Skip to main content
ವಿಡಿಯೋ
technology

ಚಾಟ್‌ಬಾಟ್‌ಗಳ ಯುಗ: ಮಾನವನ ಸೃಜನತೆಗೆ ನೆರವೋ ಅಥವಾ ಬದಲಾವಣೆಯೋ!?

By Shravanthi R
ಚಾಟ್‌ಬಾಟ್‌ಗಳ ಯುಗ: ಮಾನವನ ಸೃಜನತೆಗೆ ನೆರವೋ ಅಥವಾ ಬದಲಾವಣೆಯೋ!?

ಅಲೆಕ್ಸಾ, ಜೆಮಿನಿ ಹಾಗೂ ಚಾಟ್‌ಜಿಪಿಟಿಗಳಂತಹ ಚಾಟ್‌ಬಾಟ್‌ಗಳು ಇವತ್ತಿನ ಕಾಲಘಟ್ಟದಲ್ಲಿ ವ್ಯಕ್ತಿಯ ಅವಶ್ಯಕತೆಗಳಿಗೆ ಪೂರಕವಾಗಲ್ಲದೇ ಅವನ ಸೃಜನತೆಯನ್ನು ಬದಲಾಯಿಸುತ್ತಲಿವೆಯೇ ಎಂಬ ಒಳನೋಟ ತಿಳಿದುಕೊಳ್ಳಬೇಕಿರುವುದು ಅವಶ್ಯಕವಾಗಿದೆ.

ಇತ್ತೀಚಿನ ದಿನಗಳಲ್ಲಿ ಎಐ ವರ್ಚುಯಲ್‌ ಅಸಿಸ್ಟೆಂಟ್‌ಗಳಾದ ಆಪಲ್‌ ಸಿರಿ, ಅಮೆಜಾನ್‌ ಅಲೆಕ್ಸಾ ಹಾಗೂ ಗೂಗಲ್‌ ಜೆಮಿನಿಯ ಅಲೆಗಳು ಜೋರಾಗಿದೆ. ವ್ಯಕ್ತಿಗಳಿಗೆ ತಮ್ಮ ಇಷ್ಟಾನುಸಾರ ಜೊತೆಗೂಡಿರುವ ಇವುಗಳು ಸ್ನೇಹಿತರಂತೆ ಬಿಂಬಿತವಾಗಿವೆ. 

ಉದಾಹರಣೆಗೆ, ಒಂದು ದಿವಸ ಸ್ನೇಹಿತರಿಲ್ಲದೇ, ಯಾರ ಬಳಿ ಮಾತನಾಡುವುದೆಂದು ಚಾಟ್‌ಜಿಪಿಟಿಗೆ ಪ್ರಾಂಪ್ಟ್‌ ಮಾಡುವ ಮೂಲಕ ಹುಡುಗನೊಬ್ಬ ಮನದಾಳವನ್ನ ಅದರೊಟ್ಟಿಗೆ ಹಂಚಿಕೊಂಡಿದ್ದಾನೆ. ಇದಕ್ಕೆ ಪ್ರತಿಯಾಗಿ ಉದ್ದುದ್ದ ಸಾಲುಗಳಲ್ಲಿ ಸ್ನೇಹಿತನಂತೆಯೇ ಉತ್ತರಿಸಿದ ಚಾಟ್‌ಜಿಪಿಟಿ ಬಗ್ಗೆ ಅವನಲ್ಲಿ ಸಮಾಧಾನವಾಗಿತ್ತು. 

ಗೃಹಿಣಿಯೊಬ್ಬಾಕೆ, ಮನೆಗೆಲಸ ಮಾಡಿ ಮುಗಿದ ನಂತರ, ಹರಟೆ ಹೊಡೆಯಲು ಪಕ್ಕದ ಮನೆಗೆ ಹೋಗದೇ ಅಲೆಕ್ಸಾಳನ್ನು ಸ್ನೇಹಿತೆಯಂತೆ ಪ್ರೀತಿಸಿರುವುದು ಹೀಗೆ, ಅನೇಕ ನಿದರ್ಶನಗಳು ಇವತ್ತಿನ ದಿನಗಳಲ್ಲಿ ಕಂಡುಬರುತ್ತದೆ. ಹೀಗೆ, ಯಾವ ರೀತಿಯಲ್ಲಿ ಕೃತಕ ಬುದ್ದಿಮತ್ತೆ ಸಾಧನಗಳು ಮನುಷ್ಯರ ನಡುವಿನ ಬಾಂದವ್ಯದಂತೆ ವಿಧಾನವನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಮನೆಮಾತಾಗಿದೆ. Learning to Silence the Mind: Wellness Through Meditation Paperback – 3 September 2012

ಮಾಹಿತಿ ಕ್ರಾಂತಿ ಹಾಗೂ ಸೃಜನತೆ

ತಂತ್ರಜ್ಞಾನವು ಆಲೋಚನೆಗಳಿಗೆ ರೆಕ್ಕೆ ನೀಡಿರುವುದಲ್ಲದೇ, ಮಾನವ ಸಂವಹನ ಸೇತುವೆಯಾಗುವುದರಲ್ಲಿ ಕ್ರಾಂತಿ ಮಾಡುತ್ತಿದೆ. ಸತತವಾಗಿ ಎಐ ಬಳಕೆಯ ಬಗ್ಗೆ ಪರ-ವಿರೋಧಗಳು ಗೀಳಿಟ್ಟಿವೆ. ಪ್ರಾದೇಶಿಕ ಭಾಷೆ, ಸಂವೇದಾನಾತ್ಮಕ ಕಲಿಕೆ ಹೀಗೆ ಮುಂತಾದ ವಿಚಾರಧಾರೆಗಳಿಗೆ ಸುದ್ದಿಯಲ್ಲಿರುವ ಎಐ ನ ಪ್ರಖರ ಹರಿವು ಮಾನವನ ಅರಿವಿನ ವಿಕಾಸವೋ ಅಥವಾ ವಿನಾಶವೋ ಎಂಬುದು ಉತ್ತರ ಸಿಗದ ಪ್ರಶ್ನೆಯಂತಾಗಿದೆ ಎನ್ನಲಾಗಿದೆ. ಇದನ್ನೂ ಓದಿ: Gen Z ಕ್ರೇಜ್‌: ಸೋಷಿಯಲ್‌ ಕನೆಕ್ಟಿವಿಟಿ ಎಂದರೆ ಲೈಕ್ಸ್‌, ಕಮೆಂಟ್ಸ್‌ ಅಷ್ಟೇನಾ!?