Skip to main content
ವಿಡಿಯೋ
1/2
metro

2026ರ ಹೊಸ ವರ್ಷದ ದಿನ ಬೆಂಗಳೂರು ಮೆಟ್ರೋಗೆ ಭರ್ಜರಿ ಆದಾಯ..!

By Sushmitha R
2026ರ ಹೊಸ ವರ್ಷದ ದಿನ ಬೆಂಗಳೂರು ಮೆಟ್ರೋಗೆ ಭರ್ಜರಿ ಆದಾಯ..!

2026ರ ಹೊಸ ವರ್ಷದ ಸಂಭ್ರಮಾಚರಣೆಯು ಬೆಂಗಳೂರಿನ 'ನಮ್ಮ ಮೆಟ್ರೋ' ಪಾಲಿಗೆ ಬಂಪರ್ ಆದಾಯ ತಂದುಕೊಟ್ಟಿದೆ.

2026ರ ಹೊಸ ವರ್ಷದ ಸಂಭ್ರಮಾಚರಣೆಯು ಬೆಂಗಳೂರಿನ 'ನಮ್ಮ ಮೆಟ್ರೋ' ಪಾಲಿಗೆ ಬಂಪರ್ ಆದಾಯ ತಂದುಕೊಟ್ಟಿದೆ. ನಗರದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಜನರು ಸಾಮೂಹಿಕವಾಗಿ ಮೆಟ್ರೋ ಸೇವೆಯನ್ನು ಅವಲಂಬಿಸಿದ್ದರಿಂದ ಬಿಎಂಆರ್‌ಸಿಎಲ್ ದಾಖಲೆ ಮಟ್ಟದ ಗಳಿಕೆ ಮಾಡಿದೆ.

ಹೊಸ ವರ್ಷದ ಮುನ್ನಾ ದಿನವಾದ ಡಿಸೆಂಬರ್ 31ರಂದು ನಮ್ಮ ಮೆಟ್ರೋಗೆ ಬರೋಬ್ಬರಿ 3 ಕೋಟಿ 8 ಲಕ್ಷ ರೂಪಾಯಿ ಆದಾಯ ಹರಿದುಬಂದಿದೆ. ಅಂಕಿಅಂಶಗಳ ಪ್ರಕಾರ, ಅಂದು ಒಂದೇ ದಿನ ಸುಮಾರು 8,93,903 ಲಕ್ಷ ಮಂದಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಮೆಟ್ರೋ ಕಂಡ ಅತಿ ದೊಡ್ಡ ಪ್ರಮಾಣದ ಜನದಟ್ಟಣೆಯಾಗಿದೆ.GoSriKi Women's Rayon Blend Solid Anarkali Kurta with Pant & Dupatta

ಹೊಸ ವರ್ಷಾಚರಣೆಯ ಕೇಂದ್ರಬಿಂದುಗಳಾದ ಎಂ.ಜಿ. ರಸ್ತೆ ,ಬ್ರಿಗೇಡ್ ರಸ್ತೆ, ಇಂದಿರಾನಗರ ಮತ್ತು ಕೋರಮಂಗಲ ಭಾಗಕ್ಕೆ ತೆರಳಲು ಸಾವಿರಾರು ಜನರು ಮೆಟ್ರೋ ಆಶ್ರಯಿಸಿದ್ದರು. ಭದ್ರತೆಯ ದೃಷ್ಟಿಯಿಂದ ಎಂ.ಜಿ. ರಸ್ತೆ ನಿಲ್ದಾಣದ ಪ್ರವೇಶ-ನಿರ್ಗಮನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದರೂ, ಉಳಿದೆಲ್ಲಾ ನಿಲ್ದಾಣಗಳು ಸುಗಮವಾಗಿ ಕಾರ್ಯನಿರ್ವಹಿಸಿದವು.

ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು ಮತ್ತು ರಸ್ತೆಗಳಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ವಿಸ್ತರಣೆ ನಿರ್ಧಾರವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಸಾರ್ವಜನಿಕರು ಮೆಟ್ರೋ ಸೇವೆಯನ್ನು ಮೆಚ್ಚಿಕೊಂಡಿದ್ದು, ಇದು ಬಿಎಂಆರ್‌ಸಿಎಲ್ ಪಾಲಿಗೆ ಹೊಸ ವರ್ಷದ ಆರಂಭದಲ್ಲೇ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.ಇದನ್ನು ಓದಿ: `ಬ್ಯಾಡ್‌ ಬಾಯ್‌ ಬಿಲಿಯನೇರ್ಸ್‌' ನೆಟ್‌ಫ್ಲಿಕ್ಸ್‌ ಸರಣಿ - ತಡೆಯಾಜ್ಞೆ ತೆರವುಗೊಂಡ ನಂತರ ʻಸತ್ಯಂʼ ಸಂಚಿಕೆ ಬಿಡುಗಡೆ!?