ದೇಶದಲ್ಲಿ ಸಾವಿಗೆ ಹೃದಯಾಘಾತವು ಸಾಮಾನ್ಯ ಕಾರಣವೆಂದೆನಿಸಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ನ ಅಧ್ಯಯನದ ಪ್ರಕಾರ, ಪ್ರತೀ ನಾಲ್ಕು ಸಾವುಗಳಲ್ಲಿ ಒಂದು ಹೃದಯ ಸಂಬಂಧಿ ಕಾರಣ ಕಾಯಿಲೆಯಿಂದ ಉಂಟಾಗಿರುತ್ತದೆ ಎಂದು ಹೇಳಲಾಗಿದೆ.
ಈ ನಿಟ್ಟಿನಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಎಷ್ಟು ಎಚ್ಚರರಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಕೊಲೆಸ್ಟ್ರಾಲ್ ಮಾತ್ರವಲ್ಲದೇ, ಇನ್ನಿತರ ಅನೇಕ ಕಾರಣಗಳು ಹೃದಯದ ಆರೋಗ್ಯಕ್ಕೆ ಸಂಬಂಧಪಟ್ಟಿರುವುದರ ಕುರಿತು ತಿಳಿಯಬೇಕಿರುತ್ತದೆ.
ಅದರಲ್ಲೂ ಈ ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿವೆ ಎಂದು ತಿಳಿಸಲಾಗಿದೆ. ಅತ್ಯಂತ ಶೀತ ಹವಾಮಾನ ಹಾಗೂ ಶೀತ ಗಾಳಿಯ ಪ್ರಭಾವದಿಂದ ಹೃದಯಾಘಾತ ಅಪಾಯವು ಸಂಭವಿಸುತ್ತದೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ. ಇದು ಹಠಾತ್ ಸಂಭವಿಸುವುದಿಲ್ಲ ಬದಲಾಗಿ ಶೀತಲ ಪ್ರಾರಂಭಿಕ ಪರಿಸ್ಥಿತಿಗಳ ಆನಂತರದಲ್ಲಿ ಉಂಟಾಗುತ್ತದೆ ಎನ್ನಲಾಗಿದೆ. Sonata Summer Blooms Quartz White Round Dial Women's Watch | Nylon Material | Multi Color Band - SP80126WF02W
ಚಳಿಗಾಲದಲ್ಲಿ ಹೃದಯಾಘಾತ ಏಕೆ ಹೆಚ್ಚು ?
ಈ ಕಾಲಾಂತರದಲ್ಲಿ ಹೃದಯಾಘಾತ ಅಪಾಯ ಹೆಚ್ಚಾಗಲು ಪ್ರಮುಖ ನಾಲ್ಕು ಕಾರಣಗಳನ್ನು ವೈದ್ಯರು ತಿಳಿಸಿರುತ್ತಾರೆ:
ಹವಾಮಾನ ತಂಪಾಗಿರುವ ಸಂದರ್ಭದಲ್ಲಿ ರಕ್ತನಾಳಗಳ ಸಂಕುಚಿತತೆ, ಕಡಿಮೆ ರಕ್ತಪರಿಚಲನೆ ಹಾಗೂ ಆಮ್ಲಜನಕ ಸರಬರಾಜು ಎನ್ನಬಹುದಾಗಿದೆ.
ಚಳಿಗಾಲದಲ್ಲಿ ಕಡಿಮೆ ಚಲನೆ (ಓಡಾಡುವುದು), ಬೆವರು, ಹೃದಯ ಬಡಿತ ಹೆಚ್ಚಳ, ರಕ್ತದೊತ್ತಡದಿಂದ ಒತ್ತಡ ಹೆಚ್ಚುವುದು.
ಚಳಿಗಾಲದಲ್ಲಿ ದೇಹದಲ್ಲಿ ಚಯಾಪಚಯ ಕ್ರಿಯೆ ನಿಧಾನ, ಆಹಾರ ಸೇವನೆಯ ಪರಿಮಾಣ ಹಾಗೂ ವ್ಯಾಯಾಮ ಮಿತಗೊಳಿಸುವಿಕೆ.
ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ, ರಕ್ತ ಹೆಪ್ಪುಗಟ್ಟುವ ಪ್ರವೃತ್ತಿ ಹೆಚ್ಚುವುದು.
ಚಳಿಗಾಲದಲ್ಲಿ ಹೃದಯ ಕಾಳಜಿ ಹೇಗೆ?
ದೈಹಿಕ ಚಟುವಟಿಕೆ ಕೊರತೆಯ ಹೊರತಾಗಿ, ಯೋಗ ಮತ್ತು ಧ್ಯಾನ ಮಾಡುವುದು. ದೇಹದ ತೂಕವನ್ನು ನಿಯಂತ್ರಣದಲ್ಲಿರುವಂತೆ ಗಮನಿಸಿಕೊಳ್ಳವುದು.
ಆಹಾರದ ವಿಷಯದಲ್ಲಿ ಕರಿದ ಹಾಗೂ ಹುರಿದ ಆಹಾರ ಸೇವನೆ ಹೃದಯದ ಒತ್ತಡಕ್ಕೆ ಕಾರಣವಾಗಬಹುದು. ಆದ್ದರಿಂದ ಹಣ್ಣುಗಳು, ತರಕಾರಿ, ಬೇಳೆಕಾಳು ಸೇವನೆ ಉತ್ತಮ.
ಹೆಚ್ಚು ಉಪ್ಪು ಹಾಗೂ ಸಕ್ಕರೆ ಸೇವನೆ ತಪ್ಪಿಸಿ. ರಕ್ತದೊತ್ತಡ (ಬಿಪಿ), ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.
ಯಾವುದೇ ಸಂದರ್ಭದಲ್ಲಿ ಸಣ್ಣಗೆ ಎದೆ ನೋವು, ಉಸಿರಾಟದ ತೊಂದರೆ ಅಥವಾ ತಲೆತಿರುಗುವಿಕೆ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದನ್ನೂ ಓದಿ: Gen Z ಕ್ರೇಜ್: ಸೋಷಿಯಲ್ ಕನೆಕ್ಟಿವಿಟಿ ಎಂದರೆ ಲೈಕ್ಸ್, ಕಮೆಂಟ್ಸ್ ಅಷ್ಟೇನಾ!?
ವಿಶೇಷ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ರೀತಿಯಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.