ಟೆಕ್ ಲೋಕದಲ್ಲಿ ಮಾಂತ್ರಿಕತೆ ಮೆರೆಯುತ್ತಿರುವ ಎಐ ಬಹುತೇಕ ಜಾಗತಿಕ ವ್ಯವಸ್ಥೆಯಲ್ಲಿ ಅವಿಭಾಜ್ಯ ಅಂಗವೆನಿಸಿಕೊಂಡಿದೆ. ವರ್ಷ ವರ್ಷವು ಕಳೆದಂತೆ, ಟೆಕ್ನಾಲಜಿಯಲ್ಲಿಯೂ ಅನೇಕ ಸಂಶೋಧನಾ ಸುಧಾರಣೆಗಳು, ಬದಲಾವಣೆಗಳು ಪಡೆದುಕೊಳ್ಳುತ್ತಿದೆ. ಇತ್ತ, ತಂತ್ರಜ್ಞಾನವು ಭವಿಷ್ಯದಲ್ಲಿ ಮಾನವ ಜೀವನವನ್ನು ಸಂಪೂರ್ಣ ಆವರಿಸಿಕೊಳ್ಳುವ ಬಗ್ಗೆ ತಜ್ಞರು ಎಚ್ಚರಿಕೆಯ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಟೆಕ್ನಾಲಜಿಗೆ ಒಗ್ಗಿಕೊಂಡಿರುವ ಜೀವನ ಹಾಗೂ ವೃತ್ತಿಶೈಲಿಯು ಅವುಗಳ ಟೂಲ್ಸ್‌ಗಳಿಗೆ ಅವಲಂಬಿತಗೊಂಡಿದ್ದಾಗಿದೆ. ಪರ್ಸನಲೈಜ್ ಕಂಪ್ಯೂಟರ್, ರೋಬೋಟ್‌ಗಳಂತೆ ಎಐ ಸಾಧನಗಳು ಮನುಷ್ಯರಿಗೆ ಸ್ನೇಹಿಗಳಾಗಿ ಪರಿವರ್ತಿತವಾಗಿವೆ. ಅವುಗಳ ವಿಶಿಷ್ಟ ಫೀಚರ್ಸ್ ಹಾಗೂ ತಾಂತ್ರಿಕತೆಗೆ ಜನರು ಬದುಕಿನ ಭಾಗಿವಾಗಿ ಕಂಡಿದ್ದಾರೆ ಎನ್ನಲಾಗುತ್ತಿದೆ.
ಉದಾಹರಣೆಗೆ ನ್ಯಾನೋ ಬನಾನಾ ಇಮೇಜ್ ಫೋಟೋ ಎಡಿಟಿಂಗ್ ಫೀಚರ್ ಫೋಟೋ ಪ್ರಿಯರ ಗಮನವನ್ನು ಸೆಳೆಯಿತು., ಚಾಟ್‌ಜಿಪಿಟಿ, ಜೆಮಿನಿ ಹಾಗೂ ಪರ್ಪ್ಲೆಕ್ಸಿಟಿಯಂತಹ ಚಾಟ್‌ಬಾಟ್‌ಗಳು ಮತ್ತಷ್ಟು ಉದ್ದೀಪಿಸಲು ಮುಂದಾದವು. ಹೀಗೆ ಎಡಿಟಿಂಗ್, ಶೂಟಿಂಗ್, ಜನರೇಟಿವ್ ಸೋಷಿಯಲ್ ಮೀಡಿಯಾ ಎಂಬ ಎಲ್ಲಾ ಜಾನರ್‌ಗಳಲ್ಲಿ ಎಐ ಸದ್ದು ಮಾಡಿತು. MOKOSH Women's Silk Embroidered Kurta Pant Dupatta Set (DM-474)
ಇನ್ನೂ 2026 ರಲ್ಲಿ, ವಿವಿಧ ವಲಯಗಳೆನ್ನದೇ ಎಐ ಏಜೆಂಟ್ಸ್‌ಗಳು (ನೂತನ ಎಐ ಮಾಡೆಲ್‌ಗಳು) ಸ್ವಯಂ ಚಾಲಿತ ರೋಬಾಟ್‌ಗಳು ಮತ್ತಷ್ಟು ಬದಲಾವಣೆ ಹಾಗೂ ಕ್ರಾಂತಿಯನ್ನುಂಟು ಮಾಡಲಿದೆ ಎನ್ನಲಾಗಿದೆ. ಎಐ ಇದೀಗ ಮಾಹಿತಿಗಷ್ಟೇ ಅಲ್ಲದೇ ತನ್ನ ವ್ಯಾಪಕ ಸಾಮರ್ಥ್ಯದಿಂದಾಗಿ ಆಕ್ರಮಿಸಲಿದೆಯೇ ಎನ್ನುವ ಕೌತುಕಕ್ಕೆ ವಿಶ್ಲೇಷಕರು ಎಚ್ಚರಿಸಿದ್ದಾರೆ ಎಂದು ವರದಿಯು ವಿಶ್ಲೇಷಿಸಿದೆ. ಇದನ್ನೂ ಓದಿ: ಎಲೆಕ್ಷನ್ 2026: ಅನಿರೀಕ್ಷಿತ ರಾಜಕೀಯ ತಿರುವುಗಳೇ ಅಥವಾ ಅವಕಾಶಗಳೇ!?