Skip to main content
ವಿಡಿಯೋ
technology

ಮೆಟಾ - ಎಐ ಉನ್ನತೀಕರಣಕ್ಕಾಗಿ ಚೀನಾದ Manus ಖರೀದಿ

By Shravanthi R
ಮೆಟಾ - ಎಐ ಉನ್ನತೀಕರಣಕ್ಕಾಗಿ ಚೀನಾದ Manus ಖರೀದಿ

ಸೋಷಿಯಲ್‌ ಮೀಡಿಯಾದ ಮಾಸ್ಟರ್‌ ಸ್ಟ್ರೋಕ್‌ ʻಮೆಟಾʼ ತನ್ನ ಅಡ್ವಾನ್ಸ್ಡ್‌ ಎಐ ತಂತ್ರಜ್ಞಾನಕ್ಕಾಗಿ ಚೀನಾದ AI ಸ್ಟಾರ್ಟ್‌ಅಪ್‌ Manus ಅನ್ನು ಖರೀದಿಸುವುದಾಗಿ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳ ಪ್ರಮುಖ ಫ್ಲಾಟ್‌ಫಾರ್ಮ್ಸ್‌ ಒಡೆಯನಾಗಿರುವ ʻಮೆಟಾʼ ಸಂಸ್ಥೆಯು ಕೃತಕಬುದ್ದಿಮತ್ತೆ ಸುಧಾರಣೆಗಾಗಿ ಹಾಗೂ ಕಂಪನಿಯ ಸುದೀರ್ಘ ಎಐ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಚೀನಾ ದೇಶದ Manus ಎಂಬ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ ಸ್ಟಾರ್ಟ್‌ಅಪ್‌ನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ವರದಿ ತಿಳಿಸಿದೆ. 

Manus ವಿಶೇಷತೆ ಏನು?

ವಿಶ್ಲೇಷಕರ ಪ್ರಕಾರ, ಇದು ಎಐ ಅಭಿವೃದ್ದಿಪಡಿಸಿದ, ಸ್ವಾಯತ್ತ ಎಐ ಏಜೆಂಟ್‌ಗಳ ಮೇಲೆ ಕೇಂದ್ರೀಕೃತವಾದ, ಕಡಿಮೆ ಪ್ರಾಂಪ್ಟ್‌ನಲ್ಲಿ ನಿರ್ಧಿಷ್ಟ ಕಾರ್ಯಗಳನ್ನು ತಾನೇ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. 

Manus ಸಿಂಗಾಪುರ್‌ನಲ್ಲಿ ನೆಲೆಗೊಂಡಿರುವ ಕಂಪನಿ ಎಂದು ಗುರುತಿಸಲಾಗಿದ್ದು, ಗ್ಲೋಬಲ್‌ ಎಐ ತಂತ್ರಜ್ಞಾನ ತಂಡವಾಗಿ ಬೆಳೆದಿದೆ. ಈ ಬಗ್ಗೆ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಇದರ ಮೌಲ್ಯವು $2 ರಿಂದ $3 ಬಿಲಿಯನ್‌ ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ. SOULWIT Replacement Earpads for Airpods Max Over-Ear Headphones, Ear Pads Cushions with Durable Mesh Fabric, Softer Foam - Space Gray

ಮೆಟಾದ ಎಐ, ಇನ್ಸ್ಟಾಗ್ರಾಂ, ಫೇಸ್‌ಬುಕ್‌ ಹಾಗೂ ವಾಟ್ಸ್ಯಾಪ್‌ಗಳ ಎಐ ಫೀಚರ್ಸ್‌ಗಳನ್ನು ಉತ್ತಮಗೊಳಿಸಲು ಇದು ಸಹಾಯ ಮಾಡಲಿದ್ದು, ಈ ಬಗ್ಗೆ ಇನ್ನಷ್ಟು ನಿರ್ಧಿಷ್ಟ ಮಾಹಿತಿಗಳು ಹೊರಬೀಳಲಿರುವ ಕುರಿತಾಗಿ ನಿರೀಕ್ಷಿಸಲಾಗುತ್ತಿದೆ. ಇದನ್ನೂ ಓದಿ: ಕಲಾತ್ಮಕತೆಗೆ ತಂತ್ರಜ್ಞಾನದ ಪುಶ್‌: ಭಾರತೀಯ ಸಿನಿಮಾಗಳಲ್ಲಿ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ ಸಖ್ಯವೇ!?