Skip to main content
ವಿಡಿಯೋ
general

AI DeepFake Girlfriend - ಮಾಯಾಜಾಲಕ್ಕೆ ಸಿಲುಕಿ 1.5 ಲಕ್ಷ ವಂಚನೆಗೊಳಗಾದ ಬೆಂಗಳೂರು ಮೂಲದ ಟೆಕ್ಕಿ!

By Shravanthi R
AI DeepFake Girlfriend - ಮಾಯಾಜಾಲಕ್ಕೆ ಸಿಲುಕಿ 1.5 ಲಕ್ಷ ವಂಚನೆಗೊಳಗಾದ ಬೆಂಗಳೂರು ಮೂಲದ ಟೆಕ್ಕಿ!

ಬೆಂಗಳೂರಿನ 22 ವರ್ಷದ ಸಾಫ್ಟ್‌ವೇರ್‌ ಪ್ರೊಫೆಷನಲ್‌ ವ್ಯಕ್ತಿಯೊಬ್ಬ ಎಐ ಡೀಪ್‌ಫೇಕ್‌ ಗೆಳತಿಯ ಮೋಹಕ್ಕೆ ಬಿದ್ದು, ʻಅಶ್ಲೀಲ ಬ್ಲಾಕ್‌ಮೇಲ್‌ʼಗೆ ಒಳಗಾಗಿರುವುದಾಗಿ ತಿಳಿದುಬಂದಿದೆ.

ಬೆಂಗಳೂರಿನ 22 ವರ್ಷದ ಸಾಫ್ಟ್‌ವೇರ್‌ ಪ್ರೊಫೆಷನಲ್‌ ವ್ಯಕ್ತಿಯೊಬ್ಬ ಎಐ ಡೀಪ್‌ಫೇಕ್‌ ಗೆಳತಿಯ ಮೋಹಕ್ಕೆ ಬಿದ್ದು, ʻಅಶ್ಲೀಲ ಬ್ಲಾಕ್‌ಮೇಲ್‌ʼಗೆ ಒಳಗಾಗಿರುವುದಾಗಿ ತಿಳಿದುಬಂದಿದೆ. ಡೇಟಿಂಗ್‌ ಆಪ್‌ ಮೂಲಕ ಖಾತೆ ತೆರೆದು, ಸಂಬಂಧ ಬೆಳೆಸುವ ಬಲೆಗೆ ಸಿಕ್ಕು, ಸೈಬರ್‌ ವಂಚಕರ ತೆಕ್ಕೆಗೆ 1.5 ಲಕ್ಷ ನೀಡಿರುವುದಾಗಿ ತಿಳಿಸಲಾಗಿದೆ. 

ಅಪ್ಲಿಕೇಶನ್‌ನಲ್ಲಿ ಸಂದೇಶಗಳನ್ನು ವಿನಿಮಯ ಮಾಡಿಕೊಂಡ ನಂತರ, ಸಂಪರ್ಕವನ್ನು ವಾಟ್ಸ್ಯಾಪ್‌ಗೆ ವರ್ಗಾಯಿಸಿದ್ದಾಗಿ ಹೇಳಲಾಗಿದೆ. ಇದೇ ಸಮಯದಲ್ಲಿ ವಿಡಿಯೋ ಕರೆಗೆ ಪ್ರಚೋದಿಸಿರುವುದಾಗಿ ಮಾಹಿತಿ ಒದಗಿಬಂದಿದೆ. 


ಬೆತ್ತಲಾಗುವಂತೆ ಪ್ರಚೋದನೆ - 

ಸೈಬರ್‌ ದಾಳಿಕೋರರ ಜಾಲಕ್ಕೆ ಬಿದ್ದ ಯುವಕನು, ಆನ್‌ಲೈನ್‌ ಮಹಿಳೆ ಹಾಗೂ ತನ್ನ ಮರ್ಯಾದೆಗಂಜಿ ಹಣ ವರ್ಗಾವಣೆ ಮಾಡಿರುವುದಾಗಿ ವರದಿಯು ತಿಳಿಸಿದೆ ಎನ್ನಲಾಗಿದೆ. ಪ್ರೀತಿ ಹಾಗೂ ಲೈಂಗಿಕತೆ ಹೆಸರಿನಲ್ಲಿ ನಂಬಿಸಿ, ವಿಡಿಯೋ ಕರೆಯಲ್ಲಿ ಬೆತ್ತಲಾಗುವಂತೆ ಪ್ರಚೋದಿಸಲಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ. boAt 2025 Launch Rockerz 113, 40H Battery, Dual Pair, Fast Charge, ENx Tech, Stream Ad Free Music via App Support, Magnetic Buds, Bluetooth Neckband, Wireless with Mic in Ear Earphones (Active Black)

ಯುವಕನ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಹಣದ ಬೆದರಿಕೆ ಒಡ್ಡಲಾಗಿದೆ. ಆದಾದ ಬಳಿಕ, ಆಪ್ತರಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 308ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. 


ಈ ಬಗ್ಗೆ ತನಿಖೆ ನಡೆಸಿರುವ ಪೋಲಿಸರು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಅಪ್ಲಿಕೇಶನ್‌ಗಳು ಹಾಗೂ ಅನಧಿಕೃತ ವಿಡಿಯೋ ಕರೆ ಲಿಂಕ್‌ಗಳನ್ನು ನಿರ್ಲಕ್ಷಿಸುವಂತೆ ಕೋರಲಾಗಿದೆ. ಇದನ್ನೂ ಓದಿ: ಅಮೆರಿಕಾದ ಟ್ಯಾಕ್ಸ್‌ ಎಫೆಕ್ಟ್‌ - ಸ್ಟಾಕ್‌ ಮಾರ್ಕೆಟ್‌ನಲ್ಲಿ ಬಿಗಡಾಯಿಸಿರುವ ತಲ್ಲಣ!