ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದೆ. ಜನವರಿ 8ರಂದು ಯಶ್ ಜನ್ಮದಿನ ಆಚರಣೆ ನಡೆಯಲಿದ್ದು, ಈಗಾಗಲೇ ಅಭಿಮಾನಿಗಳು ಭರ್ಜರಿ ಸಂಭ್ರಮಕ್ಕೆ ಸಿದ್ಧರಾಗಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಬ್ಯಾನರ್, ಕಟೌಟ್ ಹಾಗೂ ಬಿಲ್‌ಬೋರ್ಡ್‌ಗಳನ್ನು ಹಾಕಿ ಯಶ್‌ಗೆ ಶುಭಾಶಯಗಳನ್ನು ಕೋರಲಾಗುತ್ತಿದೆ.RAB Men's Microlight Alpine Down Jacket
ಈ ಬಾರಿ ಯಶ್ ಹುಟ್ಟುಹಬ್ಬದ ಸಂಭ್ರಮ ಇನ್ನೂ ವಿಭಿನ್ನವಾಗಿದೆ. ಯಶ್ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ನಮ್ಮ ಮೆಟ್ರೋದಲ್ಲೇ ಯಶ್ ಫೋಟೋವನ್ನು ಪ್ರದರ್ಶಿಸುವ ಮೂಲಕ ವಿಶೇಷವಾಗಿ ಸಂಭ್ರಮಿಸಲು ಮುಂದಾಗಿದ್ದಾರೆ. ಮೆಟ್ರೋ ರೈಲಿನಲ್ಲಿ ಯಶ್ ಫೋಟೋ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ದೊಡ್ಡ ಖುಷಿ ತಂದಿದೆ.
ಹುಟ್ಟುಹಬ್ಬದ ಅಂಗವಾಗಿ ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ಹಾಕಿರುವುದು ಇದೇ ಮೊದಲ ಬಾರಿಗೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ನಟರ ಹುಟ್ಟುಹಬ್ಬಕ್ಕೆ ಕಟೌಟ್ ಹಾಕುವುದು ಅಥವಾ ಸಾಮಾಜಿಕ ಸೇವೆ ಮಾಡುವ ಸಂಪ್ರದಾಯ ಇದ್ದರೂ, ಈ ಬಾರಿ ಅಭಿಮಾನಿಗಳು ಮೆಟ್ರೋ ಜಾಹೀರಾತು ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ:ಈ ಬಾರಿ ಭಾರತಕ್ಕೆ ಆಸ್ಕರ್ ಫಿಕ್ಸ್? ‘ಹೋಮ್‌ಬೌಂಡ್’ ಸಿನಿಮಾ ಮತ್ತೊಂದು ಹಂತಕ್ಕೆ!
ಯಶ್ ಅಭಿಮಾನಿ ಸಂಘಟನೆಗಳು ಮೆಟ್ರೋಗೆ ಜಾಹೀರಾತು ನೀಡಿ, ರಾಕಿಂಗ್ ಸ್ಟಾರ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿವೆ. ಮೆಟ್ರೋ ಮೇಲೆ ಅರಳಿದ ಯಶ್ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವೈರಲ್ ಆಗಿದ್ದು, ಹುಟ್ಟುಹಬ್ಬದ ಸಂಭ್ರಮಕ್ಕೆ ಮತ್ತಷ್ಟು ರಂಗು ತಂದಿದೆ.