ಎಲೆಕ್ಟಿಕ್ ವಾಹನ ಪ್ರಿಯರಿಗೆ ಸಿಹಿ ವಿಚಾರ! ಅಮೆರಿಕಾದ ಸುಪ್ರಸಿದ್ದ ಕಾರ್ ಬ್ರ್ಯಾಂಡ್ ʻಟೆಸ್ಲಾʼ ಕಂಪನಿಯ ನಾಲ್ಕನೇ ಶೋರೂಂ ಬೆಂಗಳೂರಿಗೆ ಶೀರ್ಘದಲ್ಲೇ ಆಗಮಿಸಲಿದೆ. ಕಳೆದ ವರ್ಷ ಜುಲೈನಲ್ಲಿ ಭಾರತದ ಮುಂಬೈನಲ್ಲಿ ತನ್ನ ಮೊದಲ ಶೋರೂಂ ಗ್ರ್ಯಾಂಡ್ ಓಪನಿಂಗ್ ಪಡೆದಿತ್ತು.
ಇದೀಗ, ನವದೆಹಲಿ ಹಾಗೂ ಗುರುಗ್ರಾಂನ ಬಳಿಕ, ಬೆಂಗಳೂರಿನಲ್ಲಿ ತೆರೆಯುವುದಾಗಿ ಘೋಷಿಸಿದೆ. ʻಸಿಲಿಕಾನ್ ಸಿಟಿʼ ಮತ್ತು ʻಐಟಿ ಹಬ್ʼ ಎನಿಸಿರುವ ಬೆಂಗಳೂರು, ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಇದರೊಟ್ಟಿಗೆ, ತಾಂತ್ರಿಕ ಜ್ಞಾನವುಳ್ಳ ಗ್ರಾಹಕರು ಹಾಗೂ ಸುಸ್ಥಿರ ಸಾರಿಗೆಗೆ ಬೇಡಿಕೆ ಇರುವುದನ್ನು ಗಮನದಲ್ಲಿರಿಸಿ, ಟೆಸ್ಲಾವು, ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. Fashion Frill Ring Watch for Women Stainless Steel Gold Plated Stylish Strachable Gold Ring for Women Girls Love Gifts
ಟೆಸ್ಲಾ ಶೋರೂಂ ಮಾತ್ರವಲ್ಲದೇ, ಇವಿಯ ಚಾರ್ಜಿಂಗ್ ನೆಟ್‌ವರ್ಕ್‌ನ್ನು ನಿರ್ಮಿಸಲು ಮುಂದಾಗಿದೆ ಎಂದು ತಿಳಿಸಲಾಗಿದೆ. ಈ ಬೆಳವಣಿಗೆಯಿಂದ, ಬೆಂಗಳೂರಿನ ಜನತೆ ಎದುರು ನೋಡುತ್ತಿರುವ ಈ ಶೋರೂಂ ಆರಂಭಗೊಂಡ ನಂತರ, ಕಾರು ಬುಕ್ಕಿಂಗ್, ವಿತರಣೆ, ಚಾರ್ಜಿಂಗ್ ಸೌಲಭ್ಯಗಳು ಹಾಗೂ ಸೇವೆಗಳು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ʻಡ್ಯಾಡಿʼಸ್ ಹೋಮ್ʼ - ಹೆಚ್.ಡಿ ಕುಮಾರ್‌ಸ್ವಾಮಿ ಅವರ ಎಐ ಜನರೇಟೆಡ್ ವಿಡಿಯೋ ವೈರಲ್!