Skip to main content
ವಿಡಿಯೋ
technology

ಕಂಟೆಂಟ್‌ ಕ್ರಿಯೇಷನ್‌ ಹಾಗೂ ಮ್ಯಾನೇಜ್‌ಮೆಂಟ್‌: ಯಾರು ಬೆಸ್ಟ್‌ - ಎಐ ಅಥವಾ ಮಾನವನಾ?

By Shravanthi R
ಕಂಟೆಂಟ್‌ ಕ್ರಿಯೇಷನ್‌ ಹಾಗೂ ಮ್ಯಾನೇಜ್‌ಮೆಂಟ್‌: ಯಾರು ಬೆಸ್ಟ್‌ - ಎಐ ಅಥವಾ ಮಾನವನಾ?

ಕೃತಕ ಬುದ್ದಿಮತ್ತೆ ಹಾಗೂ ಮಾನವ ರಚಿತ ಕಂಟೆಂಟ್‌ ನಡುವಿನ ಬಲಾಬಲದಲ್ಲಿ ತಂತ್ರಜ್ಞಾನವು ಸಾಧನವಾಗಿರಬಹುದು ಆದರೆ, ಮಾನವ ಕಲಾತ್ಮಕತೆಗೆ ಸರಿಸಾಟಿಯೇ ಎನ್ನುವುದು ವಿಮರ್ಶಾತ್ಮಕವಾದ ಸಂಗತಿ.

ನಾವೀಗ ಕೃತಕಬುದ್ದಿಮತ್ತೆಯ ನಾವಿನ್ಯತೆಯ ಕಾಲಘಟ್ಟದಲ್ಲಿದ್ದೇವೆ. ಈ ಹಿಂದೆ, ಶ್ರಮದಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದ ಮನುಷ್ಯನ ಭಾರ ಇಳಿಸಿರುವ ಎಐ, ತಂತ್ರಜ್ಞಾನ ಜಾಲಗಳು ಮಾನವನಿಗೇ ಸವಾಲೊಡ್ಡಿವೆ ಎನ್ನಲಾಗಿದೆ. 

ಮಾನವ ನಿರ್ಮಿತ ಹಾಗೂ ಎಐ ಜನರೇಟೆಡ್‌ ಕಂಟೆಂಟ್‌ ಎಂಬ ವಿಷಯಗಳ ನಡುವೆ ಸ್ಪರ್ಧೆ ಸೃಷ್ಟಿಯಾಗಿದೆ. ಇದುವೆ ತಂತ್ರಜ್ಞಾನದ ವೇಗದ ಬೆಳವಣಿಗೆ ಹಾಗೂ ಭಾವನೆಗಳ ಕುಣಿಕೆಯಾಗಿ  ಎರಡರ ನಡುವಿನ ಹೋರಾಟ ಎಂದೆನಿಸಿದೆ. ಹೀಗಾಗಿ ಇವೆರಡರ ನಡುವಿನ ಬಲಾಬಲವನ್ನು ನೋಡಿದಾಗ ಯಾವುದು ಉತ್ತಮ ಎನ್ನುವುದಕ್ಕಿಂತಲೂ ಈ ಕೆಳಗಿನ ಪರಿಮಾಣಗಳು ಬಹುಮುಖ್ಯವಾಗುತ್ತದೆ ಎನ್ನಬಹುದಾಗಿದೆ. Courage: The Joy of Living Dangerously (Osho Insights for a New Way of Living) Paperback – 27 October 1999

ಪ್ರಮುಖಾಂಶಗಳು:

  • ಭಾಷಾ ನಿಖರತೆ: ಎಐ ಭಾಷೆಗಳನ್ನು ಅರಿತು, ದತ್ತಾಂಶಗಳ ಆಧಾರಿತ ಕಂಟೆಂಟ್‌ ಕೊಡುತ್ತದೆ, ಆದರೆ, ಅದು ಅಪಕ್ವ. ಯಾಕೆಂದರೆ, ಸಿದ್ದಮಾದರಿಯ ಸ್ಟಫ್‌ ಕೊಡುತ್ತಾದರೂ ಅದು ಅರ್ಥೈಸಿಕೊಳ್ಳುವ ಸರಳ ಭಾಷೆ ವಿರಳವಾಗಿರುತ್ತದೆ ಎನ್ನುವುದು. ಅದೇ ಒಬ್ಬ ಲೇಖಕನ ಲೇಖನವು ತನ್ನ ಸ್ವಂತ ಅನುಭವದಿಂದ ಅದನ್ನು ಮೌಲ್ಯೀಕರಿ ಅರ್ಥೈಸಿಕೊಳ್ಳಲಾಗಿರುತ್ತದೆ.

  • ಕಂಟೆಂಟ್‌ನ ಗುಣಮಟ್ಟ: ಲಕ್ಷಾಂತರ ಮಾಹಿತಿಯನ್ನು ವರ್ಗೀಕರಿಸಲು ಹಾಗೂ ನಿರ್ವಹಿಸಲು ಎಐ ಸುಲಭಗೊಳಿಸುತ್ತದೆ ಆದರೂ, ಸುಳ್ಳು ಹಾಗೂ ಜೊಳ್ಳಾದಂತಹ ಮಾಹಿತಿಯಿಂದಲೂ ಕೂಡಿರಬಹುದಾಗಿದೆ. ಅದು ಯಾಂತ್ರಿಕತೆಯನ್ನು ಪಡೆದುಕೊಳ್ಳುತ್ತದೆ. 

  • ಚಿತ್ರಪರಿಕಲ್ಪನೆ: ಇತ್ತೀಚೆಗೆ, ಎಐ ಬಳಕೆ ಮಾಡಿ ಬಗೆ ಬಗೆಯ ಚಿತ್ರಗಳನ್ನು ರಚಿಸುವಲ್ಲಿ ಕ್ರಾಂತಿಯುಂಟಾಗಿದೆ. ಆದರೆ, ಇದರಿಂದ ಗೊಂದಲ, ಸಮಾಜದಲ್ಲಿ ತಪ್ಪುಕಲ್ಪನೆ (Manipulated) ಹೆಚ್ಚಾಗಿರುತ್ತದೆ. ಆದರೆ, ಮಾನವನಿಗೆ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. 

  • ತುಲನಾತ್ಮಕ ನೋಟ: ಎಐ ತನ್ನ ಡೇಟಾ ಆಧಾರಿತ ವಿಶ್ಲೇಷಣೆಯನ್ನು ಕೊಡುತ್ತದೆ ಹೊರತಾಗಿ, ಮಾನವನಂತೆ ತುಲನಾತ್ಮಕ ಕವಿತೆ, ಕಥೆ ಹಾಗೂ ವೈಯಕ್ತಿಕ ಲೇಖನಗಳ ರಚನೆಯಲ್ಲಿ ವಿವೇಚನಾಶೀಲತೆಯನ್ನು ರಿಪ್ಲೇಸ್‌ ಮಾಡಲಾಗುವುದಿಲ್ಲ. 

ಈ ರೀತಿಯಲ್ಲಿ ತಂತ್ರಜ್ಞಾನ ಸಾಧನಗಳು ಉಪಕರಣ ಮಾತ್ರವಾಗಿದ್ದು, ಮಾನವನ ಸೃಜನಾತ್ಮಕ ಹಾಗೂ ಕೌಶಲ್ಯಾಧಾರಿತ ಮೆದುಳಿಗೆ ಸಾಮ್ಯವಲ್ಲವೆನ್ನುವುದು ಒಂದು ಸ್ಪಷ್ಟನೆ. ಹೀಗಾಗಿ ಎಐ ಕಂಟೆಂಟ್‌ ಕ್ರಿಯೇಷನ್‌ಗೆ ಪರ್ಯಾಯ ಮಾರ್ಗವಾಗಬಹುದು ಆದರೆ, ಮಾನವ ರಚಿತ ಕಂಟೆಂಟ್‌ಗೆ ಬದಲಿಯಾಗುವುದಿಲ್ಲ ಎಂದು ಹೇಳಬಹುದಾಗಿದೆ. ಇದನ್ನೂ ಓದಿ: ಚಾಟ್‌ಬಾಟ್‌ಗಳ ಯುಗ: ಮಾನವನ ಸೃಜನತೆಗೆ ನೆರವೋ ಅಥವಾ ಬದಲಾವಣೆಯೋ!?