ʻಮಾನಸಿಕ ತೊಳಲಾಟ ಹಾಗೂ ಮನೋಯಾತನೆಯ ಗುಣಲಕ್ಷಣಗಳಾದ ಖಿನ್ನತೆ, ಒತ್ತಡ ಹಾಗೂ ಆತಂಕದಿಂದ ಬಳಲುತ್ತಲಿರುವ ವ್ಯಕ್ತಿಗಳು ಅನಿಯಂತ್ರಿತವಾಗಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾರೆʼ ಎಂದು ನಿಮ್ಹಾನ್ಸ್ - ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ʻಭಾರತೀಯ ವಯಸ್ಕರಲ್ಲಿ ಅಶ್ಲೀಲ ವಿಡಿಯೊ ವೀಕ್ಷಣೆ: ಮಾನಸಿಕ ಸಂಬಂಧಗಳು ಮತ್ತು ಮುನ್ಸೂಚಕಗಳು' ಎಂಬ ಶೀರ್ಷಿಕೆಯಡಿ ಮಂಡಿಸಿರುವ ಪ್ರಬಂಧದಲ್ಲಿ ʻಅನಿಯಂತ್ರಿತ ಅಶ್ಲೀಲ ವಿಡಿಯೋ ವೀಕ್ಷಣೆ ಹಾಗೂ ಮಾನಸಿಕ ಸಮಸ್ಯಗಳಿಗೂ ನಿಕಟವಾದ ಸಂಬಂಧವಿದೆʼ ಎಂದು ಸಾಬೀತಾಗಿದೆ. Amazon Brand - Myx Women Embroidered Kurta Pant Set with Organza Dupatta | Viscose,Rayon (Available in Plus Sizes)
ಈ ಅಧ್ಯಯನಕ್ಕಾಗಿ 18 ರಿಂದ 46 ವರ್ಷದೊಳಗಿನ 112 ಮಂದಿಯನ್ನು ಆನ್‌ಲೈನ್ ವೇದಿಕೆ ಮೂಲಕ ಸಂಶೋಧನೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳೇ (50ರಷ್ಟು) ಆಗಿದ್ದಾರೆ ಎನ್ನುವುದು ತಿಳಿದುಬಂದಿದೆ. 12 ವಾರಗಳ ಕಾಲ ನಡೆಸಿದ ಈ ಸಮೀಕ್ಷೆಯಲ್ಲಿ, ವಿವಿಧ ಸಾಮಾಜಿಕ ಮಾಧ್ಯಮಗಳ ಆಪ್ ನೆರವಿನಿಂದ ದತ್ತಾಂಶ ಕಲೆಹಾಕಿ ಈ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾನಸಿಕ ತೊಂದರೆಗಳಿಂದ ಹೊರಬರುವಲ್ಲಿ, ಅಶ್ಲೀಲ ವಿಡಿಯೋಗಳ ವೀಕ್ಷಣೆ ಮೊರೆ ಹೋಗುತ್ತಿದ್ದು, ಹಾಗೂ ಅದರಿಂದ ಪ್ರಚೋದಿತರಾಗುತ್ತಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. ಇದು ಜಿಯೋಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಕೆಲ ದಶಕಗಳಿಂದ ಇದರ ಸಂಖ್ಯೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಇ-ತ್ಯಾಜ್ಯ: ಆಧುನಿಕ ಯುಗದಲ್ಲಿ ಅಪಾಯ ತರದಿರಲಿ!