Skip to main content
ವಿಡಿಯೋ
general

ಯುಪಿ ಮತದಾರ ಪಟ್ಟಿ ಪರಿಷ್ಕರಣೆ: ಸುಮಾರು 3 ಕೋಟಿ ಮತದಾರರ ಹೆಸರನ್ನು ಕೈಬಿಟ್ಟ ಚುನಾವಣಾ ಆಯೋಗ!

By Shravanthi R
ಯುಪಿ ಮತದಾರ ಪಟ್ಟಿ ಪರಿಷ್ಕರಣೆ: ಸುಮಾರು 3 ಕೋಟಿ ಮತದಾರರ ಹೆಸರನ್ನು ಕೈಬಿಟ್ಟ ಚುನಾವಣಾ ಆಯೋಗ!

ದೇಶದಲ್ಲಿ ಸ್ಪೆಷಲ್‌ ಇಂಟೆನ್ಸಿವ್‌ ರಿಪೋರ್ಟ್‌ (ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಪೂರ್ಣಗೊಂಡಿದ್ದು, 2.89 ಕೋಟಿ ನಾಗರೀಕರ ಹೆಸರನ್ನು ಕೈಬಿಡಲಾಗಿದೆ.

ಉತ್ತರ ಪ್ರದೇಶದಲ್ಲಿ ಜನವರಿ 6ಕ್ಕೆ ಮೊದಲ ಹಂತದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಪೂರ್ಣಗೊಂಡಿದೆ. ಈ ಕುರಿತು ಅಲ್ಲಿನ ಮುಖ್ಯ ಚುನಾವಣಾ ಅಧಿಕಾರಿ ನವದೀಪ್‌ ರಿವ್ವಾ ಅವರು ತಿಳಿಸಿರುವ ಹಾಗೆ, “ರಾಜ್ಯದಲ್ಲಿ 15.44 ಕೋಟಿ ಮತದಾರರಿದ್ದು, ಅವರಲ್ಲಿ ವಿವಿಧ ಕಾರಣಗಳಿಗೆ 2.89 ಕೋಟಿ ಮತದಾರರ ಹೆಸರನ್ನು ತೆಗೆದುಹಾಕಿದೆ” ಎಂದು ತಿಳಿಸಿದ್ದಾರೆ.

ಇದರಿಂದಾಗಿ ಸದ್ಯದಲ್ಲಿ ರಾಜ್ಯ ಮತದಾರರ ಸಂಖ್ಯೆ 12.55 ಕೋಟಿಗೆ ಇಳಿಕೆಯಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದ ಅವರು, “15.44 ಕೋಟಿ ಮತದಾರರ ಪೈಕಿ, ಮೃತಪಟ್ಟಿರುವವರು, ಶಾಶ್ವತವಾಗಿ ವಲಸೆ ಹೋಗಿರುವವರು ಹಾಗೂ ಬೇರೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ 2.89 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ” ಎಂದಿದ್ದಾರೆ. W for Woman Women's Viscose Solid Straight Kurta Sets With Slim Pants & Dupatta

ಈ ವೇಳೆ ಅಚಾನಕ್‌ ಆಗಿ ಹೆಸರನ್ನು ಅಸಿಂಧುಗೊಳಿಸಿದ್ದರೆ, ಅದರ ಆಕ್ಷೇಪಣೆ ಸಲ್ಲಿಕೆಗೆ ಚುನಾವಣಾ ಆಯೋಗವು ಕಾಲಾವಕಾಶವನ್ನು ಒದಗಿಸಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಮಾರ್ಚ್‌ 6, 2026 ರಂದು ಪ್ರಕಟಿಸಲಾಗುವುದೆಂದು ತಿಳಿಸಲಾಗಿದೆ. ಮತ್ತೊಂದೆಡೆ, ಎಸ್‌ಐಆರ್‌ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಮತದಾರರ ಹೆಸರನ್ನು ಕೈಬಿಟ್ಟಿರುವುದು ರಾಜಕೀಯ ವಲಯದಲ್ಲಿ ಸಂಚಲನವನ್ನು ಮೂಡಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಹೈದರಾಬಾದ್ ಮೂಲದ ಯುವತಿ ನಿಕಿತಾ ಹತ್ಯೆ: ಹಣದ ವಿವಾದವೇ ಕಾರಣ ಎಂದು ತಂದೆ ಆರೋಪ