ಬೆಂಗಳೂರು ನಗರವು ಸತತ 10 ವರ್ಷಗಳಿಂದ ಚುನಾಯಿತ ಕೌನ್ಸಿಲ್ ಇಲ್ಲದೇ ಆಡಳಿತಾತ್ಮಕ ಸಂಕೋಲೆಯಲ್ಲಿ ಸಿಲುಕಿದೆ. 2016 ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯೇ ಕೊನೆ; 2020ಕ್ಕೆ ಹಾಲಿ ಕೌನ್ಸಿಲ್ ಅವಧಿ ಮುಗಿದಿತ್ತು. ಇದಾದ ಬಳಿಕ, ಹಲವು ಆಡಳಿತಾತ್ಮಕ ಬದಲಾವಣೆಗಳಿಂದಾಗಿ ಚುನಾವಣೆಗಳು ಮುಂದೂಡಲ್ಪಟ್ಟಿತ್ತು.
ಚುನಾಯಿತ ಪ್ರತಿನಿಧಿಗಳಿಲ್ಲದೇ ಸುದೀರ್ಘ 10 ವರ್ಷಗಳು ಸಾರ್ವಜನಿಕರು ಅನೇಕ ಸಮಸ್ಯೆ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ವರದಿಯಾಗಿದ್ದವು. ನಗರದ ಆಡಳಿತ ಅಧಿಕಾರಿಗಳ ಕೈಯಲ್ಲಿದ್ದು, ಮೂಲಭೂತ ಸೌಕರ್ಯ ಕೊರತೆಗಳ ಹಾಗೂ ಸಾರ್ವಜನಿಕ ಸಮಸ್ಯೆಗಳ ವಿಚಾರವಾಗಿ ನಾಗರೀಕರು ಬೇಸತ್ತಿದ್ದಾರೆ. ಪ್ರಸ್ತುತ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ, ಚುನಾವಣೆ ಕುರಿತಾಗಿ ಪ್ರಮುಖ ನಿರ್ದೇಶನಗಳನ್ನು ಸೂಚಿಸಿದೆ. Redmi 13 5G Hawaiian Blue 8GB RAM 128GB ROM (Without Offer)
ಚುನಾವಣಾ ಗಡುವು - ಜಿಬಿಎ ಚುನಾವಣಾ ಪ್ರಕ್ರಿಯೆಯನ್ನು ಮುಗಿಸಲು ನೀಡಿರುವ ಕಾಲಾವಕಾಶ ಜೂನ್ 30, 2026.
ಮೀಸಲಾತಿ ಅಂತಿಮ ಪಟ್ಟಿ - ವಾರ್ಡ್‌ವಾರು ಮೀಸಲಾತಿ ಅಂತಿಮ ಪಟ್ಟಿಯನ್ನು ಫೆಬ್ರವರಿ 20, 2026 ರೊಳಗೆ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚನೆ.
ಮತದಾರರ ಪಟ್ಟಿ - ಮಾರ್ಚ್ 16, 2026ರೊಳಗೆ ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗವು ಪ್ರಕಟಿಸುವುದಾಗಿ ತಿಳಿಸಿದೆ.
ಪರೀಕ್ಷೆಗಳ ನಂತರ ಚುನಾವಣೆ - ಶಾಲಾ-ಕಾಲೇಜುಗಳ ಪರೀಕ್ಷೆ ಪ್ರಕ್ರಿಯೆಗಳು ಮುಗಿದ ನಂತರ, ಮೇ 26 ರ ಬಳಿಕ ಮತದಾನ ಪ್ರಕ್ರಿಯೆ ನಡೆಯುವ ಸಾಧ್ಯತೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ವಾರ್ಡ್ ಮರುವಿಂಗಡಣೆ, ಮೀಸಲಾತಿ ಪಟ್ಟಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ವಿವಿಧ ಪ್ರಚಲಿತ ವಿದ್ಯಮಾನಗಳ ಪರಿಣಾಮ, ಬೆಂಗಳೂರು ನಾಗರಿಕ ಸಂಸ್ಥೆಗಳ ಚುನಾವಣೆ ವಿಳಂಬಗೊಂಡಿತ್ತು. ಇದೀಗ ʻನಾಗರೀಕ ಅಧಿಕಾರಕ್ಕಾಗಿ ಸಮರʼ ಸಿದ್ದತೆ ಆರಂಭಗೊಂಡಿದೆ. ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಕ್ರಿಯೆಗೆ ಕಾದುಕುಳಿತಿವೆ. ಇದನ್ನೂ ಓದಿ: ಜಿಬಿಎ ಚುನಾವಣೆಗೂ ಮುನ್ನ ಎಸ್ಐಆರ್ ಪ್ರಕ್ರಿಯೆ - ಪರಿಣಾಮವೇನು!?
ಇತರೆ ಮಹಾನಗರ ಪಾಲಿಕೆ ಚುನಾವಣೆ?
ಕರ್ನಾಟಕದಲ್ಲಿ ಈ ವರ್ಷ ಐದು ಮಹಾನಗರ ಪಾಲಿಕೆಗಳ ಚುನಾವಣೆ ಜರುಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಮೈಸೂರು, ತುಮಕೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆಗಳಲ್ಲಿ ಮತದಾರರ ಪಟ್ಟಿ ಅಂತಿಮಗೊಂಡಿದ್ದು, ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ, ಅದರಂತೆ ಇಲ್ಲವಾದಲ್ಲಿ ಹಳೆಯ ಮೀಸಲಾತಿ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದೆಂದು ಹೇಳಲಾಗಿರುವುದಾಗಿ ವರದಿಯು ತಿಳಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಚುನಾಯಿತ ಪ್ರತಿನಿಧಿಗಳಿಲ್ಲದ ಹತ್ತು ವರ್ಷ: ಹಳ್ಳ ಹಿಡಿದಿದೆಯೇ ಬೆಂಗಳೂರಿನ ಅಭಿವೃದ್ಧಿ?