Skip to main content
ವಿಡಿಯೋ
general

ಇ-ತ್ಯಾಜ್ಯ: ಆಧುನಿಕ ಯುಗದಲ್ಲಿ ಅಪಾಯ ತರದಿರಲಿ!

By Shravanthi R
ಇ-ತ್ಯಾಜ್ಯ: ಆಧುನಿಕ ಯುಗದಲ್ಲಿ ಅಪಾಯ ತರದಿರಲಿ!

ತಂತ್ರಜ್ಞಾನ ವರವಾಗಬೇಕೆ ಹೊರತು ಶಾಪವಾಗದಿರಲಿ ಎನ್ನುವ ಮನವರಿಕೆಯಿಂದ ಎಲ್ಲಾ ವಲಯದ ಆಯಾಮಗಳಲ್ಲೂ ಇ-ತ್ಯಾಜ್ಯ ನಿರ್ವಹಣೆ ಹಾಗೂ ಈ ಬಗ್ಗೆ ಅರಿವು ಹೊಂದುವುದು ವಿಶ್ವದ ಮುಂದಿರುವ ಅತಿದೊಡ್ಡ ಸವಾಲೆನಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಆವಿಷ್ಕಾರ - ಬೆಳವಣಿಗೆಗಳು ಕಂಡುಬರುತ್ತಲಿದೆ. ಅದೇ ರೀತಿಯಾಗಿ ವಿವಿಧ ಎಲೆಕ್ಟ್ರಾನಿಕ್ಸ್‌ ಸಾಧನಗಳು ಹಾಗೂ ಉಪಕರಣಗಳು ಹಳೆಯದಾದಲ್ಲಿ ಅಥವಾ ಕೆಟ್ಟು ಹೋದಲ್ಲಿ ಅವುಗಳ ವಿಲೇವಾರಿಯೂ ಒಂದು ಸಮಸ್ಯಾತ್ಮಕ ಪ್ರಶ್ನೆಯಾಗದಿರಲಿ ಎನ್ನುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ. 

ಇ-ತ್ಯಾಜ್ಯ ಎಂದರೇನು?

ಕೆಲಸಕ್ಕೆ ಬಾರದ ಹಾಗೂ ನಿರುಪಯುಕ್ತ ಎಲೆಕ್ಟ್ರಿಕ್‌ ಮತ್ತು ಎಲೆಕ್ಟ್ರಾನಿಕ್ಸ್‌ ಸಾಧನ ಅಥವಾ ಉಪಕರಣಗಳನ್ನು ಇ-ತ್ಯಾಜ್ಯ ಎಂದು ಹೆಸರಿಸಲಾಗುತ್ತದೆ. ಉದಾಹರಣೆಗೆ, ದಿನಬಳಕೆಯ ಎಲೆಕ್ಟ್ರಾನಿಕ್‌ ವಸ್ತುಗಳಾದ ಮೊಬೈಲ್‌ ಫೋನ್‌, ಬ್ಯಾಟರಿ, ಕಂಪ್ಯೂಟರ್‌ ಸಲಕರಣೆಗಳು, ರೆಫ್ರಿಜಿರೇಟರ್‌, ವಾಷಿಂಗ್‌ ಮಷಿನ್‌ ಹಾಗೂ ಮುಂತಾದ ಎಲೆಕ್ಟ್ರಾನಿಕ್‌ ಉಪಕರಣಗಳು ಇ-ತ್ಯಾಜ್ಯ ವರ್ಗೀಕರಣಕ್ಕೆ ಒಳಪಡುತ್ತದೆ. 

ಇ-ತ್ಯಾಜ್ಯ ವಿಲೇವಾರಿ - ಪ್ರಭಾವಗಳೇನು?

ಇ-ತ್ಯಾಜ್ಯವೆನ್ನುವುದು ಗಂಭೀರ ವಿಚಾರವಾಗಿದ್ದು, ಮಾನವ ಆರೋಗ್ಯ ಹಾಗೂ ಪರಿಸರ ದೃಷ್ಟಿಯಿಂದ ದೊಡ್ಡ ಪರಿಣಾಮ ಬೀರುತ್ತದೆ. ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆ, ಜವಾಬ್ದಾರಿಯುತ ಹಾಗೂ ಸಂಕಲ್ಪಯುತ ಇ-ತ್ಯಾಜ್ಯ ಮುಕ್ತ ವಿಲೇವಾರಿಯು ಪ್ರಮುಖವಾಗಿದೆ.  Amazon Brand - Myx Women's Embroidered Kurta Pant Set with Mesh Dupatta | Viscose,Rayon (Available in Plus Sizes)

ಪ್ರಭಾವಗಳೇನು ?

  • ಆರೋಗ್ಯ ಕಾಳಜಿ - ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸೀಸ (Lead), ಪಾದರಸ (Mercury), ಕ್ಯಾಡ್ಮಿಯಮ್ ಮತ್ತು ಆರ್ಸೆನಿಕ್‌ನಂತಹ ವಿಷಕಾರಿ ಲೋಹಗಳಿರುವುದರಿಂದ ಇವು ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ. 

  • ಇ-ತ್ಯಾಜ್ಯಗಳನ್ನು ಸುಡುವುದರಿಂದ ಅಥವಾ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ, ಪರಿಸರ ಮಾಲಿನ್ಯ, ಅಂತರ್ಜಲ ಹಾಗೂ ಜಲಮೂಲಗಳನ್ನು ಕಲುಷಿತಗೊಳಿಸಿ, ದುಷ್ಪರಿಣಾಮ ಬೀರುವುದು. 

ಈ ದೃಷ್ಟಿಯಿಂದ, ಇ-ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣೆಯು ಪ್ರಮುಖವಾಗಿರುತ್ತದೆ. ಇದಕ್ಕಾಗಿ, 

  • Reduce, Reuse and Recycle ಮಾದರಿಯನ್ನು ಅನುಸರಿಸುವುದು. ಸರ್ಕಾರವು ಜಾರಿಗೊಳಿಸಿರುವ ʻವಿಸ್ತರಿತ ಉತ್ಪಾದಕ ಜವಾಬ್ದಾರಿʼಯನ್ನು (ಕಂಪನಿಗಳು ಹಳೆಯ ಉಪಕರಣಗಳನ್ನು ಗ್ರಾಹಕರಿಂದ ಮರಳಿಪಡೆದು ವಿಲೇವಾರಿ ಮಾಡುವ ಜವಾಬ್ದಾರಿ) ಪಾಲಿಸುವುದು.

  • ಇ-ತ್ಯಾಜ್ಯವನ್ನು ಇತರೆ ಕಸದೊಂದಿಗೆ ಬೆರೆಸದಿರುವುದು ಹಾಗೂ ಸುಡದಿರುವುದು.

  • ಇ-ವೇಸ್ಟ್‌ ಕಲೆಕ್ಷನ್‌ ಬಿನ್ಸ್‌ಗಳನ್ನು ನಿಯಮಿತವಾಗಿ ಬಳಸುವುದು. 

  • ಬಳಸದ ಹಳೆಯ ಎಲೆಕ್ಟ್ರಾನಿಕ್ಸ್‌ಗಳನ್ನು ಸಂಗ್ರಹಿಸಿ, ಕಸದ ಬುಟ್ಟಿಗೆ ಅಥವಾ ಗುಜರಿ ಅಂಗಡಿಯವರಿಗೆ ಕೊಡುವ ಬದಲು, ಅಧಿಕೃತ ಇ-ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ (Certified E-waste Recyclers) ನೀಡುವುದು. ಇದನ್ನೂ ಓದಿ: ಯುಪಿ ಮತದಾರ ಪಟ್ಟಿ ಪರಿಷ್ಕರಣೆ: ಸುಮಾರು 3 ಕೋಟಿ ಮತದಾರರ ಹೆಸರನ್ನು ಕೈಬಿಟ್ಟ ಚುನಾವಣಾ ಆಯೋಗ!