ವಾಸ್ತವವಾಗಿ, ಸಾಮಾಜಿಕ ರಚನೆ ಎಂದರೆ ಜನರು, ಜೀವನಶೈಲಿ ಎಂದಷ್ಟೇ ತಿಳಿಯಲಾಗಿದೆ. ಆದರೆ, ಪ್ರಾಯೋಗಿಕವಾಗಿ ಸಾಮಾಜಿಕ ಜೀವನಕ್ಕೆ ಸ್ಥೂಲ ವಿಷಯಗಳು ಪರಿಣಮಿಸುತ್ತದೆ. ಹಾಗೂ ಸಾಮಾಜಿಕ ಸಂಚಲನೆಗೆ ಶಕ್ತಿಯನ್ನು ಕೊಡಲಿದೆ STEM ಒಳನೋಟ.
STEM ಎಂದರೆ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ. ಇವು ವಿಷಯಾರ್ಥಗಳಾಗಿ ಉಳಿಯದೇ ಅವುಗಳ ಸಾರಾಂಶಗಳಿಂದ ಜನರ ಜೀವನದ ಮೇಲೆ ಪ್ರಭಾವ ಬೀರುವ ಮಟ್ಟದಲ್ಲಿ ಈ ಕೆಳಗಿನ ವಸ್ತುಸ್ಥಿತಿಯನ್ನು ಪರಿಚಯಿಸಿಕೊಡಲಿದೆ:
ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ - ವಿಜ್ಞಾನ
ವೈಜ್ಞಾನಿಕ ಮನೋಭಾವ ಹಾಗೂ ದೃಷ್ಟಿಕೋನವು ಸಂವಿಧಾನಾತ್ಮಕ ಅಂಶಗಳಾಗಿವೆ. ಇದಕ್ಕೆ ಒಗ್ಗಿಕೊಳ್ಳುವಲ್ಲಿ ಸರ್ವರ ಆರೋಗ್ಯ ಹಾಗೂ ಸಾಮಾಜಿಕ ಸುಸ್ಥಿತಿಗೆ ವಿಜ್ಞಾನವು ಶ್ರಮಿಸುತ್ತದೆ. ಹೀಗಿದ್ದಾಗ ವಿಜ್ಞಾನವು ಪ್ರಗತಿ ಹೊಂದಬೇಕಾಗಿರುವ ಕ್ಷೇತ್ರವಾಗಿದ್ದು, ಬಹುಪೀಳಿಗೆಯ ಸಾಮಾಜಿಕ ಜೀವನಕ್ಕೆ (Multi-generational social life) ಬಹುಮುಖ್ಯವಾಗಿದೆ. Carlington Iconic Analog Watches for Women with Premium Stainless Steel Mesh Strap - CT 2041
ಸಂವಹನ ಕ್ರಾಂತಿ ಮತ್ತು ಒಗ್ಗೂಡಿದ ಜೀವನ - ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್
ತಂತ್ರಜ್ಞಾನವು ಭೌಗೋಳಿಕ ಅಂತರವನ್ನು ಅಳಿಸಿಹಾಕಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸಂಪರ್ಕ ಕಲ್ಪಿಸಬಹುದಾದ ಸೌಕರ್ಯವನ್ನು ಒದಗಿಸಿಕೊಟ್ಟಿದೆ. ಎಂಜಿನಿಯರಿಂಗ್ ಅನುಕೂಲವಾದ್ದರಿಂದ ಹೊಸ ನಗರ ವಿನ್ಯಾಸಗಳು, ನಿರ್ಮಾಣಗಳು ಕೈಗೊಂಡ ಕಾರಣ ಪರಸ್ಪರ ಭೇಟಿ ಅವಕಾಶ ಹೆಚ್ಚಾಗಿದೆ. ಇಲ್ಲವಾದಲ್ಲಿ ಮನುಷ್ಯ ನಾಲ್ಕು ಗೋಡೆಯೊಳಗೆ ಸೀಮಿತವಾಗುತ್ತಿದ್ದನು. ಅನೇಕ ಸಾಮಾಜಿಕ ಸಮಸ್ಯೆಗಳು ಬಗೆಹರಿಯದೇ ಉಳಿಯುತ್ತಿದ್ದವು.
ಡೇಟಾ ಮತ್ತು ಸಾಮಾಜಿಕ ಆಯ್ಕೆಗಳು - ಗಣಿತ
Mathematical Models ಗಳಿಗೂ ಸಾಮಾಜಿಕ ಸಂಬಂಧಗಳಿಗೂ ಸಂಬಂಧವಿದೆ. ಉದಾಹರಣೆಗೆ ಹಾರಾಲೊಜಿ ಎಂದರೆ ಸಮಯದ ಅಧ್ಯಯನ. ಮನುಷ್ಯ ಜೀವನಕ್ಕೆ ಕೊಂಡಿಯಂತೆ ಬೆಸೆದಿದೆ. ತಂತ್ರಜ್ಞಾನ ವೈಶಿಷ್ಟ್ಯಗಳೊಳಗೆ ಗಣಿತದ ಅಲ್ಗಾರಿದಂಗಳು ಒಳಗೊಂಡಿದೆ. ಇವು ದತ್ತಾಂಶಗಳ ರೂಪಕವಾಗಿ ಸೈಟ್ಸ್, ಮಾಡಲ್ಸ್‌ಗಳಲ್ಲಿ ಉಪಯೋಗಿಸಲ್ಪಟ್ಟಿದೆ. ವಿಜ್ಞಾನಕ್ಕೆ ಹೊಂದಿಕೊಂಡಿರುವ ಬಹುಮುಖ್ಯ ಡಿಸ್‌ಕೋರ್ಸ್ ಇದಾಗಿದೆ.
ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳು
ಕೃತಕ ಬುದ್ದಿಮತ್ತೆಯು ಲಗ್ಗೆಯಿಟ್ಟ ಬಳಿಕ STEM ನಲ್ಲಿರುವ ಸೃಜನಶೀಲತೆ, ಸಾಮಾಜಿಕ ದೃಷ್ಟಿಕೋನವು ಬದಲಿಸಲ್ಪಟ್ಟಿಲ್ಲ. ಇವುಗಳು ಮಾನವ ವಿಕಾಸಕ್ಕೆ ಬದ್ದವಾಗಿ, ಸಾಮಾಜಿಕ ಮೌಲ್ಯಗಳನ್ನು ಪಸರಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದೆ. ಇದೊಂದು ಟೆಕ್ನಿಕಲ್ ಸಿಪ್ ಅಷ್ಟೇ ಅಲ್ಲದೇ ಸಾಮಾಜಿಕ ಸೇತುವೆಯಾಗಿರಬೇಕಾದುದು ಸಮಾಜದ ಜವಾಬ್ದಾರಿಯಾಗಿರುತ್ತದೆ. ಇದನ್ನೂ ಓದಿ: Personal Financing: ಆರ್ಥಿಕ ಸ್ಥಿರತೆಗೆ ಸರಳ ಹಾಗೂ ಪರಿಣಾಮಕಾರಿ ಮಾರ್ಗ - 50/30/20 ಸೂತ್ರ!