ಚುನಾವಣೆಗಳು ದೇಶದ ಆಡಳಿತ ದಿಶೆಯನ್ನು ಬದಲಿಸಬಲ್ಲ ದಿಕ್ಸೂಚಿಯಾಗಿದೆ. ರಾಜಕೀಯ ದಿಕ್ಕನ್ನು ನಿರ್ಧರಿಸುವ ಪರೀಕ್ಷೆಗಳಾಗಿ ಚುನಾವಣೆಗಳು ಪರಿಣಮಿಸಲಿವೆ. 2026ರಲ್ಲಿ ಯಾವೆಲ್ಲಾ ಚುನಾವಣೆಗಳು ನಡೆಯಲಿವೆ ಎಂಬುದಾಗಿ ಮಾಹಿತಿ ಇಲ್ಲಿದೆ.
2025ರಲ್ಲಿ ದೇಶದ ಹಾಗೂ ರಾಜ್ಯಗಳ ರಾಜಕೀಯ ತಿರುವುಗಳು ಹಾಗೂ ಸಂಘರ್ಷಗಳು ಸುದ್ದಿಮಾಡಿದವು. ದೆಹಲಿ, ಬಿಹಾರ ಚುನಾವಣೆಗಳ ಜೊತೆಗೆ, ಉಪರಾಷ್ಟ್ರಪತಿ ಚುನಾವಣೆ, ಮತಗಳ್ಳತನ ಆರೋಪ, ಚುನಾವಣಾ ಸುಧಾರಣೆ ಹಾಗೂ ಮತದಾರರ ಮರು ಪರಿಶೀಲನಾ ಅಭಿಯಾನ ಹೀಗೆ ಸಾಕಷ್ಟು ವಿಷಯಗಳು ಮುನ್ನಲೆಗೆ ಬಂದವು.
ಎಲ್ಲೆಲ್ಲಿ ಯಾವ ಎಲೆಕ್ಷನ್!?
ಈ ವರ್ಷದಲ್ಲಿ ನಾಲ್ಕು ರಾಜ್ಯಗಳಲ್ಲಿ ರಾಜಕೀಯ ಚಲನಶೀಲತೆ ಕಂಡುಬರಲಿದೆ ಎನ್ನಲಾಗಿದೆ. ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ; ದಕ್ಷಿಣ ಭಾರತದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಹಣಾಹಣಿ ನಡೆಯುವುದಾಗಿ ತಿಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಲೋಕಲ್ ಬಾಡಿ ಎಲೆಕ್ಷನ್ಸ್ ನಡೆಯಲಿದ್ದು, ಮುಂಬೈನ ಬೃಹತ್ ನಗರದ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಪುದುಚೆರಿ ಕೇಂದ್ರಾಡಳಿತ ಪ್ರದೇಶವು ಅಸೆಂಬ್ಲಿ ಎಲೆಕ್ಷನ್ ಎದುರುಕಾಣಲಿದೆ.
ಇನ್ನು, ರಾಜಕೀಯ ಪಕ್ಷಗಳ ನಾಯಕರು ಹಾಗೂ ರಾಜಕೀಯ ಪಕ್ಷ ಗುದ್ದಾಟವು ಸ್ವಾರಸ್ಯಕತೆ ಪಡೆದುಕೊಂಡಿದ್ದು, ಈ ಬಗ್ಗೆ ಬಲಾಢ್ಯ ಪ್ರಶ್ನೆಗಳು ಎದಿರಾಗಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ವಿಶ್ಲೇಷಕರ ಸಮೀಕರಣಗಳು, ಚರ್ಚೆಗಳು ಹಲವು ನಿರೀಕ್ಷೆಗಳನ್ನು ಮೂಡಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಅಕ್ಷರದಾತೆ ಭಾರತದ ಮೊಟ್ಟ ಮೊದಲ ಶಿಕ್ಷಕಿ - ಸಾವಿತ್ರಿಬಾಯಿ ಫುಲೆ ಜಯಂತಿ