ಈಗೆಲ್ಲಾ ಸೋಷಿಯಲ್ ಮೀಡಿಯಾ ಹವಾ. ದಿನವೆಲ್ಲಾ ಕಳೆದ ವಿಶೇಷ ಕ್ಷಣಗಳನ್ನು ಇನ್‌ಸ್ಟಾ, ಫೇಸ್‌ಬುಕ್‌ನಲ್ಲಿ ಬರೆವ ಮತ್ತದನ್ನು ಹಂಚಿಕೊಂಡು, ಸ್ನೇಹಿತರ ಗಮನ ಸೆಳೆಯುವುದು, ಲೈಕ್ಸ್ ಕೊಟ್ಟು, ಕಮೆಂಟ್ಸ್‌ಗಳಿಂದ ಕುತೂಹಲ ಮತ್ತು ಖುಷಿ ಪಡೆವುದು ಸಹಜವಾಗಿಬಿಟ್ಟಿದೆ.
ಈ ಆನ್‌ಲೈನ್ ಟ್ರೆಂಡಿಂಗ್‌ನಲ್ಲಿ ಕೆಲ ಬಳಕೆದಾರರು ವಿಭಿನ್ನರೆಂದು ಸಂಶೋಧನಾ ವರದಿಯಿಂದ ತಿಳಿದು ಬಂದಿದೆ. ಈಗಿನ ಜೆನ್ ಝೀ ಜನತೆಯಲ್ಲಿ ಕೆಲವರು ಆನ್‌ಲೈನ್ ವೀಕ್ಷಿಕರಾಗಿದ್ದಾರೆ ಹೊರತು, ತಾವು ಪೋಸ್ಟ್ ಹಂಚಿಕೊಳ್ಳಲಾರರು ಎನ್ನುವುದಾಗಿದೆ.
ಅಧ್ಯಯನವೊಂದು ಹೇಳಿರುವ ಹಾಗೆ, 50 ದೇಶಗಳಲ್ಲಿ ಎರಡೂವರೆ ಲಕ್ಷ ಆನ್‌ಲೈನ್ ಬಳಕೆದಾರರನ್ನು ಒಳಗೊಂಡ ಸಮೀಕ್ಷೆಯಲ್ಲಿ ತಿಳಿದುಬಂದಿರುವ ವರದಿ ಪ್ರಕಾರ, ಶೇ.10 ರಷ್ಟು ಜನರು ಸಾಮಾಜಿಕ ಜಾಲತಾಣ ಬಳಕೆಯಿಂದ ದೂರ ಉಳಿಯುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ʻಡಿಜಿಟಲ್ ಫಾಸ್ಟಿಂಗ್ʼ ಎನ್ನಲಾಗುತ್ತದೆ. Fastrack New Limitless Classic|Large 1.91" Super UltraVU Display|Functional Crown|Highest 320x385 Pixel Resolution|SingleSync BT Calling|100+ Sports Modes|Metal Case Premium Smartwatch - Black Mesh
ಇದಲ್ಲದೇ ಯಾವುದೇ ಪೋಸ್ಟ್ಸ್ ಹಂಚಿಕೊಳ್ಳದಿರುವುದಕ್ಕೆ ʻಝೀರೋ ಪೋಸ್ಟಿಂಗ್ʼ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವಾಗಿ ಸೋಷಿಯಲ್ ಮೀಡಿಯಾ ಸುರಕ್ಷಿತವಲ್ಲ, ಅದರಿಂದ ಬರುವ ಕಾಮೆಂಟ್ಸ್‌ಗಳು ಮಾನಸಿಕ ನೆಮ್ಮದಿಯನ್ನು ಹಾಳುಗೆಡವುತ್ತದೆ ಎನ್ನುವುದು. ಮತ್ತದಲ್ಲದೇ, ಡಿಜಿಟಲ್ ವಂಚನೆ, ಫೋಟೋ ಮಾರ್ಫಿಂಗ್ ನಂತಹ ಭಯಗಳೂ ಸಹ ಕಾರಣವಾಗಿದೆ ಎನ್ನಲಾಗಿದೆ.
ಹೀಗಿದ್ದೂ, ಮತ್ತೊಂದೆಡೆ, ಜೆನ್ ಝೀ ಹೊಸ ಕಲಿಕೆಗೆ ಆಸಕ್ತಿ ತೋರುತ್ತಿದ್ದಾರೆಂಬ ವಿಶೇಷ ಸಂಗತಿ ಕೇಳಿಬಂದಿದೆ. ತಮ್ಮ ಇಷ್ಟದ ಕೆಲಸಗಳನ್ನು ಕಲಿಯಲು ಇಂಟರ್‌ನೆಟ್ ಬಳಕೆಯಾಗುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Digital Isolation: ಸಾಮಾಜಿಕ ಜೀವನದ ನಡುವಲ್ಲೂ ಕಾಡುವ ʻಒಂಟಿತನʼ!