ಈ 5ಜಿ ಯುಗದಲ್ಲಿ ವಿನೂತನ ಫೋನ್‌ಗಳು ಪರಿಚಿತಗೊಳ್ಳುತ್ತಲೇ ಇವೆ. ಇಲ್ಲಿ ಸ್ಮಾರ್ಟ್‌ಪೋನ್ ಬಳಸದವರ ಸಂಖ್ಯೆ ಬಲುಕ್ಷೀಣ. ಈಗ ಮಾರುಕಟ್ಟೆಯಲ್ಲಿ 7,000/- ದಿಂದಲೇ ಉನ್ನತ ಫೀಚರ್ಸ್‌ಗಳಿರುವ ಫೋನ್‌ಗಳು ಲಭ್ಯವಿದೆ. ಇವತ್ತಿನ ದಿನ ಬಹುತೇಕ ಕೆಲಸಗಳು ಫೋನ್‌ನಿಂದಲೇ ಆಗುವುದರಿಂದ ಎಗ್ಗಿಲ್ಲದೇ ಮೊಬೈಲ್‌ಗಳು ಮಾರಾಟವಾಗುತ್ತದೆ. ಆದರೆ, ಇದೇ ಸಂದರ್ಭದಲ್ಲಿ ದೊಡ್ಡ ವಂಚನೆ ನಡೆಯುತ್ತದೆ ಎನ್ನಲಾಗಿದೆ. ಅದೇ ʻಮೊಬೈಲ್ ಟ್ಯಾಂಪರಿಂಗ್ʼ
ಕೆಲ ಕಿಡಿಗೇಡಿಗಳು, ಮೊಬೈಲ್ ಟ್ಯಾಂಪೆರಿಂಗ್ ಮಾಡುತ್ತಿದ್ದು, ಒರಿಜಿನಲ್ ಫೋನ್‌ಗಳ ರೀತಿಯೇ ಕಾಣುವ ನಕಲಿ ಪೋನ್‌ಗಳನ್ನು ಥೇಟ್ ಬ್ರ್ಯಾಂಡೆಡ್ ಫೋನ್‌ನಂತೆಯೇ ಕಾಣುವ ಹಾಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಬಳಕೆದಾರರು ತಮ್ಮ ಮೊಬೈಲ್ ಮೂಲಕವೇ ತಿಳಿಯಬಹುದಾಗಿದೆ. ಮುಖ್ಯವಾಗಿ, ಮೊದಲು ಮೊಬೈಲ್ ಬ್ರ್ಯಾಂಡ್ ಹೆಸರನ್ನು ಗಮನಿಸುವುದು. ತಪ್ಪಾದ ಅಕ್ಷರಗಳಿಂದ ಕೂಡಿದ್ದರೆ ಉದಾಹರಣೆಗೆ, (Samsung - Sammsung). SHIENZY Women Co-Ord Set || Women 2 Pic Stylish Kurta Set (1666)
ದೂರಸಂಪರ್ಕ ಇಲಾಖೆಯನ್ನು ಸಂಪರ್ಕಿಸಿ ಪರಿಶೀಲಿಸಬಹುದು. ಮೊಬೈಲ್‌ನಲ್ಲಿ KYM ಎಂದು ಟೈಪ್ ಮಾಡಿ ಸ್ಪೇಸ್ ನೀಡಿ. ಅನಂತರ, 15 ಅಂಕಿಯ IMEI ಸಂಖ್ಯೆಯನ್ನು ಫೋನ್‌ನ ಒರಿಜಿನಲ್ ಪ್ಯಾಕಿಂಗ್, ಬ್ಯಾಟರಿಯಲ್ಲಿರುತ್ತದೆ (Settings > About Phone/General > About, by dialing *#06# / ಕೆಲವೊಮ್ಮೆ ಸಿಮ್ ಟ್ರೇ) ನಮೂದಿಸಬೇಕಿರುತ್ತದೆ. ಅದನ್ನು 14422 ಗೆ ಕಳುಹಿಸಿ. ಸ್ವಲ್ಪ ಸಮಯದ ನಂತರ, ನಿಮ್ಮ ಮೊಬೈಲ್‌ಗೆ ಮತ್ತೊಂದು ಮೆಸೇಜ್ ಬರುತ್ತದೆ. ಅದರಲ್ಲಿ ನಿಮ್ಮ ಮೊಬೈಲ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ವಿವರ ಸಿಗುತ್ತದೆ ಎಂದು ತಿಳಿಸಲಾಗಿದೆ.
ಮೊಬೈಲ್ ಕಳುವಾದರೆ ಏನು ಮಾಡುವುದು ?
ಮೊಬೈಲ್ ಕಳೆದುಹೋದಲ್ಲಿ, ಡಿವೈಸ್‌ನ Find my Phone ಆಪ್ಶನ್ ಇರುತ್ತದೆ. iPhone ಆದ ಸಂದರ್ಭದಲ್ಲಿ Find my iPhone ಇರುತ್ತದೆ. ಇದು ಫೋನ್ ಟ್ರ್ಯಾಕ್ ಮಾಡಲು ಸಹಕರಿಸುವುದು; ಒಂದು ವೇಳೆ ನೆಟ್‌ವರ್ಕ್ ಸಂಪರ್ಕ ಅಥವಾ ಲೊಕೇಶನ್ ಆನ್ ಇಲ್ಲದಿದ್ದಲ್ಲಿ, ಲಾಸ್ಟ್ ಲೊಕೆಶನ್ ತಿಳಿಯಬಹುದು. ಇದಲ್ಲದೇ, ಕಾನೂನಾತ್ಮಕವಾಗಿ ದೂರು ನೀಡಿ, IMEI ಸಂಖ್ಯೆ ತಿಳಿದಿರುವುದು ಮುಖ್ಯವಾಗಿರುತ್ತದೆ. ಇದನ್ನೂ ಓದಿ: QR Code Scam: ಪೇಮೆಂಟ್ ಸ್ಕ್ಯಾನ್ ಸುರಕ್ಷಿತವಾಗಿ ಮಾಡುತ್ತಿದ್ದೇವೆಯೇ - ಪಾರಾಗುವುದು ಹೇಗೆ!?
ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.