Skip to main content
ವಿಡಿಯೋ
general

ಅಬುದಾಬಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ - ಸುಸ್ಥಿರ ಇಂಧನ - ಭವಿಷ್ಯಕ್ಕಾಗಿ ಜಾಗತಿಕ ಸಹಕಾರ ಅಗತ್ಯ

By Shravanthi R
ಅಬುದಾಬಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ - ಸುಸ್ಥಿರ ಇಂಧನ - ಭವಿಷ್ಯಕ್ಕಾಗಿ ಜಾಗತಿಕ ಸಹಕಾರ ಅಗತ್ಯ

ಯುಎಇ ಯಲ್ಲಿ ನಡೆದ ಐರೆನಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅಂತರಾಷ್ಟ್ರೀಯ ಸಹಕಾರದ ಮಹತ್ವವನ್ನು ತಿಳಿಸಿದ್ದಾರೆ.

ಯುಎಇ ಯಲ್ಲಿ ನಡೆದ ಐರೆನಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅಂತರಾಷ್ಟ್ರೀಯ ಸಹಕಾರದ ಮಹತ್ವವನ್ನು ತಿಳಿಸಿದ್ದಾರೆ. 

ಯುಎಇಯ ಅಬುದಾಬಿಯಲ್ಲಿ 16 ನೇ ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಏಜೆನ್ಸಿ - IRENA ಸಭೆ ನಡೆಯಿತು. ಇಲ್ಲಿ ಭಾಗವಹಿಸಿದ ಕೇಂದ್ರ ಆಹಾರ ವಿತರಣಾ, ಗ್ರಾಹಕ ವ್ಯವಹಾರಗಳು ಹಾಗೂ ಇಂಧನ ಸಚಿವರಾದ ಪ್ರಲ್ಹಾದ್‌ ಜೋಶಿ ಅವರು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನವೀಕರಿಸಬಹುದಾದ ಇಂಧನಗಳ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಇದಕ್ಕಾಗಿ ಅಂತರಾಷ್ಟ್ರೀಯ ಸಹಕಾರದ ಅಗತ್ಯತೆಯ ಕುರಿತು ತಮ್ಮ ಬಲವಾದ ಅಭಿಪ್ರಾಯವನ್ನು ಮಂಡಿಸಿದ್ದಾರೆ. 

ಅವರ ಈ ಭೇಟಿಯು ಹಸಿರು ಇಂಧನ ವಲಯದಲ್ಲಿ ಹೂಡಿಕೆ ಹಾಗೂ ಜಾಗತಿಕ ಸಹಕಾರದ ಬಲಪಡಿಸುವಿಕೆಯನ್ನು ಆಕರ್ಷಿಸಿದೆ. ಇಲ್ಲಿ ನಡೆದಿರುವ ದುಂಡುಮೇಜಿನ ಸಭೆಯು ಇಂಧನ ಸಂಗ್ರಹಣೆ, ಹಸಿರು ಇಂಧನ ಹಾಗೂ ಹಸಿರು ಹೈಡ್ರೋಜನ್‌ ನಂತಹ ವಿಷಯಗಳ ಸಲುವಾಗಿ ಭಾರತದ ಉತ್ಪಾದಕತೆ, ಹಾಗೂ ಅವಕಾಶಗಳ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ. iQOO Z10 5G (Stellar Black, 8GB RAM, 256GB Storage) | India's Biggest Ever 7300 mAh Battery | Snapdragon 7s Gen 3 Processor | Brightest Quad Curved AMOLED Display in The Segment

ಐರೆನಾ (IRENA) ದ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಇಂಧನ ಪರಿವರ್ತನೆಯು ಎಲ್ಲರನ್ನೂ ಒಳಗೊಳ್ಳುವ ಸಮಾನತೆಯ ಅಭಿವೃದ್ದಿಯ ಗುರಿಯಾಗಿದೆ ಎಂದಿದ್ದಾರೆ. 2030 ರ ವೇಳೆಗೆ ಭಾರತಕ್ಕೆ 300 ಯುಎಸ್‌  ಬಿಲಿಯನ್‌ ಡಾಲರ್‌ ಅಗತ್ಯವಿದೆ ಎಂದಿದ್ದು, ಶುದ್ದ ಇಂಧನಕ್ಕಾಗಿ ಸರ್ಕಾರವು ತೆಗೆದುಕೊಳ್ಳಲಿರುವ ವಿವಿಧ ಉಪಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಎಲ್ಲಾ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸಿದ್ದವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನಾ ದಿನ 2026: ಕೇಂದ್ರ ಇಂಧನ ಸಚಿವ ಪ್ರಲ್ಹಾದ್‌ ಜೋಶಿಯವರ ಮೆಚ್ಚುಗೆಯ ಶುಭಾಶಯ