Skip to main content
ವಿಡಿಯೋ
1/2
politics

369 ವಾರ್ಡ್‌ಗಳ ಮಹಾಸಮರ: ಐದು ಪಾಲಿಕೆಗಳ ಮೇಲೆ ಕಾಂಗ್ರೆಸ್ ಕಣ್ಣು..!

By Sushmitha R
369 ವಾರ್ಡ್‌ಗಳ ಮಹಾಸಮರ: ಐದು ಪಾಲಿಕೆಗಳ ಮೇಲೆ ಕಾಂಗ್ರೆಸ್ ಕಣ್ಣು..!

ಸುಪ್ರೀಂಕೋರ್ಟ್ ನೀಡಿದ ಮಹತ್ವದ ಆದೇಶದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪಾಲಿಕೆ (GBA) ಚುನಾವಣೆ ಈಗ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದೆ.

ಸುಪ್ರೀಂಕೋರ್ಟ್ ನೀಡಿದ ಮಹತ್ವದ ಆದೇಶದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪಾಲಿಕೆ (GBA) ಚುನಾವಣೆ ಈಗ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದೆ. ಈ ಆದೇಶವು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಸಮರಕ್ಕೆ ನಾಂದಿ ಹಾಡಿದ್ದು, ವಿಶೇಷವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇದೊಂದು 'ಅಗ್ನಿಪರೀಕ್ಷೆ'ಯಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರಿನ ಐದು ಪಾಲಿಕೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಬೇಕಿದೆ. ಈ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 369 ವಾರ್ಡ್‌ಗಳಿದ್ದು, ಸಿದ್ಧತೆಗಾಗಿ ಸರ್ಕಾರಕ್ಕೆ ಕೇವಲ ಐದು ತಿಂಗಳ ಕಾಲಾವಕಾಶ ಮಾತ್ರ ಲಭ್ಯವಿದೆ. ಮತದಾರರ ಅಂತಿಮ ಪಟ್ಟಿ ಪ್ರಕಟವಾದ ಆರು ವಾರಗಳೊಳಗೆ ಮತದಾನ ಪ್ರಕ್ರಿಯೆ ಮುಗಿಸಬೇಕಿರುವುದು ಸರ್ಕಾರದ ಮುಂದಿರುವ ಅತಿದೊಡ್ಡ ಸವಾಲಾಗಿದೆ.Clara 925 Pure Silver Classic Hand Bracelet | Adjustable, Anti Tarnish, Swiss Zirconia | Gift for Women and Girls

ಐದು ಪಾಲಿಕೆಗಳ ವಿಭಜನೆ:

ಬೆಂಗಳೂರು ಕೇಂದ್ರ

ಬೆಂಗಳೂರು ದಕ್ಷಿಣ

ಬೆಂಗಳೂರು ಉತ್ತರ

ಬೆಂಗಳೂರು ಪೂರ್ವ

ಬೆಂಗಳೂರು ಪಶ್ಚಿಮ

ಡಿ.ಕೆ. ಶಿವಕುಮಾರ್ ಅವರಿಗೆ ಅನಿವಾರ್ಯತೆ:

ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸುವುದು ಕಾಂಗ್ರೆಸ್ ಪಾಲಿಗೆ ಅತ್ಯಂತ ಮುಖ್ಯವಾಗಿದೆ. ಐದೂ ಪಾಲಿಕೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಡಿಕೆಶಿ ಅವರ ಮೇಲಿದೆ. ಒಂದು ವೇಳೆ ಇಲ್ಲಿ ಹಿನ್ನಡೆಯಾದರೆ, ಅದು ಅವರ ನಾಯಕತ್ವ ಮತ್ತು 'ಬ್ರಾಂಡ್ ಬೆಂಗಳೂರು' ಪರಿಕಲ್ಪನೆಗೆ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ, ಈ ಚುನಾವಣೆಯನ್ನು ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.ಇದನ್ನು ಓದಿ: ಜಿಬಿಎ ಎಲೆಕ್ಷನ್‌ - ಮತದಾನ ವಿಧಾನ ಯಾವುದು - ಬ್ಯಾಲೆಟ್‌ ಪೇಪರ್‌ vs ಇವಿಎಂ!?

ರಾಜಕೀಯ ಸಿದ್ಧತೆ:

ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮತ್ತು ವಾರ್ಡ್ ಮಟ್ಟದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸರ್ಕಾರದ 'ಗ್ಯಾರಂಟಿ' ಯೋಜನೆಗಳು ನಗರ ಪ್ರದೇಶದ ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ.

ಮತ್ತೊಂದೆಡೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ಕಾಂಗ್ರೆಸ್ ಅಶ್ವಮೇಧಕ್ಕೆ ಅಡ್ಡಿಪಡಿಸಲು ಸಜ್ಜಾಗಿದ್ದು, ಬೆಂಗಳೂರಿನ ಮತದಾರ ಯಾರಿಗೆ ಜೈ ಎನ್ನುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಇದನ್ನು ಓದಿ: ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ: ಡಿ.ಕೆ. ಶಿವಕುಮಾರ್ ಸವಾಲು..!