Skip to main content
ವಿಡಿಯೋ
business

ಷೇರು ಮಾರುಕಟ್ಟೆ ಅಪ್‌ಡೇಟ್‌: ಹೊಸ ವರ್ಷದ ಹಿನ್ನಲೆ - ವಹಿವಾಟು ನಡೆಯಲಿವೆಯೇ ಇಲ್ಲವೇ!?

By Shravanthi R
ಷೇರು ಮಾರುಕಟ್ಟೆ ಅಪ್‌ಡೇಟ್‌: ಹೊಸ ವರ್ಷದ ಹಿನ್ನಲೆ - ವಹಿವಾಟು ನಡೆಯಲಿವೆಯೇ ಇಲ್ಲವೇ!?

ಹೊಸ ವರ್ಷದ ಮೊದಲ ದಿನ, ಭಾರತೀಯ ಷೇರು ಸೂಚ್ಯಂಕಗಳು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ್ದು, ಇಂದು (ಜ.01, 2026) ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ತಿಳಿಸಲಾಗಿದೆ.

ಹೊಸ ವರ್ಷಾರಂಭದಲ್ಲಿ ಜಾಗತಿಕವಾಗಿ ಕೆಲ ದೇಶಗಳ ಷೇರು ಮಾರುಕಟ್ಟೆಗಳು ಮುಚ್ಚಿವೆ. ಆದರೆ, ಭಾರತೀಯ ಹೂಡಿಕೆದಾರರಲ್ಲಿ ಈ ಬಗ್ಗೆ ಗೊಂದಲವಿದ್ದು, ಮಾಹಿತಿ ಪ್ರಕಾರ ಜನವರಿ 1, 2026 ಗುರುವಾರದಂದು ಎಂದಿನಂತೆ ವಹಿವಾಟುಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ. 

ನ್ಯಾಷನಲ್‌ ಸ್ಟಾಕ್‌ ಎಕ್ಸೇಂಚ್‌ (NSE) ತಿಳಿಸಿರುವ ರಜಾದಿನಗಳ ವರದಿ ಪ್ರಕಾರ, 2026 ಜನವರಿ 01 ರಂದು ರಜೆಯಿರುವುದಿಲ್ಲ. ಈ ತಿಂಗಳ 26 ರ, ಗಣರಾಜ್ಯೋತ್ಸವ ದಿನದ ಅಂಗವಾಗಿ, ಒಂದು ದಿನದ ಮಟ್ಟಿಗೆ ರಜೆ ಇರಲಿದೆ ಎಂದು ತಿಳಿಸಿದೆ. Pee Safe Reusable Menstrual Cup for Women | Medium Size with Pouch | Ultra Soft, Odour & Rash Free|100% Medical Grade Silicone|No Leakage|Protection for Up to 8-10 Hours | US FDA Registered,Pack of 1

ಹೊಸ ವರ್ಷದ ದಿನದಂದು, ಜಾಗತಿಕ ಮಾರುಕಟ್ಟೆಗಳಲ್ಲಿ ರಜೆಯಿರುವುದರಿಂದ ವಹಿವಾಟಿನ ಪ್ರಮಾಣವನ್ನು ಅಂದಾಜಿಸಲಾಗಿದ್ದು, ಸಂಪೂರ್ಣ ರಜಾದಿನಗಳ ಮಾಹಿತಿ ಸೇರಿದಂತೆ, ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಸಂಬಂಧಿತ ಮಾರುಕಟ್ಟೆಗಳ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದಾಗಿದೆ. ಇದನ್ನೂ ಓದಿ: `ಬ್ಯಾಡ್‌ ಬಾಯ್‌ ಬಿಲಿಯನೇರ್ಸ್‌' ನೆಟ್‌ಫ್ಲಿಕ್ಸ್‌ ಸರಣಿ - ತಡೆಯಾಜ್ಞೆ ತೆರವುಗೊಂಡ ನಂತರ ʻಸತ್ಯಂʼ ಸಂಚಿಕೆ ಬಿಡುಗಡೆ!?