ರಾಜ್ಯ ಸರ್ಕಾರವು ತಿಳಿಸಿರುವಂತೆ, ಎಲ್ಲಾ ಸ್ಥಳೀಯ ಚುನಾವಣೆಗಳನ್ನು ನಡೆಸಲು ಸಿದ್ದವಾಗಿದೆ. 2021 ರಿಂದಲೂ ಮುಂದೂಡಲಾಗಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಗಳು ನಿರ್ಣಾಯಕ ಹಂತಕ್ಕೆ ತಲುಪಿದೆ. ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ನ ಆದೇಶದ ಅನುಸಾರ ನಿಗದಿಪಡಿಸಿರುವ ಕಾಲಾವಕಾಶದಲ್ಲೇ ಚುನಾವಣೆಗಳನ್ನು ಪೂರ್ಣಗೊಳಿಸಲು ಮುಂದಾಗಿದೆ.
ಒಂದು ತಿಂಗಳೊಳಗೆ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಪ್ರಕಟ ?
ಮುಂಬರಲಿರುವ ತಾಲ್ಲೂಕು ಹಾಗು ಜಿಲ್ಲಾ ಮಟ್ಟದ ಪಂಚಾಯತ್ ಚುನಾವಣೆಗಳಿಗೆ ಸಂಬಂಧಿಸಿದಂತೆ, ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿಗಳನ್ನು ಒಂದು ತಿಂಗಳ ಅವಧಿಯೊಳಗೆ ಅಂತಿಮಗೊಳಿಸಲು ಸಿದ್ದತೆ ನಡೆಸಿದೆ ಎನ್ನಲಾಗಿದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ರಾಜ್ಯ ಚುನಾವಣಾ ಆಯೋಗವು ಮತದಾನದ ವೇಳಾಪಟ್ಟಿಯನ್ನು ಪ್ರಕಟಿಸುವುದೆಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿರುವ 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಹಾಗೂ 239 ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯಬೇಕಿದೆ. ಕ್ಷೇತ್ರ ಮರುವಿಂಗಡಣೆಯಿಂದಾಗಿ, ಕ್ಷೇತ್ರಗಳ ಸಂಖ್ಯೆ ಬದಲಾಗುವ ಸಾಧ್ಯತೆ ಹೆಚ್ಚಿದ್ದು, ವಿವಿಧ ರಾಜಕೀಯ ವಿವಾದಗಳು ಹಾಗೂ ಇತರೆ ಮೀಸಲಾತಿಗೆ ಸಂಬಂಧಿಸಿದ ಬೆಳವಣಿಗೆಗಳು ಚುನಾವಣೆಗೆ ಪರಿಣಾಮ ಬೀರಿವೆ. TheGiftKart Shockproof Crystal Clear Back Cover Case for Mi Redmi 13 5G / Poco M6 Plus 5G | 360 Degree Protection | Protective Design | Transparent Back Case for Redmi 13 5G (PC & TPU, Black Bumper)
ಈ ನಡುವಲ್ಲಿ ಚುನಾವಣೆ ಕುರಿತಾಗಿ, ನಾಗರೀಕರ ನಿರೀಕ್ಷೆ ಹೆಚ್ಚಾಗಿದ್ದು, ಸರ್ಕಾರದ ಕೈಗೊಳ್ಳುವ ಕ್ರಮಗಳು ಹಾಗೂ ನಿರ್ಧಾರಗಳಲ್ಲಿ ಕೌತುಕ ಮೂಡಿಸಿದೆ. ಒಟ್ಟಾರೆ, ನಗರ ಹಾಗೂ ಗ್ರಾಮೀಣ ಭಾಗದ ಜನರು ಜನಪ್ರತಿನಿಧಿಗಳಿಲ್ಲದ, ಆಡಳಿತಾತ್ಮಕ ಕೆಲಸಗಳು, ಅಭಿವೃದ್ದಿ ಯೋಜನೆಗಳ ಕುಂಠಿತದ ಬಗ್ಗೆ ದೂರಿರುವ ಪ್ರಮೇಯ ತಮ್ಮ ಮತ ಚಲಾವಣೆ ಹಕ್ಕಿನ ಮೂಲಕ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ. ಇದನ್ನೂ ಓದಿ: ಜಿಬಿಎ ಎಲೆಕ್ಷನ್ - ಮತದಾನ ವಿಧಾನ ಯಾವುದು - ಬ್ಯಾಲೆಟ್ ಪೇಪರ್ vs ಇವಿಎಂ!?