Skip to main content
ವಿಡಿಯೋ
general

Social Media Platforms: ಅಶ್ಲೀಲ ಹಾಗೂ ಕಾನೂನುಬಾಹಿರದಂತಹ ಕಂಟೆಂಟ್‌ ಹರಿವು- ಕೇಂದ್ರ ಸರ್ಕಾರದ ಎಚ್ಚರಿಕೆ!

By Shravanthi R
Social Media Platforms: ಅಶ್ಲೀಲ ಹಾಗೂ ಕಾನೂನುಬಾಹಿರದಂತಹ ಕಂಟೆಂಟ್‌ ಹರಿವು- ಕೇಂದ್ರ ಸರ್ಕಾರದ ಎಚ್ಚರಿಕೆ!

ದಿನನಿತ್ಯ ಸೋಷಿಯಲೈಸ್‌ ಆಗುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ತಪ್ಪು ಮಾಹಿತಿ ಹಾಗೂ ಕಾನೂನುಬಾಹಿರ ಅಂಶಗಳನ್ನು ನಿಯಂತ್ರಿಸುವಂತೆ, ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಸಲಹೆ-ಸೂಚನೆಗಳನ್ನು ನೀಡಿ ಎಚ್ಚರಿಸಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುವ ತಪ್ಪು ಮಾಹಿತಿ, ಅಶ್ಲೀಲ ಅಂಶಗಳುಳ್ಳ ಕಂಟೆಂಟ್‌ ವಿಚಾರಗಳ ಬಗ್ಗೆ ಸರ್ಕಾರವು ಕಡಿವಾಣ ಹಾಕಲು ಮುಂದಾಗಿದೆ. ದೇಶದ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಬಗ್ಗೆ ಸ್ಪಷ್ಟಪಡಿಸಿದ್ದು, ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ, ಸಾಮಾಜಿಕ ಮಾಧ್ಯಮಗಳ ಪ್ರಭಾವವನ್ನು ಸೂಕ್ಷ್ಮ ಹಾಗೂ ಗಂಭೀರವಾಗಿ ಪರಿಗಣಿಸಿದೆ.

ವರದಿಗಳ ಪ್ರಕಾರ, ಇಂಟರ್‌ನೆಟ್‌ನಲ್ಲಿ, ಸೋಷಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್ಸ್‌ಗಳಲ್ಲಿ ಹರಿದಾಡುವ ವಿಷಯಗಳನ್ನು ಪರಿಶೀಲಿಸುವುದು ಹಾಗೂ ಅದನ್ನು ನಿಯಂತ್ರಿಸುವ ಜವಾಬ್ದಾರಿ ಆಯಾ ಕಂಪನಿಗಳದ್ದೇ ಆಗಿದೆ. ಇದು ಹೊಸ ನಿಯಮವೇನಲ್ಲ ಬದಲಾಗಿ ಇರುವ ಕಟ್ಟಳೆಗಳನ್ನು ಬದ್ದವಾಗಿ ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಈ ಮೂಲಕ ಸಾರ್ವಜನಿಕವಾಗಿ ಎಲ್ಲರಿಗೂ ತಮ್ಮ ವಿಚಾರವನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವಿದೆ ಆದರೆ, ಕಾನೂನು ಚೌಕಟ್ಟನ್ನು ಮೀರುವಂತಾಗಬಾರದು. ಈ ಹಿನ್ನಲೆಯಲ್ಲಿ ತಂತ್ರಜ್ಞಾನ ಆಧಾರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ. 

ಇದರೊಟ್ಟಿಗೆ, ಐಟಿ ಕಾನೂನು ಪರಿಷ್ಕರಣೆಗೆ ಸಂಬಂಧಪಟ್ಟಂತೆ, ಸಾಮಾಜಿಕ ಮಾಧ್ಯಮಗಳು ಕೇವಲ ವೇದಿಕೆಗಳಾಗಿ ಉಳಿಯದೇ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರಬೇಕು, ಕಾನೂನಿನ ನಿಬಂಧನೆಗಳಿಗೆ ಒಳಪಟ್ಟಿದ್ದು, ನಿಯಮಗಳ ಪಾಲನೆ ಕಡ್ಡಾಯ ಎಂದಿದೆ. ಯಾವುದೇ ಕಾನೂನುಬಾಹಿರ ಹಾಗೂ ಅಶ್ಲೀಲ ಅಥವಾ ಅಸಮಂಜಸ ವಿಷಯಗಳ ಹರಿವು ಕಂಡುಬಂದಾಗ ಕೂಡಲೇ ಪತ್ತೆಹಚ್ಚಿ ಅದನ್ನು ತೆರವುಗೊಳಿಸಬೇಕೆಂದು ತಿಳಿಸಲಾಗಿದೆ. Amazon Brand - Symbol Women's Blend Cotton Stretch Bodycon One Piece Midi Length Dress (Available in Plus Sizes)

ಮುಖ್ಯವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋಗಳು, ಖಾಸಗಿ ಫೋಟೋಗಳ ದುರ್ಬಳಕೆ, ನಕಲಿ ವಿಡಿಯೋಗಳು(ಡೀಪ್‌ಫೇಕ್‌) ಹಾಗೂ ಕೆಟ್ಟ ಭಾಷೆ ಬಳಕೆಯಂತಹ ಕಂಟೆಂಟ್‌ಗಳನ್ನು 24 ಗಂಟೆಗಳ ಒಳಗಾಗಿ ಡಿಲೀಟ್‌ ಮಾಡಬೇಕೆಂದು ಕಡ್ಡಾಯಗೊಳಿಸಲಾಗಿದೆ. ಈ ನಿಯಮಗಳ ಉಲ್ಲಂಘನೆಯಾದರೆ, ಸಾಮಾಜಿಕ ಮಾಧ್ಯಮ ಸಂಸ್ಥೆಗಳ ವಿರುದ್ದ ಕ್ರಮಕೈಗೊಳ್ಳುವುದಾಗಿ ಸರ್ಕಾರವು ಎಚ್ಚರಿಸಿದೆ. ಇದನ್ನೂ ಓದಿ: ಮೊಬೈಲ್‌ ಟ್ಯಾಂಪರಿಂಗ್‌: ನಕಲಿ ಸ್ಮಾರ್ಟ್‌ಫೋನ್‌ಗಳ ಹಾವಳಿ - ಕಂಡುಹಿಡಿಯುವುದು ಹೇಗೆ!?