ಹೆಣ್ಣುಮಕ್ಕಳೆಂದರೆ ಕೇವಲವಾಗಿ ಕಾಣುವ ಕಾಲದಲ್ಲಿ, ಅವರ ಹಕ್ಕುಗಳಿಗಾಗಿ ಶ್ರಮಿಸಿದ ನಾಯಕಿ ಹಾಗೂ ಚಿಂತಕಿ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಾಚರಣೆಯನ್ನು ಪ್ರತೀ ವರ್ಷ ಜನವರಿ 03 ರಂದು ಆಚರಿಸಲಾಗುತ್ತದೆ.
ಅವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ್‌ನಲ್ಲಿ, 1831 ಜನವರಿ 03 ರಂದು, ಜನಿಸಿದರು. ಸಾಮಾಜಿಕ ಸುಧಾರಕ ಹಾಗೂ ಚಿಂತಕ ಜ್ಯೋತಿಬಾ ಫುಲೆಯವರನ್ನು ಬಾಲ್ಯವಿವಾಹವಾದರು. ತಮ್ಮ ಪತಿಯ ಸ್ಪೂರ್ತಿಯಿಂದ ವಿದ್ಯಾಭ್ಯಾಸವನ್ನು ಪಡೆದರು.
ಮಹಿಳೆಯರೆಂದರೆ ಮನೆ ಕೆಲಸ, ಸಂಸಾರ ಹಾಗೂ ಸೈರಣೆಗಳ ಹೊರೆ ಹೊರಬೇಕೆಂಬ ಕಟ್ಟಳೆಯನ್ನು ಕಿತ್ತೊಗೆದು, ಶಿಕ್ಷಣ ಎಲ್ಲರ ಹಕ್ಕು ಎಂದು ಸಾಕ್ಷೀಕರಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ. ಅಂದಿನ ಕಾಲದಲ್ಲಿದ್ದ ಸಾಮಾಜಿಕ ಪಿಡುಗುಗಳು, ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ನಡೆಸಿದರು. Nua Complete Comfort Sanitary Pads for Sensitive Skin | Pack of 50 Pads (12 Heavy Flow, 20 Medium Flow, 18 Light Flow) with Disposal covers | Zero Irritation | Comfortable All-Day Protection | Ultra-Thin | Super Absorbent | No rashes | 50% Wider Back | 100% Toxic-Free, Dermatologically Tested
ಸ್ತ್ರೀಯರಿಗಿದ್ದ ಅಸಮಾನತೆ, ಅನೀತಿಗಳ ನಡುವೆಯೇ ದಿಟ್ಟವಾಗಿ ನಿಂತು, ಶಿಕ್ಷಣದ ಪ್ರೇರೇಪಣೆಯನ್ನು ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ಸಹಾ, ಮಹಿಳಾ ಹಕ್ಕುಗಳು, ಸಮಾನತೆ ಹಾಗೂ ಶಿಕ್ಷಣಕ್ಕಾಗಿ ಪಣತೊಟ್ಟರು. ಇವತ್ತಿಗೆ ಸ್ತ್ರೀ ಶಿಕ್ಷಣವೆಂದಾಕ್ಷಣ ಪ್ರತಿಧ್ವನಿಸುವ ಹೆಸರು ಸಾವಿತ್ರಿಬಾಯಿ ಫುಲೆ ಅವರದಾಗಬೇಕು. ಭಾರತದ ಮೊಟ್ಟ ಮೊದಲ ಶಿಕ್ಷಕಿ ಎಂಬುದಷ್ಟೇ ಅಲ್ಲದೇ ತಮ್ಮ ಅನೇಕ ಸಾಮಾಜಿಕ ಸುಧಾರಣೆಗಳ ಮೂಲಕ ಮಹಿಳಾ ಸಂಕುಲಕ್ಕೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಬಿಸಿನೆಸ್ ಡಿಜಿಟಲ್ ಶಿಫ್ಟ್ - ಸವಾಲುಗಳು ಮತ್ತು ಹೊಣೆಗಾರಿಕೆ