Skip to main content
ವಿಡಿಯೋ
politics

ʻಡ್ಯಾಡಿʼಸ್‌ ಹೋಮ್‌ʼ - ಹೆಚ್‌.ಡಿ ಕುಮಾರ್‌ಸ್ವಾಮಿ ಅವರ ಎಐ ಜನರೇಟೆಡ್‌ ವಿಡಿಯೋ ವೈರಲ್‌!

By Shravanthi R
ʻಡ್ಯಾಡಿʼಸ್‌ ಹೋಮ್‌ʼ - ಹೆಚ್‌.ಡಿ ಕುಮಾರ್‌ಸ್ವಾಮಿ ಅವರ ಎಐ ಜನರೇಟೆಡ್‌ ವಿಡಿಯೋ ವೈರಲ್‌!

ರಾಜಕೀಯದಲ್ಲಿ ಎಐ ಕ್ರಾಂತಿ ಕಹಳೆ ಮೊಳಗಿದೆ. ಕೃತಕಬುದ್ದಿಮತ್ತೆಯಿಂದಾಗಿ ರಾಜ್ಯ ರಾಜಕೀಯದೊಳಗೆ ʻಕಾಮಿಕ್‌ʼ ಸದ್ದು ಜೋರಾಗಿದೆ. ಇತ್ತೀಚೆಗೆ ರಿಲೀಸ್‌ ಆಗಿರುವ ʻಟಾಕ್ಸಿಕ್‌ʼ ನ ಟೀಸರ್‌ ಸಿನಿ ಕ್ಷೇತ್ರದಲ್ಲಿ ಧೂಳೆಬ್ಬಿಸಿದೆ. ಇದರ ನಡುವೆ ರಾಜಕೀಯ ಕ್ಷೇತ್ರದಲ್ಲಿಯೂ ಟೀಸರ್‌ ಹೋಲಿಕೆ ಸದ್ದು ಮಾಡುತ್ತಿದ್ದು, ಹೊಸ ಕ್ರೇಜ್‌ ಹುಟ್ಟಿಸಿದೆ.

ರಾಜಕೀಯದಲ್ಲಿ ಎಐ ಕ್ರಾಂತಿ ಕಹಳೆ ಮೊಳಗಿದೆ. ಕೃತಕಬುದ್ದಿಮತ್ತೆಯಿಂದಾಗಿ ರಾಜ್ಯ ರಾಜಕೀಯದೊಳಗೆ ʻಕಾಮಿಕ್‌ʼ ಸದ್ದು ಜೋರಾಗಿದೆ. ಇತ್ತೀಚೆಗೆ ರಿಲೀಸ್‌ ಆಗಿರುವ ʻಟಾಕ್ಸಿಕ್‌ʼ ನ ಟೀಸರ್‌ ಸಿನಿ ಕ್ಷೇತ್ರದಲ್ಲಿ ಧೂಳೆಬ್ಬಿಸಿದೆ. ಇದರ ನಡುವೆ ರಾಜಕೀಯ ಕ್ಷೇತ್ರದಲ್ಲಿಯೂ ಟೀಸರ್‌ ಸದ್ದು ಮಾಡುತ್ತಿದ್ದು, ಹೊಸ ಅಲೆ ಸೃಷ್ಟಿಸಿದೆ.

ಟೀಸರ್‌ನಲ್ಲಿ ಗ್ರಾಂಡ್‌ ಎಂಟ್ರಿ ಪಡೆದ ಯಶ್‌ರನ್ನು ಹೋಲುವಂತೆ, ಅವರ ʻಡ್ಯಾಡಿʼಸ್‌ ಹೋಮ್‌ ಅನ್ನುವ ಡೈಲಾಗ್‌ ಬಳಸಿ, ಜೆಡಿಎಸ್‌ ನಾಯಕರಾದ ಹೆಚ್‌.ಡಿ ಕುಮಾರಸ್ವಾಮಿ ಅವರನ್ನು ತೋರಿಸಲಾಗಿದೆ. ಅವರು, ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆ ಎನ್ನುವಂತೆ ಬಿಂಬಿಸಿ ಮಾಡಲಾದ ಈ ಎಐ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದರಿಂದ ಡ್ಯಾಡಿ ಇಸ್‌ ಬ್ಯಾಕ್‌ ಎನ್ನುವ ನಿರೀಕ್ಷೆಗೆ ಪುಷ್ಠಿ ಸಿಕ್ಕಿದೆ ಎನ್ನಲಾಗುತ್ತಿದ್ದು, ಮಾಧ್ಯಮ ಹಾಗೂ ರಾಜಕೀಯ ರಂಗದಲ್ಲಿ ಕೇಳಿಬಂದಿದೆ. Fashion Frill Ring Watch For Women Strachable Stainless Steel Gold Plated Roman Stylish Gold Ring For Women Girls Love Gifts

ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿರುವ ಈ ವಿಡಿಯೋದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಕಾಣಿಸಿಕೊಂಡಿದ್ದು, ಈಗಾಗಲೇ ಅವರ ಎಐ ಅವತಾರಗಳು ನೆಟ್ಟಿಗರನ್ನು ಆಕರ್ಷಿಸಿದೆ. “2028 ಕ್ಕೆ ಕಾಯುವಿಕೆ ಅಂತ್ಯವಾಗಲಿದೆ” ಎನ್ನುವ ಸಂದೇಶವನ್ನು ಉಲ್ಲೇಖಿಸಿರುವುದು ಚರ್ಚೆಗೀಡು ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು: ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ಸೈಬರ್‌ ವಂಚನೆಗೆ ಯತ್ನ - ತಪ್ಪಿತೇ ಅನಾಹುತ!?