Skip to main content
ವಿಡಿಯೋ
lifestyle

Personal Financing: ಆರ್ಥಿಕ ಸ್ಥಿರತೆಗೆ ಸರಳ ಹಾಗೂ ಪರಿಣಾಮಕಾರಿ ಮಾರ್ಗ - 50/30/20 ಸೂತ್ರ!

By Shravanthi R
Personal Financing: ಆರ್ಥಿಕ ಸ್ಥಿರತೆಗೆ ಸರಳ ಹಾಗೂ ಪರಿಣಾಮಕಾರಿ ಮಾರ್ಗ - 50/30/20 ಸೂತ್ರ!

ಹಣಕಾಸು ಶಿಸ್ತು ಎಂಬುದು ನಿಮ್ಮ ಹಣವನ್ನು ಸರಿಯಾಗಿ ನಿಭಾಯಿಸಿಕೊಳ್ಳಲು ಇರುವ ದಾರಿಯಾಗಿದೆ. ಈ ನಿಟ್ಟಿನಲ್ಲಿ 50/30/20 ನಿಯಮವು ಇದಕ್ಕೆ ಪೂರಕವಾಗಿದೆ.

ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಗಳಿಸಿದ ಹಣ ನಮ್ಮ ಖರ್ಚು, ಉಳಿತಾಯ ಹಂಚಿಕೆ ಎನ್ನುವ ಗೊಂದಲಕ್ಕೆ ಸರಳ ಸೂತ್ರ 50/30/20. ಮಾಸಿಕ ಆದಾಯವನ್ನು ಲೆಕ್ಕವಿರಿಸದೇ ದುಂದು ವೆಚ್ಚ ಮಾಡುವ ಭಯವನ್ನು ಈ ಸೂತ್ರವು ನಿಯಂತ್ರಣಕ್ಕೆ ತರುತ್ತದೆ. 

ಪ್ರಸ್ತುತ ವಿದ್ಯಮಾನಗಳಿಗೆ ಅನ್ವಯಿಸುವಂತೆ, ಹಲವು ಸವಾಲುಗಳು, ಅಸ್ಥಿರತೆಗಳ ನಡುವೆ ನಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಸಲುವಾಗಿ, ಮಾಸಿಕ ಆದಾಯದ ಪರಿಕಲ್ಪನೆಯಲ್ಲಿ, 50/30/20 ಎಂಬಂತೆ ಮೂರು ಭಾಗಗಳಾಗಿ ವಿಂಗಡಿಸುವುದು ಇದರ ನಿಯಮವಾಗಿರುತ್ತದೆ.  Sonata Quartz Analog Black Dial Black Leather Strap Watch for Women

ಅವುಗಳೆಂದರೆ:

  1. ಅಗತ್ಯತೆಗಳು - 

ನಮ್ಮ ಆದಾಯದಲ್ಲಿ ಅರ್ಧದಷ್ಟು ಶೇ. 50 ರಷ್ಟು ಭಾಗವನ್ನು ಜೀವನದಲ್ಲಿರುವ ಅಗತ್ಯತೆಗಳಿಗಾಗಿ ಮೀಸಲಿಡಬೇಕು. ಉದಾಹರಣೆಗೆ ಕನಿಷ್ಠ ಸೌಲಭ್ಯಗಳು, ಮನೆಗೆ ಸಂಬಂಧಪಟ್ಟ ಖರ್ಚು-ವೆಚ್ಚಗಳನ್ನು ಮಾತ್ರ ಇದರಲ್ಲಿ ಒಳಗೊಳ್ಳಬೇಕಿರುತ್ತದೆ.

  1. ಆಸೆಗಳು ಅಥವಾ ಇಷ್ಟಗಳು -

ನಮ್ಮ ಜೀವನಶೈಲಿಗೆ ಸಂಬಂಧಿಸಿದ ಖರ್ಚು ಇದಾಗಿದ್ದು, ನಮಗೆ ಸಂತೋಷ ನೀಡುವ ವಿಚಾರಗಳಿಗೆ ಶೇ. 30 ರಷ್ಟು ಮೀಸಲಿಡುವುದು. ಉದಾಹರಣೆಗೆ ಒಳ್ಳೆಯ ಊಟ ಮಾಡಲು, ಸಿನಿಮಾ ನೋಡಲು, ಇನ್ನಿತರೆ ಆಸಕ್ತಿಕರದವು. ಆರ್ಥಿಕ ಬಿಕ್ಕಟ್ಟು ಎದುರಾಗದಿರುವ ರೀತಿಯಲ್ಲಿ ಇದನ್ನು ನಿರ್ವಹಿಸಲಬೇಕಿರುತ್ತದೆ. 

  1. ಉಳಿತಾಯ ಅಥವಾ ಸಾಲ ಮರುಪಾವತಿ -

ಭವಿಷ್ಯದ ಸುರಕ್ಷತೆಗಾಗಿ, ತುರ್ತು ನಿಧಿ ಮುಂದಾಲೋಚನೆಗಳ ವಿಷಯವಾಗಿ, ಶೇ.20 ರಷ್ಟು, ಇದಕ್ಕೆ ಒತ್ತು ನೀಡಬೇಕಿರುತ್ತದೆ. ಸಾಲವನ್ನು ತೀರಿಸುವುದು ಮತ್ತು ಹೂಡಿಕೆಗಳಂತ ಯೋಜನೆಗಳಿಗೆ ಇದನ್ನು ಮೀಸಲಿಡುವುದು.

ಇವತ್ತಿನ ಡಿಜಿಟಲ್‌ ಹಾಗೂ ತುರ್ತು ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ, ಎಲ್ಲಾ ಆಯಾಮಗಳಲ್ಲೂ ಯೋಚಿಸಿ, ಸಮರ್ಥವಾಗಿ ಯೋಜಿಸಿ ಹಣವನ್ನು ಉಳಿಸುವುದು ಹಾಗೂ ವೃದ್ದಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಇದನ್ನೂ ಓದಿ: ಹೂಡಿಕೆ ಆಕರ್ಷಿತ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಈ ಲೋಹದ ಬೇಡಿಕೆ ಅದ್ಯಾವುದು ಗೊತ್ತಾ!?


ವಿಶೇಷ ಸೂಚನೆ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನಿರ್ದಿಷ್ಟ ಹಣಕಾಸು ಸಲಹೆಗಾಗಿ, ದಯವಿಟ್ಟು ಪ್ರಮಾಣೀಕೃತ ಹಣಕಾಸು ಯೋಜಕರನ್ನು ಸಂಪರ್ಕಿಸಿ. ಈ ವಿಷಯವನ್ನು ಆಧರಿಸಿ ತೆಗೆದುಕೊಳ್ಳುವ ಹಣಕಾಸಿನ ನಿರ್ಧಾರಗಳಿಗೆ InsightRush ಜವಾಬ್ದಾರನಾಗಿರುವುದಿಲ್ಲ.