ರಾಹುಲ್ ಗಾಂಧಿ ಅವರು ಸ್ವತಃ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ದೆಹಲಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರೂ, ಈ ಭೇಟಿ ಯಾವಾಗ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಂದು ಕಡೆ ಸಿದ್ದರಾಮಯ್ಯ ಅವರು ಜರ್ಮನ್ ಚಾನ್ಸಲರ್ ಅವರೊಂದಿಗಿನ ಪ್ರಮುಖ ಕಾರ್ಯಕ್ರಮವನ್ನು ಕೈಬಿಟ್ಟು ಮೈಸೂರಿಗೆ ತೆರಳಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.INDIKONB Bohemian Bracelet Set for Women - 9-Piece Combo in Elegant Beige Theme - Stretchable and Stylish Jewelry
ರಾಜ್ಯ ಸರ್ಕಾರವು ತುರ್ತಾಗಿ ವಿಶೇಷ ಅಧಿವೇಶನವನ್ನು ಕರೆದಿದ್ದು, ಈ ಸಮಯದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರು ದೆಹಲಿಗೆ ತೆರಳುವುದು ಕಷ್ಟ ಸಾಧ್ಯವಾಗಿದೆ. ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ವಿದೇಶ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ ಎಂಬ ವರದಿಗಳು ಕೇಳಿಬರುತ್ತಿವೆ. ಒಂದು ವೇಳೆ ಅವರು ವಿದೇಶಕ್ಕೆ ತೆರಳಿದರೆ, ರಾಜ್ಯ ನಾಯಕರ ಭೇಟಿ ಮತ್ತಷ್ಟು ವಿಳಂಬವಾಗಲಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ತೆರೆಮರೆಯ ಕಸರತ್ತುಗಳು ನಡೆಯುತ್ತಿವೆ ಎಂಬ ವದಂತಿಗಳ ನಡುವೆ, ಹೈಕಮಾಂಡ್ ನಡೆ ನಿಗೂಢವಾಗಿದೆ. ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ವರಿಷ್ಠರ ಮನವೊಲಿಸಲು ಸಜ್ಜಾಗಿದ್ದರೂ, ಹೈಕಮಾಂಡ್‌ನಿಂದ ಯಾವುದೇ ಅಧಿಕೃತ "ಅಪಾಯಿಂಟ್ಮೆಂಟ್" ಸಿಗದಿರುವುದು ಗೊಂದಲಕ್ಕೆ ಕಾರಣವಾಗಿದೆ.ಇದನ್ನು ಓದಿ: ಭಾರತೀಯ ಸೇನಾ ದಿನ 2026: ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿಯವರ ಮೆಚ್ಚುಗೆಯ ಶುಭಾಶಯ
ಸದ್ಯದ ಪರಿಸ್ಥಿತಿಯಲ್ಲಿ ಹೈಕಮಾಂಡ್ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವ ಆತುರದಲ್ಲಿಲ್ಲ ಎನ್ನಲಾಗುತ್ತಿದೆ. ಆದರೆ, ಆಡಳಿತ ಪಕ್ಷದೊಳಗೆ ನಡೆಯುತ್ತಿರುವ ಈ ಬೆಳವಣಿಗೆಗಳು ಪ್ರತಿಪಕ್ಷಗಳಿಗೆ ಟೀಕಿಸಲು ಆಹಾರವಾಗಿವೆ. ದೆಹಲಿ ಭೇಟಿ ನಡೆದರಷ್ಟೇ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.ಇದನ್ನು ಓದಿ: ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ: 2028ರ ಚುನಾವಣೆಯವರೆಗೂ ವಿಜಯೇಂದ್ರ ಅವರೇ ಸಾರಥಿ..!