ಕಳೆದ ಮೂರು ನಾಲ್ಕು ದಿನಗಳಿಂದ ದೇಶದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಭಾರತೀಯ ಷೇರು ಸೂಚ್ಯಂಕಗಳಾದ ನಿಫ್ಟಿ 50 ಹಾಗೂ ಬಿಎಸ್‌ಸಿ ಸೆನ್ಸೆಕ್ಸ್ 30 ದಲ್ಲಿ ಕುಸಿತ ಕಂಡುಬಂದಿದೆ ಎಂದು ವರದಿಗಳು ವಿಶ್ಲೇಷಿಸಿದೆ.
ಅಮೆರಿಕಾದ ಸುಂಕ ಏರಿಕೆ ಪ್ರಭಾವ, ಷೇರು ಮಾರಾಟಗಳು ಭರಸಾಗಿ ಸಾಗಿದೆ ಎನ್ನಲಾಗಿದೆ. ಈ ನಡುವೆ ವಿದೇಶ ಹೂಡಿಕೆ ಹೊರ ಹರಿವಿನ ಒತ್ತಡವನ್ನು ಹೆಚ್ಚಿಸಿದೆ ಎನ್ನಲಾಗಿದೆ. ಷೇರು ಮೌಲ್ಯಗಳ ಏರಿಳಿತಗಳ ನಡುವೆ ಲೋಹಗಳ ಬೆಲೆಯು ಕುಸಿತ ಕಂಡಿದ್ದು, ವ್ಯಾಪಾರ ಅನಿಶ್ಚಿತತೆಯನ್ನು ತಂದೊಡ್ಡಿದೆ ಎಂದು ತಿಳಿಸಲಾಗಿದೆ. ಈ ಹಠಾತ್ ಕುಸಿತಕ್ಕೆ ಜಾಗತಿಕ ರಾಜಕೀಯ ಬಿಕ್ಕಟ್ಟು ಹಾಗೂ ವಿದ್ಯಮಾನಗಳು ಇಳಿಕೆಯಂಶಕ್ಕೆ ಪ್ರಭಾವ ಬೀರಿದೆ ಎಂದು ವರದಿಗಳು ವಿಶ್ಲೇಷಿಸಿದೆ ಎನ್ನಲಾಗಿದೆ.
ದೇಶಿಯ ಷೇರು ಸೂಚ್ಯಂಕಗಳು ಇಳಿಕೆ ಹಾದಿ ಹಿಡಿದಿದ್ದರಿಂದ ಹೂಡಿಕೆದಾರರಲ್ಲಿ ತಲ್ಲಣವನ್ನುಂಟು ಮಾಡಿದೆ. ವ್ಯತ್ಯಾಸಗೊಂಡಿರುವ ಷೇರು ಸೂಚ್ಯಂಕಗಳಿಂದಾಗಿ ಷೇರು ವಹಿವಾಟಿನ ಕುರಿತಾಗಿ ಆರ್ಥಿಕ ತಜ್ಞರು ತಮ್ಮ ವಿಶ್ಲೇಷಣೆಗಳನ್ನು ಮಂಡಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ. boAt Airdopes 300, Cinematic Spatial Audio, 50HRS Battery, 4Mic AI ENx, Fast Charge, App Support, Low Latency, IPX4, v5.3 Bluetooth Earbuds, TWS Ear Buds Wireless Earphones with mic (Gunmetal Black)
ಬಜೆಟ್ ಮಂಡನೆ - ಹೂಡಿಕೆದಾರರಲ್ಲಿ ಮೂಡಿದ ಕುತೂಹಲ
ಫೆಬ್ರವರಿ 01, 2026 ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿರುವ ಹಿನ್ನಲೆಯಲ್ಲಿ, ಹೂಡಿಕೆದಾರರಲ್ಲಿ ಕುತೂಹಲ ಕೆರಳಿದೆ. ಆ ದಿನದಂದು ಷೇರು ವಹಿವಾಟುಗಳಿರಲಿವೆಯೇ ಎನ್ನುವ ಬಗ್ಗೆ ವ್ಯಾಪಕ ಚರ್ಚೆ ಎದುರಾಗಿದ್ದು, ವಾರದ ಶನಿವಾರ ಹಾಗೂ ಭಾನುವಾರದಂದು ರಜೆ ಇರಲಿವೆ ಎಂದು ತಿಳಿಸಲಾಗಿದೆ. ಇನ್ನು, ಬಜೆಟ್ ಮಂಡನೆ ದಿನ ಭಾನುವಾರವಾಗಿದ್ದು, ಷೇರು ಮಾರುಕಟ್ಟೆಗಳು ತೆರೆದಿರುವ ಬಗ್ಗೆ ಸ್ಪಷ್ಟನೆ ನೀಡಲಾಗಿಲ್ಲ ಎಂಬ ಗೊಂದಲ ನಿರ್ಮಾಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದೆ. ಇದನ್ನೂ ಓದಿ: ʻಕ್ಲೀನ್‌ಟೆಕ್ʼ - ಸುಸ್ಥಿರತೆಗೆ ಸರ್ಕಾರದ ಕೊಡುಗೆಯೇನು!?
ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.