Skip to main content
ವಿಡಿಯೋ
general

QR Code Scam: ಪೇಮೆಂಟ್‌ ಸ್ಕ್ಯಾನ್‌ ಸುರಕ್ಷಿತವಾಗಿ ಮಾಡುತ್ತಿದ್ದೇವೆಯೇ - ಪಾರಾಗುವುದು ಹೇಗೆ!?

By Shravanthi R
QR Code Scam: ಪೇಮೆಂಟ್‌ ಸ್ಕ್ಯಾನ್‌ ಸುರಕ್ಷಿತವಾಗಿ ಮಾಡುತ್ತಿದ್ದೇವೆಯೇ - ಪಾರಾಗುವುದು ಹೇಗೆ!?

ಭದ್ರತಾ ವ್ಯವಸ್ಥೆಗಳ ಹೊರತಾಗಿ, ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೆಚ್ಚು ಗುರಿಯಾಗಿಸಿ, ನಕಲಿ ಡೊಮೇನ್‌, ಯುಆರ್‌ಎಲ್‌ ಹಾಗೂ ಬ್ರೌಸರ್‌ಗಳಲ್ಲದೇ, ಬಾಹ್ಯವಾಗೂ ಕ್ಯೂಆರ್‌ ಕೋಡ್‌ ಬಳಕೆ ಮಾಡಿ ಸೈಬರ್‌ ವಂಚಕರು QR Code Scam ಮಾಡುತ್ತಾರೆ ಎಂದು ವರದಿಯು ತಿಳಿಸಿದೆ.

ಸೈಬರ್‌ ಅಪರಾಧ ತಂತ್ರಗಳಲ್ಲಿ QR Code Scam ಕೂಡ ಒಂದಾಗಿದೆ. ವೇಗವಾಗಿ ಹೆಚ್ಚಿತ್ತಿರುವ ತಾಂತ್ರಿಕ ಮೋಸಕ್ಕೆ ಇದು ಸೇರಿಕೊಂಡಿದ್ದು, ಇದನ್ನು ಕ್ಷಿಶಿಂಗ್‌ ಅಥವಾ ಕ್ಯೂ ಆರ್‌ ಕೋಡ್‌ ಫಿಶಿಂಗ್‌ ಇಮೇಜ್‌, ಸ್ಕಾನರ್‌ ಬಳಸಿ ಅಪಾಯಕಾರಿ ಲಿಂಕ್‌ಗಳ ಮೂಲಕ ಅಥವಾ ದುರುದ್ದೇಶಪೂರಿತ QR Code ಗಳ ಸ್ಕ್ಯಾನ್‌ ಮುಖೇನ ಬಳಕೆದಾರರನ್ನು ವಂಚಿಸಲಾಗುತ್ತದೆ. 

ವಂಚಕರು ಸಾಂಪ್ರದಾಯಿಕ ಇಮೇಲ್‌ ಭದ್ರತಾ ಫಿಲ್ಟರ್‌ಗಳನ್ನು ಬೈಪಾಸ್‌ ಮಾಡಲು ಈ ವಿಧಾನವನ್ನು ಬಳಸುವರು ಎನ್ನಲಾಗಿದೆ. ಇದು ಪ್ರಮುಖವಾಗಿ ಮೊಬೈಲ್‌ ಬಳಕೆದಾರರ ಸೆಕ್ಯುರಿಟಿ ದುರ್ಬಲತೆಯನ್ನು ಪ್ರಾಥಮಿಕವಾಗಿ ಗುರಿಯಾಗಿಸಲಾಗುತ್ತದೆ ಎಂದು ತಿಳಿಸಲಾಗಿದೆ. 

ಫಿಶಿಂಗ್‌ ಎಂದರೆ ಹಾನಿಕಾರಕ ಸೋಷಿಯಲ್‌ ಇಂಜಿನಿಯರಿಂಗ್‌ ಟ್ರಿಕ್ಸ್‌ ಬಳಸಿ ಮಾಡುವುದು ಮತ್ತು ಕ್ಷಿಶಿಂಗ್‌ ಎಂದರೆ, ಕ್ಯೂಆರ್‌ ಕೋಡ್‌ ಮೂಲಕ ವಂಚಿಸುವುದಾಗಿದೆ. ಇವುಗಳನ್ನು ನಕಲಿ ಟಿಕೆಟ್‌ಗಳು, ಪೋಸ್ಟರ್ಸ್‌, ಇಮೇಲ್‌ಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ ಸ್ಟಿಕ್ಕರ್‌ಗಳ ಮೂಲಕ ವಂಚನೆಗೆ ಬಲೆ ಹಾಕಿರುತ್ತಾರೆ. ಇದರಲ್ಲಿ ಮಲಿಷಿಯಸ್‌ ಯುಆರ್‌ಎಲ್‌ ಗಳನ್ನು ಎಂಬೆಡ್‌ ಮಾಡಲಾಗಿರುತ್ತದೆ. TADKEE Womens Kurta Set

ಒಮ್ಮೆ ಸ್ಕ್ಯಾನ್‌ ಮಾಡಿದ ನಂತರ, ಮೋಸದ ವೆಬ್‌ಗೆ ಮರುನಿರ್ದೇಶಿಸಿ, ಬಳಕೆದಾರರ ಸೂಕ್ಷ್ಮ ಹಾಗೂ ಸಂಕೀರ್ಣ ಸವಿವರವನ್ನು ಕದಿಯಬಹುದೆನ್ನಲಾಗಿದೆ. ಸ್ಮಾರ್ಟ್‌ಪೋನ್‌ ಬಳಸುವ ಜನರನ್ನೇ ಹೆಚ್ಚು ಟಾರ್ಗೆಟ್‌ ಮಾಡಲಾಗಿ, ಈ ಬಗ್ಗೆ ಕೆಳಗಿನ ಸುರಕ್ಷತಾ ಕ್ರಮಗಳನ್ನು ಸೂಚಿಸಲಾಗಿದೆ: 

  1. ಪೂರ್ವ ಪರಿಶೀಲನೆ ಹಾಗೂ ಅನಪೇಕ್ಷಿತ QR Code ಗಳನ್ನು ಸ್ಕ್ಯಾನ್‌ ಮಾಡದೇ, ಅಧಿಕೃತ ವೆಬ್‌ಸೈಟ್‌ ಹಾಗೂ ಖಾತೆ ಪರಿಶೀಲನೆಯ ಪ್ರಾಯೋಗಿಕ ಅಭ್ಯಾಸವನ್ನು ಎಂದರೆ, ಹಸ್ತಚಾಲಿತ ಪ್ರಯತ್ನಗಳನ್ನು ಮಾಡುವುದು. 

  2. ಸಾರ್ವಜನಿಕವಾಗಿ ಇರಿಸಲಾದ QR Code ಗಳ ಬಗ್ಗೆ ಜಾಗರೂಕರಾಗಿ, ಟ್ಯಾಂಪರಿಂಗ್‌ ಚಿಹ್ನೆಗಳನ್ನು( ಅಕ್ರಮ, ಹಸ್ತಕ್ಷೇಪ ಎಂದು ಗೊತ್ತು ಮಾಡಲಾದ) ನೋಡಿ. 

  3. ಫಿಶಿಂಗ್‌- ನಿರೋಧಕ ಬಹು ಅಂಶ ಧೃಡೀಕರಣವನ್ನು ಮಾನ್ಯತೆಯನ್ನು ಪರಿಶೀಲಿಸಿ ಬಳಸುವುದು.

  4. ಡಿಜಿಟಲ್‌ ಪಾವತಿಗಳು ಎಂದಾಕ್ಷಣ, ಸಾಮಾನ್ಯವಾಗಿ ಕ್ಷಿಶಿಂಗ್‌ ಬೆದರಿಕೆಗಳು ನಿರಂತರ ಎನ್ನುವ ಸಾಧ್ಯತೆ ಹೆಚ್ಚು. ಇದರ ಅರ್ಥ, ಹಾಗೆಂದರೇನು ಹಾಗೂ ಅದರ ವಿಧಾನವನ್ನು ತಿಳಿದುಕೊಳ್ಳುವುದು ಸುರಕ್ಷಿತತೆಗೆ ಅತ್ಯಗತ್ಯ. ಇದನ್ನೂ ಓದಿ: ಮೆಟಾ - ಎಐ ಉನ್ನತೀಕರಣಕ್ಕಾಗಿ ಚೀನಾದ Manus ಖರೀದಿ

ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.