Skip to main content
ವಿಡಿಯೋ
1/2
politics

ವಿಧಾನಸಭಾ ಚುನಾವಣೆ 2026: ಕಾಂಗ್ರೆಸ್‌ನಿಂದ ವೀಕ್ಷಕರ ನೇಮಕ..!

By Sushmitha R
ವಿಧಾನಸಭಾ ಚುನಾವಣೆ 2026: ಕಾಂಗ್ರೆಸ್‌ನಿಂದ ವೀಕ್ಷಕರ ನೇಮಕ..!

ಭಾರತದ ಪ್ರಮುಖ ರಾಜ್ಯಗಳಾದ ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಭಾರತದ ಪ್ರಮುಖ ರಾಜ್ಯಗಳಾದ ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ತಯಾರಿಗಾಗಿ ವಿವಿಧ ರಾಜ್ಯಗಳ ಹಿರಿಯ ನಾಯಕರನ್ನು 'ಚುನಾವಣಾ ವೀಕ್ಷಕರು' ಹಾಗೂ 'ಹಿರಿಯ ವೀಕ್ಷಕರು' ಆಗಿ ನೇಮಕ ಮಾಡುವ ಮೂಲಕ ರಣತಂತ್ರ ರೂಪಿಸಿದೆ.

ಕೇರಳ ವಿಧಾನಸಭಾ ಚುನಾವಣೆ:

ಕೇರಳದಲ್ಲಿ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ. ಅವರ ಜೊತೆಗೆ ಕರ್ನಾಟಕದ ಸಚಿವ ಕೆ.ಜೆ. ಜಾರ್ಜ್, ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಗಢಿ ಮತ್ತು ಯುವ ನಾಯಕ ಕನ್ಹಯ್ಯಾ ಕುಮಾರ್ ಅವರಿಗೆ ಕೇರಳದ ಜವಾಬ್ದಾರಿಯನ್ನು ನೀಡಲಾಗಿದೆ.Shining Diva Fashion Jewellery Organisers Box PU Leather Storage Case for Rings, Earrings, Necklace Jewelry Organizer for Women Travel (BOX1002) (White)

ಅಸ್ಸಾಂ ವಿಧಾನಸಭಾ ಚುನಾವಣೆ:

ಅಸ್ಸಾಂನಲ್ಲಿ ಪಕ್ಷವನ್ನು ಬಲಪಡಿಸಲು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಹಿರಿಯ ವೀಕ್ಷಕರನ್ನಾಗಿ ಆಯ್ಕೆ ಮಾಡಲಾಗಿದೆ. ಜಾರ್ಖಂಡ್‌ನ ಕಾಂಗ್ರೆಸ್ ನಾಯಕ ಬಂಧು ಟಿರ್ಕಿ ಕೂಡ ಅಸ್ಸಾಂ ಚುನಾವಣಾ ತಂಡದಲ್ಲಿ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಂತ್ರಾಲಯದ ಮಹಾಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳು: ಇಂದಿಗೂ ಸಜೀವವಾಗಿ ಭಕ್ತರ ಕಷ್ಟ ನೀಗಿಸುವ ಗುರುಸಾರ್ವಭೌಮ!

ತಮಿಳುನಾಡು ಮತ್ತು ಪುದುಚೇರಿ:

ದಕ್ಷಿಣದ ಈ ರಾಜ್ಯಗಳಿಗೆ ಹಿರಿಯ ನಾಯಕ ಮುಕುಲ್ ವಾಸ್ನಿಕ್ ಮತ್ತು ತೆಲಂಗಾಣದ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರನ್ನು ವೀಕ್ಷಕರನ್ನಾಗಿ ಮಾಡಲಾಗಿದೆ. ಇವರೊಂದಿಗೆ ಖಾಜಿ ಮೊಹಮ್ಮದ್ ನಿಜಾಮುದ್ದೀನ್ ಅವರು ಸಾಥ್ ನೀಡಲಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ:

ಪಶ್ಚಿಮ ಬಂಗಾಳದ ರಾಜಕೀಯ ಸಂಘರ್ಷದ ನಡುವೆ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸುದೀಪ್ ರಾಯ್ ಬರ್ಮನ್, ಶಕೀಲ್ ಅಹ್ಮದ್ ಖಾನ್ ಮತ್ತು ಪ್ರಕಾಶ್ ಜೋಶಿ ಅವರನ್ನು ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ.ಪಶ್ಚಿಮ ಬಂಗಾಳ ಚುನಾವಣೆ: ಮತದಾರರ ಪಟ್ಟಿ ವಿವಾದ, ರಾಜಕೀಯ ಸಮರ!?