Skip to main content
ವಿಡಿಯೋ
1/2
politics

ಎಂ.ಜಿ ನರೇಗಾ ಮರು ಜಾರಿಗಾಗಿ ಕಾಂಗ್ರೆಸ್‌ನಿಂದ ‘ಜನಾಂದೋಲನ’: ಅರಮನೆ ಮೈದಾನದಲ್ಲಿ ಪ್ರತಿಜ್ಞೆ..!

By Sushmitha R
 ಎಂ.ಜಿ ನರೇಗಾ ಮರು ಜಾರಿಗಾಗಿ ಕಾಂಗ್ರೆಸ್‌ನಿಂದ ‘ಜನಾಂದೋಲನ’: ಅರಮನೆ ಮೈದಾನದಲ್ಲಿ ಪ್ರತಿಜ್ಞೆ..!

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಂಗಳವಾರ ನಡೆದ ‘ನರೇಗಾ ಬಚಾವೊ ಸಂಗ್ರಾಮ’ದ ಪೂರ್ವಸಿದ್ಧತಾ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ದನಿ ಎತ್ತಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಂಗಳವಾರ ನಡೆದ ‘ನರೇಗಾ ಬಚಾವೊ ಸಂಗ್ರಾಮ’ದ ಪೂರ್ವಸಿದ್ಧತಾ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ದನಿ ಎತ್ತಿದ್ದಾರೆ. BELLAVITA Skai Aquatic EDC & Fresh EDT | Long Lasting 2x20ml Perfume for Man & Woman | Gifts for Woman | Bergamot, Ylang Ylang, Pink Pepper | Premium Fragrance

ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ (MGNREGA) ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಅದರ ಬದಲಿಗೆ ‘ವಿಬಿ ಜಿ ರಾಮ್ ಜಿ’ ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬೃಹತ್ ಜನಾಂದೋಲನ ರೂಪಿಸಲು ಕೆಪಿಸಿಸಿ ನಿರ್ಧರಿಸಿದೆ.

ಸಿದ್ದರಾಮಯ್ಯ ಅವರ ಕರೆ: ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿಯವರ ಹೆಸರಿದ್ದ ನರೇಗಾ ಕಾಯ್ದೆಯನ್ನು ರದ್ದು ಮಾಡಿರುವುದು ಖಂಡನೀಯ.

ಹೊಸ ಕಾಯ್ದೆಯಲ್ಲಿರುವ 'ರಾಮ' ದಶರಥ ರಾಮನಲ್ಲ, ಅದು ಗಾಂಧೀಜಿಯನ್ನು ಕೊಂದ ನಾಥೂರಾಮ. ಹಳೆಯ ಕಾಯ್ದೆಯಡಿ ಕಾರ್ಮಿಕರು ವರ್ಷದ 365 ದಿನಗಳ ಕಾಲ ತಮ್ಮ ಊರಿನಲ್ಲಿಯೇ ಕೆಲಸ ಪಡೆಯುವ ಹಕ್ಕನ್ನು ಹೊಂದಿದ್ದರು. ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ.ಇದನ್ನು ಓದಿ: ಚುನಾಯಿತ ಪ್ರತಿನಿಧಿಗಳಿಲ್ಲದ ಹತ್ತು ವರ್ಷ: ಹಳ್ಳ ಹಿಡಿದಿದೆಯೇ ಬೆಂಗಳೂರಿನ ಅಭಿವೃದ್ಧಿ?

ಉತ್ತರ ಭಾರತದ ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ಮಾದರಿಯಲ್ಲೇ, ನರೇಗಾ ಮರು ಜಾರಿಯಾಗುವವರೆಗೆ ನಾವು ವಿಶ್ರಮಿಸಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಡಿ.ಕೆ. ಶಿವಕುಮಾರ್ ಎಚ್ಚರಿಕೆ: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಪದಾಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದರು. ನರೇಗಾ ಬಚಾವೊ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದ ವೀಕ್ಷಕರು ಮತ್ತು ಪದಾಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಕಿತ್ತುಹಾಕಲಾಗುವುದು.ಇದನ್ನು ಓದಿ: ಸುಪ್ರೀಂ ಕೋರ್ಟ್ ಆದೇಶಾನುಸಾರ ಚುನಾವಣೆಗಳು ನಡೆಯಲಿವೆ - ಡಿಕೆಶಿ; ಮಾರ್ಚ್‌ನಲ್ಲಿ ಬಜೆಟ್ ಮಂಡನೆ - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಎಐಸಿಸಿ ಸೂಚನೆಯಂತೆ ಪ್ರತಿಯೊಂದು ಕಾರ್ಯಕ್ರಮವೂ ಕಡ್ಡಾಯವಾಗಿ ನಡೆಯಬೇಕು. ಶಾಸಕರಿಲ್ಲದ ಕ್ಷೇತ್ರಗಳಲ್ಲಿ ನಾನೇ ಖುದ್ದಾಗಿ ಪಾದಯಾತ್ರೆಯ ನೇತೃತ್ವ ವಹಿಸುತ್ತೇನೆ, ವಿಶೇಷವಾಗಿ ಶಿಕಾರಿಪುರದಲ್ಲಿ ಹೋರಾಟ ಸಂಘಟಿಸುತ್ತೇನೆ ಎಂದರು.

ಹೋರಾಟದ ಹಾದಿ: ಕಾಂಗ್ರೆಸ್ ಪಕ್ಷವು ಈ ಹೋರಾಟವನ್ನು ಹಂತ ಹಂತವಾಗಿ ಹಮ್ಮಿಕೊಂಡಿದೆ.

ಜೂನ್ 14: ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಎರಡು ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ.

ಮಾಧ್ಯಮಗೋಷ್ಠಿ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಚಿವರು ಹಾಗೂ ಮುಖಂಡರಿಂದ ಜಾಗೃತಿ.ಇದನ್ನು ಓದಿ: ಜಿಬಿಎ ಚುನಾವಣೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಎದುರಾದ ರಾಜಕೀಯ ಅಗ್ನಿಪರೀಕ್ಷೆ

ಪಾದಯಾತ್ರೆ: ಜನವರಿ 26ರಿಂದ ಫೆಬ್ರವರಿ 7ರವರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5ರಿಂದ 10 ಕಿ.ಮೀ ಪಾದಯಾತ್ರೆ.

ಸೋನಿಯಾ ಗಾಂಧಿ ಸಂದೇಶ: ಎಲ್‌ಇಡಿ ಪರದೆಗಳ ಮೂಲಕ ಗ್ರಾಮ ಮಟ್ಟದಲ್ಲಿ ಸೋನಿಯಾ ಗಾಂಧಿಯವರ ಸಂದೇಶ ಪ್ರಸಾರ.

ಮನವಿ ಸಲ್ಲಿಕೆ: ನರೇಗಾ ಮರು ಜಾರಿಗೆ ಆಗ್ರಹಿಸಿ ತಾಲ್ಲೂಕು ಕಚೇರಿಗಳಿಗೆ ಮನವಿ ಸಲ್ಲಿಸುವುದು ಹಾಗೂ ರಾಜ್ಯ ಮಟ್ಟದಲ್ಲಿ ಬೃಹತ್ ಸಮಾವೇಶ ಆಯೋಜಿಸುವುದು.ಇದನ್ನು ಓದಿ: ಹತ್ತು ವರ್ಷಗಳಿಂದ ಚುನಾವಣೆ ನಡೆಯದಿರಲು ಪ್ರಮುಖ ಕಾರಣಗಳು ಇಲ್ಲಿವೆ