Skip to main content
ವಿಡಿಯೋ
lifestyle

Digital Isolation: ಸಾಮಾಜಿಕ ಜೀವನದ ನಡುವಲ್ಲೂ ಕಾಡುವ ʻಒಂಟಿತನʼ!

By Shravanthi R
Digital Isolation: ಸಾಮಾಜಿಕ ಜೀವನದ ನಡುವಲ್ಲೂ ಕಾಡುವ ʻಒಂಟಿತನʼ!

ಈ ಡಿಜಿಟಲ್‌ ಜಗತ್ತಿನಲ್ಲಿ ನಾವು ಪರಸ್ಪರ ಸಂಪರ್ಕಿತರಾಗಿದ್ದೇವೆ ವಿ ಆಲ್‌ ಆರ್‌ ಕನೆಕ್ಟೆಡ್‌ ಬಟ್‌ ನಾಟ್‌ ಕಮ್ಯುನಿಕೇಟೆಡ್‌ ಎನ್ನುವ ಮಾತಿದೆ. ನಮ್ಮ ನಡುವಿನ ಸಂಪರ್ಕ ಸಂವಹನ ಕಳೆದುಹೋಗಿದೆ ಎಂಬ ಗಂಭೀರ ವಿಷಯ Digital Isolation.

ಇವತ್ತು ಡಿಜಿಟಲ್‌ ಕನೆಕ್ಟಿವಿಟಿ ಎನ್ನುವ ವಿಷಯವು ಮನುಷ್ಯ ಸಂಬಂಧಗಳನ್ನು ದೂರ ಮಾಡುತ್ತಿದೆಯೇ ? ಎನ್ನುವ ಆತಂಕವನ್ನು ಪ್ರಶ್ನಿಸಿ ಮನೋವಿಜ್ಞಾನಿಗಳು ಇದನ್ನೇ ಡಿಜಿಟಲ್‌ ಐಸೊಲೇಶನ್‌ ಎಂದು ಕರೆದಿದ್ದಾರೆ. 

ಡಿಜಿಟಲ್‌ ಐಸೊಲೇಶನ್‌ ಎಂದರೇನು - 

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತಾನು ಬಳಸುವ ಸ್ಮಾರ್ಟ್‌ಫೋನ್‌ನ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿರುವ ನೂರಾರು ಗ್ರೂಪ್ಸ್‌, ಕಾಂಟ್ಯಾಕ್ಟ್ಸ್‌ ಮತ್ತು ಫಾಲೋವರ್ಸ್‌ಗಳಿದ್ದರೂ ಸಹ ಮಾನಸಿಕ ಒಂಟಿತನ ಅನುಭವಿಸುವ ಗುಣಲಕ್ಷಣವಿರುವುದಕ್ಕೆ ಡಿಜಿಟಲ್‌ ಐಸೊಲೇಶನ್‌ ಎನ್ನುವರು. Fastrack Fits & Forms Analog Black Dial Men's Watch NM6093SM01/NN6093SM01

ಕೈಯಲ್ಲಿ ಸ್ಮಾರ್ಟ್‌ಫೋನ್‌ ಇದ್ದರೆ ಜಗತ್ತಿನ ಜೊತೆಗಿದ್ದೇವೆ ಅನಿಸುತ್ತಿದ್ದರೂ, ವಾಸ್ತವದಲ್ಲಿ ನಮ್ಮ ಪಕ್ಕ ಕುಳಿತವರೊಟ್ಟಿಗೆ ಮಾತನಾಡಲು ಅಸಾಧ್ಯ ಎಂದು ಭಾವಿಸುವ ಮನೋಭಾವಕ್ಕೆ ಡಿಜಿಟಲ್‌ ಐಸೊಲೇಶನ್‌ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವಾಗಿ ಸ್ಕ್ರೀನ್‌ ಅಡಿಕ್ಷನ್‌, ಮಾಹಿತಿ ಓವರ್‌ಲೋಡ್‌ ಹಾಗೂ ಅತಿಯಾಗಿ ಅಪ್‌ಲೋಡ್‌ ಪ್ರಯತ್ನಗಳಿಂದ ಇದು ಸಂಭವಿಸುತ್ತದೆ.

ಇದರಿಂದ ಹೊರಬರಲು ಇರುವ ದಾರಿಗಳು:

1. ಡಿಜಿಟಲ್‌ ಡಿಟಾಕ್ಸ್‌ ಮತ್ತು ಡಿಜಿಟಲ್‌ ಮಿನಿಮಲಿಸಂ: ತಂತ್ರಜ್ಞಾನವನ್ನು ಕೈಬಿಡದ ಹಾಗೂ ಅದನ್ನೇ ಅವಲಂಬಿಸದ ರೀತಿ ಪರಿವರ್ತಿಸಿಕೊಳ್ಳುವುದು

2. ಸರಳ ಜೀವನ ಕ್ರಮ: ಬದುಕನ್ನು ಹೊರೆಯಾಗಿಸಿಕೊಳ್ಳದೇ ಸರಳ ಆಲೋಚನೆ ಮತ್ತು ಅನುಭಾವವನ್ನು ಅಳವಡಿಸಿಕೊಳ್ಳುವುದು. ಸಕಾರಾತ್ಮಕ ಚಿಂತನೆ ಹಾಗೂ ಹವ್ಯಾಸ ಅಭ್ಯಾಸ ಕ್ರಮಗಳಿಗೆ ಒತ್ತು ಕೊಡುವುದು.

3. ಡಿಜಿಟಲ್‌ ಸಿಗ್ನಲ್‌ ಅಲ್ಲ ಭಾವನಾತ್ಮಕ ಸಿಗ್ನಲ್‌: ಜೀವನಕ್ಕೆ ಯಾಂತ್ರಿಕ ಕರೆಗಳಲ್ಲ, ಪ್ರೀತಿಯ ಕರೆಯೆನ್ನುವುದನ್ನು ಅರಿಯುವುದು. ವೈ-ಫೈ ಕನೆಕ್ಷನ್‌ಗಿಂತಲೂ, ಮನುಷ್ಯರ ನಡುವಿನ ಭಾವಾನಾತ್ಮಕ ಕನೆಕ್ಷನ್‌ಗಳಿಗೆ ಬೆಲೆ ಕೊಡುವುದು. 

4. ಫೋನ್‌ ಸ್ಕ್ರಾಲ್‌ ಅಲ್ಲ ಸ್ಲೋ ವಾಕ್‌: ಯಾಂತ್ರಿಕ ಉಪಕರಣಗಳ ಬಳಸುವುದನ್ನು ನಿಯಂತ್ರಿಸಿ, ಪುಸ್ತಕ ಓದುವುದು, ಪರಿಸರ ವಿಹಾರ, ದೈಹಿಕ ಚಟುವಟಿಕೆಗಳಿಗೆ ಆಸ್ಥೆ ನೀಡುವುದು. ಇದನ್ನೂ ಓದಿ: STEM: ಸಾಮಾಜಿಕ ಜೀವನಕ್ಕೆ ಹೇಗೆ ಪರಿಣಮಿಸಲಿದೆ!?