Skip to main content
ವಿಡಿಯೋ
politics

ಸುಪ್ರೀಂ ಕೋರ್ಟ್ ಆದೇಶಾನುಸಾರ ಚುನಾವಣೆಗಳು ನಡೆಯಲಿವೆ - ಡಿಕೆಶಿ; ಮಾರ್ಚ್‌ನಲ್ಲಿ ಬಜೆಟ್ ಮಂಡನೆ - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

By Shravanthi R
ಸುಪ್ರೀಂ ಕೋರ್ಟ್ ಆದೇಶಾನುಸಾರ ಚುನಾವಣೆಗಳು ನಡೆಯಲಿವೆ - ಡಿಕೆಶಿ; ಮಾರ್ಚ್‌ನಲ್ಲಿ ಬಜೆಟ್ ಮಂಡನೆ - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ರಾಜ್ಯದಲ್ಲಿ ನಡೆಯಲಿರುವ ಚುನಾವಣಾ ಕ್ರಾಂತಿಗೆ ರಾಜಕೀಯ ನಾಯಕರು ತಮ್ಮ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಜೂನ್‌ ಅಂತ್ಯದೊಳಗೆ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದಂತೆ ಚುನಾವಣೆಗಳು ಕಾಲಮಿತಿಯೊಳಗೆ ಜರುಗಲಿದೆ ಎಂದು ಡಿಸಿಎಂ ಡಿಕೆಶಿ ಅವರು ಹೇಳಿದ್ದಾರೆ. ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯನವರು ಬಜೆಟ್‌ ಮಂಡನೆ ಮಾಡಲಿರುವ ಬಗ್ಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ಚುನಾವಣಾ ಕ್ರಾಂತಿಗೆ ರಾಜಕೀಯ ನಾಯಕರು ತಮ್ಮ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಜೂನ್‌ ಅಂತ್ಯದೊಳಗೆ ಚುನಾವಣಾ ಪ್ರಕ್ರಿಯೆ ನಡೆಸುವಂತೆ; ಸುಪ್ರೀಂ ಕೋರ್ಟ್‌ ಆದೇಶದಂತೆ ಚುನಾವಣೆಗಳು ಕಾಲಮಿತಿಯೊಳಗೆ ಜರುಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ. ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯನವರು ಮಾರ್ಚ್‌ನಲ್ಲಿ ರಾಜ್ಯ ಬಜೆಟ್‌ ಮಂಡನೆ ಮಾಡಲಿರುವ ಬಗ್ಗೆ ತಿಳಿಸಿದ್ದಾರೆ. 

ಇಂದು (ಮಂಗಳವಾರ, ಜ.13) ರಾಜ್ಯದಲ್ಲಿ ನಡೆಯಲಿರುವ ಚುನಾವಣಾ ಪ್ರಕ್ರಿಯೆ ಕುರಿತಾಗಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು, ಪಾಲಿಕೆಗಳ ಚುನಾವಣೆ ನಡೆಸಲು ಸುಪ್ರೀಂಕೋರ್ಟ್‌ ನಿರ್ದೇಶಿಸಿರುವ ಗಡುವಿನ ಅನುಸಾರ ಚುನಾವಣೆಗಳು ನಡೆಯಲಿವೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ.  ನ್ಯಾಯಾಲಯದ ಬಳಿ ಕಾಲಾವಕಾಶವನ್ನು ಕೇಳುವುದಿಲ್ಲ ಎಂದು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.  OnePlus 15R | 12GB+512GB | Mint Breeze | World's First Snapdragon® 8 Gen 5 | 7400mAh Battery | Personalised AI | Game-Changing 165Hz Display | IP68 IP69 IP66 & IP69K | 4K 120fps Video

ಮಾರ್ಚ್‌ನಲ್ಲಿ ರಾಜ್ಯ ಬಜೆಟ್‌ ಮಂಡನೆ - 

ಇಂದು (ಮಂಗಳವಾರ, ಜ.13) ಮೈಸೂರಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಸಂವಹಿಸುತ್ತಾ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದೇನೆ” ಎಂದು ಮಾಹಿತಿ ತಿಳಿಸಿದ್ದಾರೆ.


ಮುಂದುವರೆದಂತೆ, “ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತಯಾರಾಗಿದೆ, ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯು ಯಾವುದೇ ಪರಿಣಾಮ ಬೀರುವುದಿಲ್ಲ. ಆ ಎರಡೂ ಪಕ್ಷದಿಂದ ಒಬ್ಬರೇ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಪರ ಮತಗಳು ನಮ್ಮ ಅಭ್ಯರ್ಥಿಗೇ ಬೀಳುತ್ತವೆ” ಎಂದು ತಿಳಿಸಿರುವಂತೆ ವರದಿಯಾಗಿದೆ. 

“ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಮಾಧ್ಯಮಗಳು ಅಧಿಕಾರ ಹಸ್ತಾಂತರದ ಬಗ್ಗೆ ಸುದ್ದಿ ಬಿತ್ತರಿಸಿವೆ. ನಾನು ಇಲ್ಲವೆ ಡಿ.ಕೆ ಶಿವಕುಮಾರ್ ಆ ಕುರಿತು ಮಾತನಾಡಬೇಕು. ಈ ಬಗ್ಗೆ ಹೈಕಮಾಂಡ್ ತೀರ್ಮಾನದಂತೆ ನಡೆಯಲಿದ್ದೇವೆ. ಸಂಪುಟ ಪುನರ್ ರಚನೆ ಕುರಿತು ಸದ್ಯ ಯಾವುದೇ ಚರ್ಚೆ ಇಲ್ಲ ಹಾಗೂ ದೆಹಲಿಗೆ ತೆರಳುತ್ತಿಲ್ಲ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಿಬಿಎ ಚುನಾವಣೆಗೂ ಮುನ್ನ ಎಸ್ಐಆರ್ ಪ್ರಕ್ರಿಯೆ - ಪರಿಣಾಮವೇನು!?