ಶಾಲೆಗಳು, ಶಿಕ್ಷಣ ಸಂಸ್ಥೆಗಳು ನಮಗೆ ಶಿಕ್ಷಣ ಕಲಿಸುತ್ತಿರುವುದು ನಿಜ. ಆದರೆ, ಬದುಕುವುದು ಹೇಗೆ ಅನ್ನುವುದರ ಬದಲಾಗಿ ಹೇಗೆ ಉದ್ಯೋಗ ಪಡೆಯುವುದು ಎನ್ನುವುದರ ಬಗ್ಗೆ ತಾಂತ್ರಿಕವಾಗಿ ಹೇಳಿಕೊಟ್ಟಿವೆ. ಇದಕ್ಕಾಗಿ, ಬದುಕಿನ ಕಲೆಯನ್ನು ನಿರೂಪಿಸುವ ಸಣ್ಣದೊಂದು ಉದಾಹರಣೆ ಇಲ್ಲಿದೆ.
ಒಮ್ಮೆ ಪುಟ್ಟ ಹುಡುಗನು ಹೂವು ಚೆಂದವಾಗಿ ಅರಳಿದ್ದನ್ನು ಕಂಡನು. ಆತ ಅದರ ಸುಂದರತೆಗೆ ಏನು ಕಾರಣವೆಂದು ತನ್ನ ಸ್ನೇಹಿತನನ್ನು ಕೇಳಿದನು. ಆತ ಹೂವಿನ ದಳಗಳಿಂದ ಎಂದು ಉತ್ತರಿಸಿದ. ಅದನ್ನು ಮನಗಂಡ ಹುಡುಗನು ದಿನವೂ ಹೂವಿನ ದಳಕ್ಕೆ ನೀರನ್ನು ಚಿಮುಕಿಸುವ ಮೂಲಕ ಹೂವು ಇನ್ನಷ್ಟು ಸುಂದರತೆ ಪಡೆಯುವುದು ಎಂದು ನಂಬಿದನು.
ಆದರೆ, ಆತನಿಗೆ ಅರಿವಾಗಲಿಲ್ಲ, ಗಿಡಕ್ಕೆ ನೀರೆರೆಯಲು ಹೂವು ಅರಳುತ್ತದೆ ಎಂದು. ಇದೊಂದು ಕಾಲ್ಪನಿಕ ನಿದರ್ಶನವಷ್ಟೇ. ಇದರಂತೆಯೇ ಶಾಲಾ-ಕಾಲೇಜುಗಳು ನಮ್ಮ ಆಂತರಿಕ ಕಲಿಕೆಗೆ ಒತ್ತು ಕೊಡದೆ, ಬಾಹ್ಯ ಜಗತ್ತನ್ನು ಅರ್ಥೈಸಲು ಮುಂದಾಗುತ್ತದೆ. ನಿಜವಾದ ಅರ್ಥ ಬರುವುದು ಬದುಕುವ ದಾರಿಯನ್ನು ಅರಿತುಕೊಂಡಾಗ ಎನ್ನುವುದಕ್ಕೆ ನೈಜ ಉದಾಹರಣೆ ಕೃಷಿಕರು, ಕಾರ್ಮಿಕರು, ಉದ್ಯಮಿಗಳನ್ನು ಗಮನಿಸಿದಾಗ ಗೊತ್ತಾಗುವುದು.
ಅಕ್ಷರ ಕಲಿಕೆಯೇ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲದೇ, ಮನೋಸ್ಥೈರ್ಯ ತುಂಬಬಲ್ಲ ಕೌಶಲಗಳನ್ನು ಕಲಿಯುವುದು ಅವಶ್ಯಕವಾಗಿರುತ್ತದೆ. Sonata Poze Analog Quartz Green Dial Watch for Women
ಜೀವನ ಕೌಶಲಗಳೆಂದರೆ ಯಾವುವು:
ಸಂವಹನ ಮತ್ತು ಮಾನವ ಸಂಬಂಧಗಳು - ಉತ್ತಮ ಭಾಷಾ ಕೌಶಲ, ನಿಕಟವಾದ ಸಂವಹನ ನಿಪುಣತೆ ಹೊಂದಿರುವುದು.
ಹಣಕಾಸು ನಿರ್ವಹಣೆ - ಜೀವನವನ್ನು ಉತ್ತಮವಾಗಿ ನಡೆಸಲು ಆರ್ಥಿಕ ಸಾಕ್ಷರತೆ ಹೊಂದುವುದು.
ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ - ಕಷ್ಟ ಹಾಗೂ ಅನಿಶ್ಚಿತತೆಗಳು ಎದುರಾದಾಗ ಎದೆಗುಂದದೆ ಮುನ್ನುಗ್ಗುವ ಅಚಲ ವಿಶ್ವಾಸ ಹೊಂದುವುದು.
ಸಮಯ ಮತ್ತು ಆರೋಗ್ಯ ನಿರ್ವಹಣೆ - ಶಿಸ್ತಿನ ಸಮಯ ಪಾಲನೆ, ಸಂಯಮ ಹಾಗೂ ಸಮಗ್ರ ಆರೋಗ್ಯದ (ದೈಹಿಕ ಮತ್ತು ಮಾನಸಿಕ) ಕುರಿತಾಗಿ ಕಾಳಜಿ ಹೊಂದುವುದು.
ಸೋಲನ್ನು ಸ್ವೀಕರಿಸುವ ಮನೋಭಾವ - ಎಷ್ಟೇ ಸಾರಿ ಸೋತರೂ ಮತ್ತೆ ಪುಟಿದೇಳುವ ಸಾವಧಾನ, ಸಂಕಲ್ಪ ಮತ್ತು ಪ್ರಯತ್ನವನ್ನು ಪಡುವುದು.
ಪದವಿ ಪ್ರಮಾಣ ಪತ್ರ ಪ್ರಶಸ್ತಿಗಳು ಶಿಕ್ಷಣ ಸಂಸ್ಥೆಗಳು ರೂಪಿಸುವ ಉದ್ಯೋಗಿಗಳಾಗಿರುತ್ತದೆ. ಅದೇ, ಜೀವನ ವೃತ್ತಾಂತವನ್ನು ಕಲಿಸುವ ಪರಿಪೂರ್ಣ ವ್ಯಕ್ತಿಯನ್ನಾಗಿ ಜೀವನ ಕೌಶಲಗಳು ರೂಪಿಸುವುದು. ಇದನ್ನೂ ಓದಿ: Digital Minimalism: ಡಿಜಿಟಲ್ ಜಗತ್ತಿನಲ್ಲಿ ಜೀವನ ಕೇಂದ್ರಿಕೃತ ಆಯ್ಕೆ ಮಾಡುವುದು ಹೇಗೆ!?