಿಯೋಗಳನ್ನು ಹುಡುಕುವುದು, ಹಂಚಿಕೊಳ್ಳುವುದು ವ್ಯಸನದ ದಾರಿಯಾಗಬಹುದು.
ಜೀವನಕ್ಕೆ ಹೆಚ್ಚು ಅರ್ಥ ನೀಡುವ ಚಟುವಟಿಕೆಗಳಿಗೆ ಗಮನ ಕೊಡಿ: ದಿನವೂ ಹರಿದು ಬರುವ ವಿಷಯಗಳ ಪ್ರಹಾರಗಳನ್ನು ಬದಿಗಿರಿಸಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂತೋಷ ನೀಡುವ ಚಟುವಟಿಕೆಗಳನ್ನು ಮಾಡುವುದು. ಅದಕ್ಕಾಗಿ ಸಮಯ ಕೊಡುವುದು ಅಡಿಕ್ಷನ್‌ಗಳಂತಹ ಸಮಸ್ಯೆಗಳಿಂದ ದೂರವಿರಲು ಸಹಾಯಕವಾಗುತ್ತದೆ. ಇದನ್ನೂ ಓದಿ: ಕ್ರಿಸ್‌ಮಸ್ ದಿನದಂದು ಜಾಗತಿಕ ಶಾಂತಿ ಒಪ್ಪಂದಕ್ಕೆ ಪೋಪ್ ಕರೆ: ರಷ್ಯಾದ ನಿರಾಕರಣೆಗೆ ಬೇಸರ
ವಿಶೇಷ ಸೂಚನೆ: ಈ ಲೇಖನವು ಮಾಹಿತಿ ತಿಳಿಸುವ ಉದ್ದೇಶದಿಂದ ಹಂಚಿಕೊಳ್ಳಲಾಗಿದ್ದು, ಇನ್ನಷ್ಟು ಮಾಹಿತಿಗಾಗಿ ಆಪ್ತರ ಸಲಹೆಗಳನ್ನು ಪಡೆಯುವುದು ಉತ್ತಮ ಹಾಗೂ ಇದಕೆ ಇನ್ಸೈಟ್‌ರಶ್ ಜವಾಬ್ದಾರರಾಗಿರುವುದಿಲ್ಲ.