Skip to main content
ವಿಡಿಯೋ
technology

SMAC - ʻಡಿಜಿಟಲ್‌ ಎರಾʼ ರೂಪುಗೊಂಡ ಬಗೆ ಇದು!

By Shravanthi R
SMAC - ʻಡಿಜಿಟಲ್‌ ಎರಾʼ ರೂಪುಗೊಂಡ ಬಗೆ ಇದು!

ಡಿಜಿಟಲೈಸೇಷನ್‌ ಎನ್ನುವುದು ಕೇವಲ ತಾಂತ್ರಿಕ ಬದಲಾವಣೆಯಲ್ಲ. ಅದು ಜಗತ್ತನ್ನು ಆವರಿಸಿಕೊಳ್ಳುತ್ತಾ, ವಿಕಾಸಗೊಂಡ ಬದುಕಿನ ಕ್ರಾಂತಿ. ಇದು ಮೂರು ಪ್ರಮುಖ ಹಂತಗಳನ್ನು ವಿಧಗಳಾಗಿ ಹೊಂದಿದೆ. ಹೆಸರಿಸುವಂತೆ:

ಅಂದೊಂದು ಕಾಲವಿತ್ತು. ಎಲ್ಲಾದಕ್ಕೂ ಅಂಗಡಿಗೆ ಹೋಗಿ ಖರೀದಿಸುವ, ಹೊರ ಜಗತ್ತಿನ ನೋಟವಾಗಿತ್ತು. ಇದೀಗ ಸಂಪೂರ್ಣ ಡಿಜಿಟಲೀಕರಣ. ಕೂತಲ್ಲೇ ಕೆಲಸವಾಗೋ ಕಾಲ. ಉದಾಹರಣೆಗೆ, ವರ್ಕ್‌ ಫ್ರಮ್‌ ಹೋಮ್‌. 

ಡಿಜಿಟಲೈಸೇಷನ್‌ ಎನ್ನುವುದು ಕೇವಲ ತಾಂತ್ರಿಕ ಬದಲಾವಣೆಯಲ್ಲ. ಅದು ಜಗತ್ತನ್ನು ಆವರಿಸಿಕೊಳ್ಳುತ್ತಾ, ವಿಕಾಸಗೊಂಡ ಬದುಕಿನ ಕ್ರಾಂತಿ. ಇದು ಮೂರು ಪ್ರಮುಖ ಹಂತಗಳನ್ನು ವಿಧಗಳಾಗಿ ಹೊಂದಿದೆ. ಹೆಸರಿಸುವಂತೆ:

  1. ಡಿಜಿಟೈಸೇಷನ್‌ - ಮಾಹಿತಿಯ ರೂಪಾಂತರ

1990ʼs ರ ಸಮಯದ ತನಕ ಇದ್ದ ಭೌತಿಕ ಸ್ವರೂಪದ ಹಾಗೂ ಅನಲಾಗ್‌ ಮಾಹಿತಿಯನ್ನು ಡಿಜಿಟಲ್‌ ರೂಪಕ್ಕೆ (ಬೈನರಿ ಲಾಂಗ್ವೇಜ್‌ 0 - 1) ಪರಿವರ್ತಿಸುವ ಪ್ರಕ್ರಿಯೆಯಾಗಿತ್ತು. ಉದಾಹರಣೆಗೆ, ಕಾಗದದ ಫೈಲ್ಸ್‌ಗಳನ್ನು ಕಂಪ್ಯೂಟರ್‌ ಸ್ಕ್ಯಾನ್‌ ಮಾಡಿ ಸೇವ್‌ ಮಾಡಿಡುವುದು. 

  1. ಡಿಜಿಟಲೈಸೇಷನ್‌ - ಪ್ರಕ್ರಿಯೆ ಬದಲಾವಣೆ

1990 ರ ದಶಕದಿಂದ 2010 ರವರೆಗೆ ಕೇವಲ ಮಾಹಿತಿ ರೂಪಾಂತರಗೊಳ್ಳದೇ ಕೆಲಸಕ್ಕನುಗುಣವಾಗಿ ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಿ ವ್ಯವಹರಿಸುವ ಪ್ರಕ್ರಿಯೆ. ಉದಾಹರಣೆಗೆ, ಎಟಿಎಂ ಬಳಕೆಯಿಂದ ಆನ್‌ಲೈನ್‌ ಬ್ಯಾಂಕಿಂಗ್‌ ಸುಧಾರಣೆ. 

  1. ಡಿಜಿಟಲ್‌ ಟ್ರಾನ್ಸ್‌ಫಮೇಶನ್‌ - ಸಮಗ್ರ ಪರಿವರ್ತನೆ

2010 ರ ನಂತರ ಇವತ್ತಿನವರೆಗೆ, ಕೆಲಸ ಹಾಗೂ ವ್ಯವಹಾರಿಕ ಮಾದರಿಯಷ್ಟೇ ಅಲ್ಲದೇ ಸಾಮಾಜಿಕ ಜೀವನಶೈಲಿಯನ್ನು ಪೊರೆದಿರುವ ಬದಲಾವಣೆ. ಉದಾಹರಣೆಗೆ, ಮೊದಲಿಗೆ ಹೊರಗೆ ಹೋಗಿ ಸಿನಿಮಾ ಕ್ಯಾಸೆಟ್‌ ತರುತ್ತಿದ್ದೆವು, ಆನಂತರ ಸಿನಿಮಾ ಆರ್ಡರ್‌ ಮಾಡತೊಡಗಿದೆವು. ಆದರೆ, ಇಂದು ಒಟಿಟಿ ಫ್ಲಾಟ್‌ಫಾರ್ಮ್‌ಗಳ ಮೂಲಕ ಸಿನಿಮಾ ವೀಕ್ಷಣೆ ಬೆರಳ ತುದಿಯಲ್ಲಿದೆ.  OnePlus Nord Buds 3r TWS Earbuds up to 54 Hours Playback, 2-mic Clear Calls, 3D Spatial Audio, AI Translation, 12.4mm Drivers, Dual-Device Connectivity, 47ms Low Latency - Ash Black

SMAC ಮೈಲಿಗಲ್ಲು - 

ಇದೊಂದು ಪ್ರಮುಖ ತಾಂತ್ರಿಕ ಪ್ರವೃತ್ತಿಯಾಗಿದ್ದು, ತಂತ್ರಜ್ಞಾನವನ್ನು ಸಂಯೋಜಿಸಿದ ಚೌಕಟ್ಟಾಗಿದೆ. "SMAC" - Social, Mobile, Analytics, and Cloud ಎನ್ನುವುದು AI and IoT ಹಿಂದಿರುವ ಪರಿಕಲ್ಪನೆಯಾಗಿದೆ. ಹಾಗೆಂದರೆ, 

  • ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು (ಸಾಮಾಜಿಕ ಮಾಧ್ಯಮಗಳು), 

  • ಮೊಬೈಲ್‌ - ಇಂಟರ್‌ನೆಟ್‌ ಮೂಲಕ ಮೊಬೈಲ್‌, ಟ್ಯಾಬ್‌ಲೆಟ್‌ಗಳಂತ ಸಾಧನಗಳು

  • ಅನಾಲಿಟಿಕ್ಸ್‌ -  ಡೇಟಾ ವಿಶ್ಲೇಷಣೆ 

  • ಕ್ಲೌಡ್‌ - ಸ್ಕೇಲಬಿಲಿಟಿ ಹಾಗೂ ಡೇಟಾ ಸಂಗ್ರಹಣೆಗಾಗಿ ಕ್ಲೌಡ್‌ ಕಂಪ್ಯೂಟಿಂಗ್‌ ವ್ಯವಸ್ಥೆ

ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಉಬರ್‌, ಮೊದಲೆಲ್ಲಾ ಟ್ಯಾಕ್ಸಿ ಹುಡಕಬೇಕಿತ್ತು. ಆದರೆ, ಅದಾದ ಬಳಿಕ ಅದರ ಕಂಪನಿಯು ತನ್ನ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಮಾಹಿತಿ ಸಂಗ್ರಹಿಸಿತ್ತು. ಡಿಜಿಟಲೀಕರಣಗೊಂಡ ಟ್ಯಾಕ್ಸಿ ಕಂಪನಿಯು GPS ರವಾನೆ ವ್ಯವಸ್ಥೆಯನ್ನು ಬಳಸಿ, ಸಂಸ್ಥೆಯಾಗಿ, ಉಬರ್ ಒಂದು ಡಿಜಿಟಲ್ ರೂಪಾಂತರ ಪಡೆದುಕೊಂಡು ಹೊಸ, ಡೇಟಾ-ಚಾಲಿತ ವ್ಯವಹಾರ ಮಾದರಿಯನ್ನು ಅನುಸರಿಸಿರುವುದು. 

ಫ್ಯೂಚರ್‌ ಇಂಟಲಿಜೆಂಟ್‌ ಡಿಜಿಟಲೈಸೇಷನ್‌ - 

ಇದು ಮುಂದುವರೆದಂತೆ, ನಾವು ಇಂಟಲಿಜೆನ್ಸ್‌ ಡಿಜಿಟಲೈಸೇಷನ್‌ ಲೋಕದಲ್ಲಿದ್ದೇವೆ. ಕೇವಲ ಇಂಟರ್‌ನೆಟ್‌ ಅಲ್ಲದೇ ಇದೀಗ ಕೃತಕಬುದ್ದಿಮತ್ತೆ ಹಾಗೂ ಡೇಟಾ ಅನಾಲಿಟಿಕ್ಸ್‌ನಂತಹ ಪೂರ್ವನಿರ್ಧರಿತ ಯಂತ್ರಗಳ ಕಾಲಘಟ್ಟದಲ್ಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವತ್ತಾ ಹೆಜ್ಜೆಯನ್ನಿಟ್ಟು ಸಾಗಿದ್ದೇವೆ. ಇದನ್ನೂ ಓದಿ: ಅಮೆರಿಕಾದ ಟ್ಯಾಕ್ಸ್‌ ಎಫೆಕ್ಟ್‌ - ಸ್ಟಾಕ್‌ ಮಾರ್ಕೆಟ್‌ನಲ್ಲಿ ಬಿಗಡಾಯಿಸಿರುವ ತಲ್ಲಣ!