Skip to main content
ವಿಡಿಯೋ
general

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್‌ ಜಾರಿ!

By Shravanthi R
ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್‌ ಜಾರಿ!

ಅನಿವಾಸಿ ಭಾರತೀಯ (NRI) ಅಮರ್ತ್ಯ ಸೇನ್‌ ಅವರನ್ನು ವಿಚಾರಣೆ ಒಳಗಾಗುವಂತೆ ಕೋರಿ ಚುನಾವಣಾ ಆಯೋಗವು ನೋಟಿಸ್‌ ಜಾರಿ ಮಾಡಿದೆ.

ಬುಧವಾರ, (ಜ.07) ಭಾರತೀಯ ಚುನಾವಣಾ ಆಯೋಗವು (ECI) ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರಿಗೆ ನೋಟಿಸ್ ಜಾರಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಭಾಗವಾಗಿ ಈ ಬೆಳವಣಿಗೆ ಕಂಡುಬಂದಿದೆ. 

ಅನಿವಾಸಿ ಭಾರತೀಯರಾಗಿರುವ ಅಮರ್ತ್ಯ ಸೇನ್, ಜನವರಿ 16 ರಂದು ಅವರ ನಿವಾಸದಲ್ಲಿಯೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಲಾಗಿದೆ. ಬಿರ್ಬುಮ್‌ ಜಿಲ್ಲೆಯ ಶಾಂತಿನಿಕೇತನದ ಬೋಲ್ಪುರದಲ್ಲಿರುವ ಅಮರ್ತ್ಯ ಸೇನ್ ಅವರ ʻಪ್ರತಿಚಿʼ ನಿವಾಸದಲ್ಲಿ ಅವರ ಸಂಬಂಧಿಕರಿಗೆ ನೋಟಿಸ್ ತಲುಪಿಸಲಾಗಿದೆ. Mlada Rib Knit Crop Top for Women | Cotton Ribbed Top for Women | Round Neck Rib Knit Crop Top Sleeveless | Regular Fit Sleeveless Tank Top | Solid Fit Crop Tops for Women | Sleeveless Cotton Crop Top

ಜನವರಿ 16 ರಂದು ಮಧ್ಯಾಗ್ನ 12 ರ ಸುಮಾರಿಗೆ ಬೂತ್ ಮಟ್ಟದ ಅಧಿಕಾರಿ ಸೋಂಬ್ರತ ಮುಖರ್ಜಿ ಅವರು, ಚುನಾವಣಾ ಫಾರ್ಮ್‌ಗೆ ಸಂಬಂಧಿಸಿರುವ ವ್ಯತ್ಯಾಸಗಳನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿಸಲಾಗಿದೆ. SIR ಪ್ರಕ್ರಿಯೆ ಭಾಗವಾಗಿ ವಿಚಾರಣೆಯ ನೋಟಿಸ್ ಕಳಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ಇದನ್ನೂ ಓದಿ: 2026 ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಗಳ ಕುರಿತ ಸಮಗ್ರ ಮಾಹಿತಿ