ಕೃತಕಬುದ್ದಿಮತ್ತೆಯು ಸಿನಿಮಾ ಇಂಡಸ್ಟ್ರೀಯಲ್ಲೂ ತನ್ನ ಪ್ರಭಾವ ಬೀರಿದೆ. ಈ ಕ್ಷೇತ್ರದಲ್ಲೂ ಎಐ ತನ್ನ ದಕ್ಷತೆ ಮೆರೆದಿದ್ದು, ದೃಶ್ಯ ಸಂಯೋಜನೆ ಹಾಗೂ ಗ್ರಾಫಿಕ್ಸ್ ಬಳಕೆಯಂತಹ ವಿವಿಧ ಕೆಲಸಗಳಿಗೆ ಉತ್ತೇಜನ ನೀಡುವುದಲ್ಲದೇ, ತನ್ನ ದೂರದೃಷ್ಟಿಯ ಸಕಾರಣ ಸಿನಿಮಾ ತಯಾರಿಕಾ ಘಟಕದಲ್ಲಿ ಮೋಡಿ ಮಾಡಿದೆ ಎನ್ನಲಾಗಿದೆ.
ಸಿನಿಮಾ ಎಂಬುದು ಚಿತ್ರ ಕಲ್ಪನಾಶಕ್ತವಷ್ಟೇ ಅಲ್ಲ. ಬಹು ಆಯಾಮಗಳ ಸೃಜನತೆಯ ಪ್ರತಿಬಿಂಬ. ಇದೀಗ ಭಾರತೀಯ ಚಿತ್ರರಂಗವು ʻಎಐ-ಫಸ್ಟ್ʼ ಯುಗಕ್ಕೆ ಕಾಲಿಟ್ಟಿದೆ. ಇಲ್ಲಿಯೂ ಸಹ ತಂತ್ರಜ್ಞಾನದ ಭರಾಟೆ ಮುಂದುವರೆದಿದ್ದು, ಕಲಾತ್ಮಕತೆಗೆ ಮತ್ತಷ್ಟು ಪುಶ್ ನೀಡುತ್ತಿದೆ ಅಲ್ಲದೇ ವರ್ಕಬಿಲಿಟಿಗೆ ಸಹಕರಿಸುತ್ತಿದೆ ಎನ್ನಲಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ, ಸಿನಿಮಾದ ಚಿತ್ರಕಥೆಯಿಂದ ಹಿಡಿದು ಪ್ರಚಾರದವರೆಗೆ ವಿಸ್ತರಿಸಿದೆ ಎನ್ನಲಾಗುತ್ತಿದೆ.
ನಟರ ವಯಸ್ಸು ಇಳಿಸುವ ತಂತ್ರ - De- Aging:
ಪ್ರಖ್ಯಾತ ನಟರಾದ ಪ್ರಭಾಸ್, ನಟನೆಯ ʻಕಲ್ಕಿʼ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಪಾತ್ರವನ್ನು ಯೌವ್ವನಕ್ಕೆ ಇಳಿಸಲಾಗಿತ್ತು. ತಮಿಳು ನಟ ವಿಜಯ್ ನಟನೆಯ ಗೋಟ್ (GOAT) ಸಿನಿಮಾದಲ್ಲೂ ಈ ತಂತ್ರಜ್ಞಾನವನ್ನು ಬಳಸಲಾಗಿತ್ತೆನ್ನಲಾಗಿದೆ. ಇದು ಸಿನಿಮಾ ರಂಗದಲ್ಲಿ ಪ್ರಚಲಿತದಲ್ಲಿದೆ.
ವಾಯ್ಸ್ ಕ್ಲೋನಿಂಗ್ ಹಾಗೂ ಡಬ್ಬಿಂಗ್:
ಇತ್ತೀಚೆಗೆ ಚರ್ಚೆಯಲ್ಲಿರುವ ಹಲವು ಚಲನಚಿತ್ರಗಳಿಗೆ ತಂತ್ರಜ್ಞಾನದ ಬಳಕೆಯು ಸಿನಿ ಕಾರ್ಯಗಳನ್ನು ಸುಲಭಗೊಳಿಸಿದೆ. ಅದೇ ರೀತಿ ವಾಯ್ಸ್ ಕ್ಲೋನಿಂಗ್, ಎಂದರೆ ಮೃತ ನಟರ ಧ್ವನಿಯನ್ನು ಎಐ ಮೂಲಕ ಮರುಸೃಷ್ಟಿಸಲು ಉಪಯೋಗಿಸಲಾಗಿದೆ. ಇದರೊಟ್ಟಿಗೆ ಬಹುಭಾಷಾ ಡಬ್ಬಿಂಗ್ ಸರಳಗೊಳಿಸಲು ಸಹಕರಿಸುತ್ತದೆ ಎನ್ನಲಾಗಿದೆ.
ಇದಷ್ಟೇ ಅಲ್ಲದೇ, ಎಐ ಟೂಲ್ಸ್‌ಗಳಿಂದ ಸಿನಿಮಾದ ಇನ್ನಿತರೆ ಕಾರ್ಯವಿಧಾನಗಳು, ಕ್ರಿಯೇಟಿವ್ ಅಂಡ್ ಪ್ರೊಡಕ್ಷನ್‌ಗೆ ಆಡ್-ಆನ್ ಬೆನಿಫಿಟ್ ನೀಡಿದೆ ಎಂದು ವರದಿಯು ವಿಶ್ಲೇಷಿಸಿದೆ. ಇದು ಭವಿಷ್ಯದ ಚಿತ್ರರಂಗ ಕ್ಷೇತ್ರದ ಯಶಸ್ಸನ್ನು ನಿರ್ಧರಿಸಲಿದೆ ಎಂದು ಅಂದಾಜಿಸಲಾಗಿದೆ. Freedom: The Courage to Be Yourself Paperback – 1 June 2004
ಪ್ರಮುಖ ಸವಾಲುಗಳು:
ಸಿನಿಮಾ ಉದ್ಯಮದಲ್ಲಿ ಎಐ ಆಗಮನವು, ಹಲವು ಕಲಾವಿದರ ಹಾಗೂ ಉದ್ಯೋಗಿಗಳ ಉದ್ಯೋಗಕ್ಕೆ ಸಂಚಕಾರವಾಗಬಹುದು ಎನ್ನಲಾಗಿದೆ. ಉದಾಹರಣೆಗೆ, ಎಡಿಟಿಂಗ್, ಗ್ರಾಫಿಕ್ಸ್ ಹಾಗೂ ಸ್ಕ್ರಿಪ್ಟ್, ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ಸ್‌ಗಳಿಗೆ ಸವಾಲೆಸಗುತ್ತದೆ.
ಹಕ್ಕುಸ್ವಾಮ್ಯ ಹಾಗೂ ನಟರ ಧ್ವನಿ ಅಥವಾ ಮುಖವನ್ನು ದುರ್ಬಳಕೆ ಮಾಡಿಕೊಳ್ಳುವುದು ಡೀಪ್‌ಫೇಕ್‌ನ ಕುರಿತ ಅಲಿಗೇಷನ್ಸ್ ಚಿತ್ರರಂಗದಲ್ಲಿ ಕಠಿಣ ನಿಯಮಗಳ ಪಾಲಿಸೀಸ್‌ಗೆ ತೊಂದರೆಯುಂಟು ಮಾಡಬಹುದೆನ್ನಲಾಗಿದೆ. ಇದನ್ನೂ ಓದಿ: ಕಂಟೆಂಟ್ ಕ್ರಿಯೇಷನ್ ಹಾಗೂ ಮ್ಯಾನೇಜ್‌ಮೆಂಟ್: ಯಾರು ಬೆಸ್ಟ್ - ಎಐ ಅಥವಾ ಮಾನವನಾ?