ಭಾರತೀಯ ಮೂಲದ ಅತಿದೊಡ್ಡ ಹಣಕಾಸು ಹಗರಣಗಳ ದಂತಕಥೆಗಳನ್ನು ಒಳಗೊಂಡ ವೆಬ್‌ಸರಣಿಯಾದ ʻಬ್ಯಾಡ್ ಬಾಯ್ ಬಿಲಿಯನೇರ್ಸ್ʼ ನೆಟ್‌ಫ್ಲಿಕ್ಸ್ ಪ್ರಸಾರಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈದರಾಬಾದ್ ನ್ಯಾಯಾಲಯವು (ಬೈರಾಜು ರಾಮಲಿಂಗ ರಾಜು ನೆಟ್‌ಫ್ಲಿಕ್ಸ್ ನಡುವಣ ಪ್ರಕರಣ) ಮಂಗಳವಾರ ರದ್ದುಗೊಳಿಸಿದೆ.
ಈ ಆದೇಶದ ಬೆನ್ನಲ್ಲೇ, ತನಿಖಾ ಸಾಕ್ಷ್ಯಾಚಿತ್ರವನ್ನು ನೆಟ್‌ಫ್ಲಿಕ್ಸ್ ಪ್ರಸಾರ ಮಾಡಿದೆ ಎಂದು ವರದಿಯಾಗಿದೆ. 2020 ರಲ್ಲಿ ಬಿಡುಗಡೆಯಾಗಿದ್ದ ಇದುವೆ, ವಿಜಯ್ ಮಲ್ಯ, ನೀರವ್ ಮೋದಿ, ಸುಬ್ರತ ರಾಯ್ ಹಾಗೂ ರಾಮಲಿಂಗ ರಾಜು ಅವರಂಥ ಉದ್ಯಮಿಗಳನ್ನು ಕೇಂದ್ರೀಕರಿಸಿ ಮಾಡಲಾಗಿರುವ ಡಾಕ್ಯುಮೆಂಟರಿಯಾಗಿದೆ ಎನ್ನಲಾಗಿದೆ.
ಭಾರತೀಯ ಬಿಜಿನೆಸ್ ಹಾಗೂ ಹಣಕಾಸು ವಂಚನೆಗಳ ಕುರಿತಾಗಿರುವ ಈ ಬಹುಚರ್ಚಿತ ಸಾಕ್ಷ್ಯಾಸರಣಿಯು, ಸತ್ಯಂ ಕಂಪ್ಯೂಟರ್ಸ್‌ನ ಸಂಸ್ಥಾಪಕ ರಾಮಲಿಂಗ ರಾಜು ಅವರ ಎಪಿಸೋಡ್ ಪ್ರಸಾರಕ್ಕಾಗಿ ಸುದೀರ್ಘ ಕಾನೂನು ಹೋರಾಟ ಕಂಡಿತು. ಸುಮಾರು 7,000 ಕೋಟಿ ಐಟಿ ಕಂಪನಿಯ ವಂಚಿತ ಪ್ರಕರಣಕ್ಕೆ ಸಂಬಂಧಿಸಿದ, ಈ ಸಾಕ್ಷ್ಯಚಿತ್ರದಿಂದ ತಮ್ಮ ಗೌರವಕ್ಕೆ ಧಕ್ಕೆ ಬರುವುದಾಗಿ ರಾಜು ಆಕ್ಷೇಪಣೆ ಇಟ್ಟಿದ್ದರು. Peesafe Natural Intimate Wipes - 10 Count (Pack of 4)
2020 ಸೆಪ್ಟೆಂಬರ್ 01 ರಂದು ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್, ಎಪಿಸೋಡ್ ಬಿಡುಗಡೆ ಮಾಡದಂತೆ ತಡೆ ನೀಡಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡಿದ್ದು ಟ್ರೆಂಡಿಂಗ್‌ನಲ್ಲಿದೆ ಎನ್ನಲಾಗಿದೆ. ಈ ಬಗ್ಗೆ, ವೀಕ್ಷಕರಲ್ಲಿ ಕುತೂಹಲವನ್ನುಂಟು ಮಾಡಿದೆ. ಇದರಿಂದ ಬಿಜಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಕಾರ್ಪೋರೇಟ್ ವಲಯದ ಹಗರಣಗಳ ಒಳನೋಟ ಹಾಗೂ ವೈಫಲ್ಯಗಳ ಬಗ್ಗೆ ತಿಳಿಯುವುದು ಗಮನಾರ್ಹ ಅಂಶವಾಗಿದೆ. ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆ: "ನನ್ನ ಬದುಕಿನ ಬೆಳಕು" ಎನ್ನುವ ವಿರಾಟ್ ಕೊಹ್ಲಿ ಪೋಸ್ಟ್ ವೈರಲ್!