Skip to main content
ವಿಡಿಯೋ
business

ಬಿಸಿನೆಸ್‌ ಡಿಜಿಟಲ್‌ ಶಿಫ್ಟ್‌ - ಸವಾಲುಗಳು ಮತ್ತು ಹೊಣೆಗಾರಿಕೆ

By Shravanthi R
ಬಿಸಿನೆಸ್‌ ಡಿಜಿಟಲ್‌ ಶಿಫ್ಟ್‌ - ಸವಾಲುಗಳು ಮತ್ತು ಹೊಣೆಗಾರಿಕೆ

ಉದ್ಯಮಗಳಿಗೆ ಅಗತ್ಯವಾದ ಸ್ಥೂಲ ವ್ಯಾಪಾರ ವಾತಾವರಣದಿಂದ ಹಿಡಿದು ಅಂತರಾಷ್ಟ್ರೀಯ ವ್ಯಾಪಾರ ಪರಿಸರ ವಾತಾವರಣದವರೆಗೆ ಡಿಜಿಟಲ್‌ ಶಿಫ್ಟ್‌ಗೆ ಸಮತೋಲಿತ ಒಗ್ಗಿಕೊಳ್ಳುವುದು ಬಿಜಿನೆಸ್‌ನ ಅರ್ಥ ಮಾಡಿಕೊಳ್ಳುವುದು ಅನಿವಾರ್ಯ.

ಒಂದು ಉದ್ದಿಮೆ ಅಥವಾ ಬಿಜಿನೆಸ್‌ ಕಟ್ಟಲು ಹಲವಾರು ಪ್ರಮುಖಾಂಶಗಳು ಪ್ರಭಾವ ಬೀರುತ್ತದೆ. ಅದರಲ್ಲಿ ಮುಖ್ಯವಾಗಿ ವ್ಯಾಪಾರ ಪರಿಸರ (Business Environment) ಹಾಗೂ ಅಂತರಾಷ್ಟ್ರೀಯ ವ್ಯಾಪಾರ ಪರಿಸರವೂ (International Business Environment) ಸೇರಿಕೊಂಡಿದೆ. ಇದರಲ್ಲಿರುವ ವಿಭಾಗಗಳು ಮತ್ತು ವಿಷಯಗಳಿಗೆ ಒಳಪಡುವ ಅಂಶಗಳು ಈ ಕೆಳಗಿನಂತಿವೆ:

  1. ಸ್ಥೂಲ ವಾತಾವರಣ ಹಾಗೂ ಡಿಜಿಟಲ್‌ ಶಿಫ್ಟ್‌ - (Micro Environment & Digital Shift)

ಜಾಗತಿಕ ಮಾರುಕಟ್ಟೆಯಲ್ಲಿ, ಬಿಜಿನೆಸ್‌ಗೆ ಇಂಪ್ಯಾಕ್ಟ್‌ ಮಾಡುವ ಪ್ರಮುಖ ಅಂಶಗಳೆಂದರೆ ಅದು ಸ್ಥೂಲ ವ್ಯವಹಾರ ವಾತಾವರಣ ಅಥವಾ ಪರಿಸರವನ್ನು ಕೇಂದ್ರೀಕರಿಸುವ ವಿಷಯಗಳು - 

  • PESTEL - Political, Economic, Social, Technology, Environmental, Legal factors.

  • E-commerce, Business intelligence.

  1. ಜಾಗತಿಕ ವ್ಯಾಪಾರ ಹಾಗೂ ಆರ್ಥಿಕ ನೀತಿಗಳು -

ದೇಶ ವಿದೇಶಗಳ ನಡುವಿನ ವ್ಯಾಪಾರ ಸಂಬಂಧಗಳು, ಒಪ್ಪಂದಗಳು ಹಾಗೂ ನೀತಿಗಳಿಗೆ ಕೇಂದ್ರೀಕರಿಸುತ್ತದೆ. 

ಸವಾಲುಗಳು -

ಯಾವುದೇ ಬಿಜಿನೆಸ್‌ ಈ ಹಂತವನ್ನು ತಲುಪಿದ್ದಾಗ, ಸವಾಲಾಗಿ ಆ ದೇಶಗಳ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಪೂರೈಕೆ ಸರಪಳಿಗೆ ಸಂಬಂಧಪಟ್ಟ ಏರಿಪೇರುಗಳು, ಮಾಹಿತಿಗಳು, ವ್ಯತ್ಯಾಸಗಳು ಬಿಜಿನೆಸ್‌ಗೆ ಬಾಹ್ಯವಾಗಿ ದೊಡ್ಡ ಪರಿಣಾಮವನ್ನು ಬೀರುವುದು. 

ಇದಕ್ಕೆ ತಕ್ಕುದಾಗಿ ಬಿಜಿನೆಸ್‌ಗಳು ತಮ್ಮ ನಾಯಕತ್ವ ಸೇರ್ಪಡೆ (Leader buy-ins), ಅಪಾಯದ ಮೌಲ್ಯಮಾಪನ(Risk Assessment), ಸೇರಿದಂತೆ ವಿವಿಧ ಅನುಸರಣೆಗಳನ್ನು ಹೊಂದುವುದು ಹೊಣೆಗಾರಿಕೆಯಾಗಿರುತ್ತದೆ. ಇದನ್ನೂ ಓದಿ: AI ನಾವಿನ್ಯತೆಗೆ ಬಲಾಬಲ - ಚೀನಾದ ಡೀಪ್‌ಸೀಕ್‌ ಹೊಸ ʻಟ್ರೈನಿಂಗ್‌ ಮೆಥೆಡ್‌ʼ!?