Skip to main content
ವಿಡಿಯೋ
1/2
spirituality

ಹೊಸ ವರ್ಷ 2026 ಸ್ವಾಗತಕ್ಕೆ ಮಂತ್ರಾಲಯ ತುಂಬಿ ತುಳುಕುತ್ತಿದೆ: ರಾಯರ ಕೃಪೆಗೆ ಭಕ್ತಸಾಗರ..!

By Sushmitha R
ಹೊಸ ವರ್ಷ 2026 ಸ್ವಾಗತಕ್ಕೆ ಮಂತ್ರಾಲಯ ತುಂಬಿ ತುಳುಕುತ್ತಿದೆ: ರಾಯರ ಕೃಪೆಗೆ ಭಕ್ತಸಾಗರ..!

2026ರ ಹೊಸ ವರ್ಷದ ಉದಯದೊಂದಿಗೆ ಭಕ್ತಾದಿಗಳಲ್ಲಿ ಹೊಸ ಚೈತನ್ಯ ಮನೆಮಾಡಿದೆ.

2026ರ ಹೊಸ ವರ್ಷದ ಉದಯದೊಂದಿಗೆ ಭಕ್ತಾದಿಗಳಲ್ಲಿ ಹೊಸ ಚೈತನ್ಯ ಮನೆಮಾಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಆಧ್ಯಾತ್ಮಿಕ ಪುಣ್ಯಕ್ಷೇತ್ರವಾದ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬಂದಿದೆ. ರಾಯರೇ, ಈ ಹೊಸ ವರ್ಷದಲ್ಲಿ ಎಲ್ಲರಿಗೂ ಒಳಿತು ಮಾಡು ಎಂದು ಪ್ರಾರ್ಥಿಸುತ್ತಾ, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

2025ರ ವರ್ಷಾಂತ್ಯ ಮತ್ತು 2026ರ ಆರಂಭವು ವಾರಾಂತ್ಯ ಹಾಗೂ ಕ್ರಿಸ್‌ಮಸ್ ರಜೆಗಳ ಸಾಲಿನಲ್ಲಿ ಬಂದಿರುವುದರಿಂದ, ಪ್ರವಾಸಿಗರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಂತ್ರಾಲಯದತ್ತ ಮುಖ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಭಕ್ತರು ರಾಯಚೂರು ಜಿಲ್ಲೆಯ ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ.SINDOORI Kurta for Women S to 6XL Plus Size Multi Colour

ಭಕ್ತರು ಮಠಕ್ಕೆ ತೆರಳುವ ಮುನ್ನ ಪವಿತ್ರ ತುಂಗಾಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ನದಿಯ ತಟದಲ್ಲಿ ಜನವೋ ಜನ! ಸ್ನಾನದ ಬಳಿಕ ರಾಯರ ಮೃತ್ತಿಕಾ ಬೃಂದಾವನದ ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಭಕ್ತಿ ಸಮರ್ಪಿಸುತ್ತಿದ್ದಾರೆ. ರಾಯರ ದರ್ಶನ ಪಡೆದ ಭಕ್ತರ ಮುಖದಲ್ಲಿ ಒಂದು ರೀತಿಯ ಧನ್ಯತಾ ಭಾವ ಎದ್ದು ಕಾಣುತ್ತಿದೆ.

ಡಿಸೆಂಬರ್ ಕೊನೆಯ ವಾರದಿಂದಲೇ ಆರಂಭವಾದ ಈ ರಜೆಗಳ ಸಂಭ್ರಮ, ಹೊಸ ವರ್ಷದ ಮೊದಲ ದಿನದಂದು ಪರಾಕಾಷ್ಠೆ ತಲುಪಿದೆ. ಕುಟುಂಬ ಸಮೇತರಾಗಿ ಬಂದಿರುವ ಜನರು ಮಂತ್ರಾಲಯದ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ.ಇದನ್ನು ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಬಂಪರ್ ಗಿಫ್ಟ್: ಲೆವೆಲ್ 1 ರಿಂದ 18ರ ವರೆಗಿನ ನೌಕರರಿಗೆ ಸಿಗಲಿದೆ ಡಬಲ್ ಧಮಾಕಾ..!

ಮಠದ ವತಿಯಿಂದ ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಹಾಗೂ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರ ಸಂಖ್ಯೆ ಮಿತಿ ಮೀರಿರುವುದರಿಂದ ಮಂತ್ರಾಲಯದ ಸುತ್ತಮುತ್ತಲ ರಸ್ತೆಗಳು ಮತ್ತು ಹೋಟೆಲ್‌ಗಳು ಜನರಿಂದ ತುಂಬಿ ತುಳುಕುತ್ತಿವೆ.

ಒಟ್ಟಾರೆಯಾಗಿ, 2026ರ ಆರಂಭವು ಭಕ್ತಿ ಮತ್ತು ಶ್ರದ್ಧೆಯ ಸಂಗಮವಾಗಿ ಮಾರ್ಪಟ್ಟಿದೆ. ರಾಯರ ಆಶೀರ್ವಾದದೊಂದಿಗೆ ಹೊಸ ಬದುಕನ್ನು ಆರಂಭಿಸಬೇಕು ಎಂಬ ಆಶಯ ಎಲ್ಲರಲ್ಲೂ ಮನೆಮಾಡಿದೆ.ಇದನ್ನು ಓದಿ: 'ನನ್ನ ದೂರಿಗೆ ಬೆಲೆ ಇಲ್ವಾ?': ಸೈಬರ್ ಪೊಲೀಸರ ವಿರುದ್ಧ ವಿಜಯಲಕ್ಷ್ಮಿ ದರ್ಶನ್‌ ಗಂಭೀರ ಆರೋಪ