ಇಂದು ಮಕರ ಸಂಕ್ರಾಂತಿಯ ಮೆಲುನಗೆಯ ನಡುವೆ ಭಾರತೀಯ ಸೇನಾದಿನದ ಮಹೋದಯ. ಈ ಸಂದರ್ಭದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಹೆಮ್ಮೆಯ ಭಾರತೀಯ ಸೈನಿಕರಿಗೆ ಶುಭ ಕೋರಿದ್ದಾರೆ. ದೇಶ ಸೇವೆಯಲ್ಲಿ ತೊಡಗಿರುವ ಎಲ್ಲಾ ಮಹಿಳಾ ಹಾಗೂ ಪುರುಷ ಯೋಧರಿಗೆ ನಮನಗಳನ್ನು ಸಲ್ಲಿಸಿದ್ದಾರೆ.
ಇಂದು 78 ನೇ ಭಾರತೀಯ ಸೇನಾ ದಿನವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸೇನೆಯ ಅಪ್ರತಿಮ ಸೈನಿಕರನ್ನು ಸ್ಮರಿಸಿ “ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ವೀರ ಯೋಧರಿಗೆ ಭಾರತೀಯ ಸೇನಾದಿನದ ಶುಭಾಶಯಗಳು. ಅವರ ತ್ಯಾಗ, ಶ್ರದ್ದೆ, ಧೈರ್ಯ, ದೇಶಪ್ರೇಮವನ್ನು ಗೌರವಿಸೋಣ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. OnePlus Nord CE5 | Massive 7100mAh Battery | MediaTek Dimensity 8350 Apex | Powered by OnePlus AI | 8GB + 128GB | Marble Mist
ಈವರೆಗೆ, ದೇಶಕ್ಕಾಗಿ ಮಣಿದ ಹಾಗೂ ಸೇನೆಯಲ್ಲಿದ್ದು ಅದಮ್ಯ ಧೈರ್ಯ ತೋರುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿರುವ ಎಲ್ಲಾ ಸೇನಾ ನಾಯಕರು, ನಾಯಕಿಯರಿಗೆ ವಂದಿಸಿದ್ದಾರೆ. ಇಂದು ದೇಶದ ರಕ್ಷಣೆ ಹಾಗೂ ಸಾರ್ವಭೌಮತ್ವಕ್ಕೆ ದಿಟ್ಟವಾಗಿ ನಿಂತ ಯೋಧರಿಗೆ ಸಮರ್ಪಿತವಾದ ದಿನವಾಗಿದೆ. ರಾಷ್ಟ್ರ ರಕ್ಷಣೆಗಾಗಿ ಜೀವವನ್ನೇ ಸಮಮರ್ಪಿಸುವ ಮೂಲಕ ತಮ್ಮ ಸ್ಥೈರ್ಯ ಪ್ರದರ್ಶಿಸುತ್ತಿರುವ ಭಾರತಾಂಬೆಯ ಜೀವಗಳಿಗೆ ಈ ದಿನವು ಅರ್ಪಣೆಯಾಗಲಿದೆ. ಇದನ್ನೂ ಓದಿ: ಚುನಾವಣೆಗೆ ಸುಪ್ರೀಂ ಗಡುವು - ರಾಜ್ಯ ಸರ್ಕಾರಕ್ಕೆ ಎದುರಾಗಲಿದೆಯೇ ಸತ್ವಪರೀಕ್ಷೆ!?