Skip to main content
ವಿಡಿಯೋ
politics

ರಾಜ್ಯ ಸಚಿವ ಸಂಪುಟ ಸಭೆ - ಶೀಘ್ರದಲ್ಲೇ ಪಂಚಾಯತ್‌ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ - ಸಚಿವ ಎಚ್‌.ಕೆ ಪಾಟೀಲ್‌

By Shravanthi R
ರಾಜ್ಯ ಸಚಿವ ಸಂಪುಟ ಸಭೆ - ಶೀಘ್ರದಲ್ಲೇ ಪಂಚಾಯತ್‌ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ - ಸಚಿವ ಎಚ್‌.ಕೆ ಪಾಟೀಲ್‌

ಪಂಚಾಯಿತಿ ಚುನಾವಣೆಯನ್ನು ಆದಷ್ಟು ಬೇಗ ನಡೆಸಲು ತೀರ್ಮಾನಿಸಿದೆ. ಹಲವಾರು ಪಂಚಾಯಿತಿಗಳು ಸುಪ್ರೀಂಕೋರ್ಟಿಗೆ ಹೋಗುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಿದೆ ಎಂದು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್‌. ಕೆ ಪಾಟೀಲ್‌ ಅವರು ತಿಳಿಸಿದ್ದಾರೆ.

ಪಂಚಾಯಿತಿ ಚುನಾವಣೆಯನ್ನು ಆದಷ್ಟು ಬೇಗ ನಡೆಸಲು ತೀರ್ಮಾನಿಸಿದೆ. ಹಲವಾರು ಪಂಚಾಯಿತಿಗಳು ಸುಪ್ರೀಂಕೋರ್ಟಿಗೆ ಹೋಗುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಿದೆ ಎಂದು ಪ್ರವಾಸೋದ್ಯಮ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್. ಕೆ ಪಾಟೀಲ್ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವು ಹೆಸರಲು ಬದಲಿ ಮಾಡಿರುವ ವಿಬಿಜಿ ರಾಮ್‌ಜಿ ಯೋಜನೆಯ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜನವರಿ 22 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಶೇಷ ವಿಧಾನ ಮಂಡಲ ಅಧಿವೇಶನ ಕರೆಯಲಾಗುವುದು ಎಂದು ತಿಳಿಸಿದರು. 

ಕೇಂದ್ರ ಸರ್ಕಾರವು ಮನರೇಗಾ ಹೆಸರು ಬದಲಿಸಿದ್ದಲ್ಲದೆ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು, ಕೂಲಿಕಾರರ ಹಾಗೂ ಬಡವರ ಹಕ್ಕನ್ನು ಕಿತ್ತುಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಇದನ್ನು ವಿರೋಧಿಸಿ ಕಾನೂನು ಸಮರ ಹಾಗೂ ಜನ ಹೋರಾಟ ನಡೆಸಲಾಗುವುದು ಎಂದರು.  OnePlus Bullets Wireless Z3 in-Ear Neckband with 12.4mm Drivers, 3D Spatial Audio,10 mins Charge for 27 hrs Playback, 4 EQ preset, Dynamic bass Enhancement & BT5.4

ಕಾರ್ಮಿಕರ ಹಿತಕಾಪಾಡುವ ದೃಷ್ಟಿಯ ಬೆನ್ನಲ್ಲೇ, ಎನ್.ಡಿ.ಎ ಸರ್ಕಾರ ಕೇಂದ್ರೀಕೃತ ವ್ಯವಸ್ಥೆ ಮೂಲಕ ಗ್ರಾಮೀಣದಲ್ಲಿ ಕೃಷಿ ಹಾಗೂ ಕೆಲಸಕಾರ್ಯವನ್ನು ಸ್ಥಗಿತಗೊಳಿಸಿ, ವಿಕಸಿತ ಭಾರತದಲ್ಲಿ ಕೆಲ ಏಜೆನ್ಸಿ ಮೂಲಕ ಕಾಮಗಾರಿ ಕೈಗೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: AI DeepFake Girlfriend - ಮಾಯಾಜಾಲಕ್ಕೆ ಸಿಲುಕಿ 1.5 ಲಕ್ಷ ವಂಚನೆಗೊಳಗಾದ ಬೆಂಗಳೂರು ಮೂಲದ ಟೆಕ್ಕಿ!